Fri. Nov 1st, 2024

ದೇವೇಗೌಡರ ಕುಟುಂಬಕ್ಕೆ ವಿಷ ಇಟ್ಟವರ ಜೊತೆ ವೇದಿಕೆ ಮೇಲೆ ಕೂರಲ್ಲ:ಹೆಚ್ ಡಿ.ಕೆ

Share this with Friends

ನವದೆಹಲಿ,ಜು.31: ದೇವೇಗೌಡರ ಕುಟುಂಬ ನಾಶ ಮಾಡಲು ಹೊರಟ ಪ್ರೀತಂಗೌಡನನ್ನು ಸಭೆಯಲ್ಲಿ ಕೂರಿಸಿಕೊಂಡು, ನನ್ನನ್ನ ಸಭೆಗೆ ಕರೆಯುತ್ತೀರಾ‌ ಎಂದು ‌ಕೇಂದ್ರ ಸಚಿವ‌‌ ಹೆಚ್.ಡಿ.ಕುಮಾರಸ್ವಾಮಿ ಗರಂ ಆಗಿ ಹೇಳಿದ್ದಾರೆ.

ಪೆನ್ ಡ್ರೈವ್ ಹಂಚಿದೋರು ಯಾರು ಅಂಥ ಗೊತ್ತಿಲ್ವಾ, ಚುನಾವಣಾ ಮೈತ್ರಿಯೇ ಬೇರೆ, ರಾಜಕೀಯವೇ ಬೇರೆ ಎಂದು ಹೇಳಿ ಬಿಜೆಪಿಗೆ ಸೆಡ್ಡು ಹೊಡೆದಿದ್ದಾರೆ.

ದೆಹಲಿಯಲ್ಲಿ‌ ಮಾಧ್ಯಮದವರೊಂದಿಗೆ ಈ ಬಗ್ಗೆ ಮಾತನಾಡಿದ ಅವರು, ಬಿಜೆಪಿ ಪಾದಯಾತ್ರೆಯಲ್ಲಿ ಭಾಗಿಯಾಗಬಾರದೆಂದು ಜೆ‌.ಟಿ ದೇವೇಗೌಡರ ನೇತೃತ್ವದಲ್ಲಿ ಕೋರ್ ಕಮಿಟಿ ಸದಸ್ಯರು ನಿರ್ಧಾರ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ನನ್ನ ಮನಸ್ಸಿಗೆ ನೋವಾಗಿದೆ,ಯಾವ ಕಾರಣಕ್ಕಾಗಿ ನಾವು ಬೆಂಬಲ ಕೊಡಬೇಕು, ಪ್ರೀತಂಗೌಡ ಯಾರು,ಪೆನ್ ಡ್ರೈವ್ ಹಂಚಿಕೆಗೆ ಯಾರು ಕಾರಣ ಅನ್ನೋದು ಗೊತ್ತಿದೆ, ದೇವೇಗೌಡರ ಕುಟುಂಬಕ್ಕೆ ವಿಷ ಇಟ್ಟುವನು ಆತ,ಅಂತವರ ಜೊತೆ ವೇದಿಕೆ ಮೇಲೆ ಕೂರಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧವೇ‌ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಬಿಜೆಪಿ ತನ್ನ ನಿಲುವಿನಲ್ಲಿ ತಿರ್ಮಾನ ತೆಗೆದುಕೊಂಡು ಹೋರಾಟ ಮಾಡುತ್ತಿದ್ದಾರೆ. ಪಾದಯಾತ್ರೆಗೆ ಸೂಕ್ತವಾದ ಸಂದರ್ಭವಲ್ಲ ಅನ್ನೋ ಕಾರಣಕ್ಕೆ ನಾವು ಹಿಂದೆ ಸರಿದಿದ್ದೇವೆ ಎಂದು ‌ಹೇಳಿದರು.

ಜನರಿಂದ ಟೀಕೆ ವ್ಯಕ್ತವಾಗುವ ಸಾಧ್ಯತೆ ಇದೆ. ಈ ಹಿನ್ನಲೆ ನಾವು ಪಾದಯಾತ್ರೆಯಿಂದ ಹಿಂದೆ ಸರಿದಿದ್ದೇವೆ. ಪಾದಯಾತ್ರೆಯಿಂದ ಏನು ಲಾಭವಾಗಲಿದೆ ಕಾನೂನು ಹೋರಾಟ ಕೂಡಾ ಮುಖ್ಯವಲ್ಲವೆ ಎಂದರು.

ರಾಜಕೀಯವೇ ನಮಗೆ ಪ್ರಾಮುಖವಲ್ಲ, ನಾವು ನೈತಿಕ ಬೆಂಬಲವನ್ನೂ ಕೊಡುವುದಿಲ್ಲಾ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದಾಗ ಯಾಕೆ ಬೆಂಬಲ ಕೊಡಬೇಕು?ಅದರ ಅಗತ್ಯವಿಲ್ಲ ಎಂದು ಕಾರವಾಗಿ‌ ಹೇಳಿದರು.

ನನ್ನ ಮನಸ್ಸಿಗೆ ನೋವಾಗಿದೆ,ಯಾವ ಕಾರಣಕ್ಕಾಗಿ ನಾವು ಬೆಂಬಲ ಕೊಡಬೇಕು, ಪ್ರೀತಂಗೌಡ ಯಾರು,ಪೆನ್ ಡ್ರೈವ್ ಹಂಚಿಕೆಗೆ ಯಾರು ಕಾರಣ ಅನ್ನೋದು ಗೊತ್ತಿದೆ, ದೇವೇಗೌಡರ ಕುಟುಂಬಕ್ಕೆ ವಿಷ ಇಟ್ಟುವನು ಆತ. ಅಂತವರ ಜೊತೆ ವೇದಿಕೆ ಮೇಲೆ ಕೂರಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧವೇ‌ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಕೇರಳದಲ್ಲಿ ಜೀವ ಹಾನಿಯಾಗಿದೆ. ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ರೆಡ್ ಅರ್ಲಟ್ ಘೋಷಿಸಲಾಗಿದೆ. ಕೊಡಗು ಕೂಡ ಜಲಾವೃತವಾಗಿದೆ. ಮಂಡ್ಯ ಭಾಗದಲ್ಲಿ ನದಿ ನೀರು ಬಿಟ್ಟಿದ್ದಾರೆ. ರೈತರು ಕೃಷಿ ಕೆಲಸ ಶುರು ಮಾಡಲಿದ್ದಾರೆ ಹಾಗಾಗಿ ಪಾದಯಾತ್ರೆಗೆ ಇದು ಸೂಕ್ತ ಸಂದರ್ಭವೇ ಅಲ್ಲಾ,ಬಿಜೆಪಿಯವರು ತಾವೇ‌ ನಿರ್ಧಾರ‌ ಮಾಡಿಕೊಂಡು‌ ಕೇವಲ ಮಾಹಿತಿಗೋಸ್ಕರ‌ ನಮಗೆ‌‌ ವಿಷಯ‌ ತಿಳಿಸಿದ್ದಾರೆ,ಹಾಗಾಗಿ ಈ‌ ಪಾದಯಾತ್ರೆಗೆ ನಮ್ಮ ಬೆಂಬಲ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದರು.


Share this with Friends

Related Post