Mon. Dec 23rd, 2024

ಕಾಂಗ್ರೆಸ್ ಜತೆ ಹೋಗಿಲ್ಲ;ಎನ್ ಡಿಎ ಅಭ್ಯರ್ಥಿ ಪರ ಕೆಲಸ:ಪ್ರೀತಂಗೌಡ ಸ್ಪಷ್ಟ ನುಡಿ

Share this with Friends

ಮೈಸೂರು,ಏ.8: ನಮ್ಮ ಯಾವ ಬೆಂಬಲಿಗರು ಕಾಂಗ್ರೆಸ್ ಜತೆ ಹೋಗಿಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಸ್ಪಷ್ಟಪಡಿಸಿದರು.

ನಗರದಲ್ಲಿಂದು ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು,ಈಗ ಹೋಗಿರುವ ಒಬ್ಬ ಬೂತ್ ಅಧ್ಯಕ್ಷ ಕೂಡ ಅಲ್ಲ, ಪಾಂಪ್ಲೆಟ್ ಪಡೆದ ಕೂಡಲೇ ಕಾಂಗ್ರೆಸ್ ಸೇರಿದಂತೆ ಆಗೋದಿಲ್ಲ, ನಾವೇ ಕಾಂಗ್ರೆಸ್ ನವರನ್ನು ಇಲ್ಲಿಗೆ ಕರೆದುಕೊಂಡು ಬರುವ ಪ್ರಯತ್ನ ಮಾಡುತ್ತಿದ್ದೇವೆ, ಹಾಗಿರುವಾಗ ಇಲ್ಲಿಂದ ಅಲ್ಲಿಗೆ ಹೋಗುತ್ತೀವಾ ಎಂದು ಮಾಧ್ಯಮದವರನ್ನೇ ಕೇಳಿದರು.

ಹೊಳೆ ನರಸೀಪುರಕ್ಕಿಂತ ಒಂದು ಮತ ಹೆಚ್ಚು ಲೀಡ್ ಹಾಸನದಲ್ಲಿ ಬರುತ್ತದೆ ಇದಕ್ಕಿಂತ ಇನೇನ್ನು ಹೇಳಬೇಕು ಎಂದು ತಮ್ಮ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ನಡುವೆ ಯಾವುದೇ ಮುಸುಕಿನ ಗುದ್ದಾಟವಿಲ್ಲ ಎಂದು ಪರೋಕ್ಷವಾಗಿ ಪ್ರೀತಂಗೌಡ ಸಮರ್ಥಿಸಿಕೊಂಡರು.

ನರಸೀಪುರದಲ್ಲಿ ಶಾಸಕರು ಯಾರು, ಅಭ್ಯರ್ಥಿಯ ತಂದೇನೆ ಅಲ್ವ, ಅವರಿಗಿಂತ ಹೆಚ್ಚು ಲೀಡ್ ಹಾಸನದಲ್ಲಿ ಬರುತ್ತೆ ಎಂದು ಸ್ಪಷ್ಟನೆ ನೀಡಿದರು.

ನಾನು ಇಂದು ರಾತ್ರಿ ಹಬ್ಬಕ್ಕೆ ಹಾಸನಕ್ಕೆ ಹೋಗುತ್ತೇನೆ,ನಮ್ಮ ಕಾರ್ಯಕರ್ತರ ಪ್ರತ್ಯೇಕ ಸಭೆಯ ಅಗತ್ಯ ಏನು ಇಲ್ಲ, 2ನೇ ತಾರೀಕು ಸಭೆ ಮಾಡಿ ಕೆಲಸ ಮಾಡಲು ಹೇಳಿದ್ದೇನೆ. ಎಲ್ಲರೂ ಎನ್ ಡಿ ಎ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ, ಪದೇ ಪದೆ ಎಲ್ಲಾ ಊಹಾಪೋಹಗಳಿಗೆ ಉತ್ತರ ಕೊಡಲು ಆಗುವುದಿಲ್ಲ, ಎನ್.ಡಿ.ಎ ಅಭ್ಯರ್ಥಿ ಪರ ಕೆಲಸ ಮಾಡುತ್ತೇವೆ ಎಲ್ಲರನ್ನೂ ಗೆಲ್ಲಿಸುತ್ತೇವೆ ಎಂದು ಪ್ರೀತಂಗೌಡ ಸ್ಪಷ್ಟ ನುಡಿಯಲ್ಲಿ ತಿಳಿಸಿದರು.


Share this with Friends

Related Post