ಮೈಸೂರು,ಜೂ.25: ಶೇ.50-50 ಅನುಪಾತದಲ್ಲಿ ನಿವೇಶನ ಹಂಚಿಕೆಯಲ್ಲಿ ನಿಯಮಗಳು ಉಲ್ಲಂಘನೆ ಆರೋಪ ಹಿನ್ನಲೆ ಯಲ್ಲಿ ಹಂಚಿಕೆಯನ್ನ ಸ್ಥಗಿತಗೊಳಿಸುವಂತೆ ಮುಡಾ ಆಯುಕ್ತರಿಗೆ ಅಧ್ಯಕ್ಷರು ನೋಟೀಸ್ ನೀಡಿದ್ದಾರೆ.
ಶೇ.50-50 ರ ಅನುಪಾತದಲ್ಲಿ ಭೂಮಾಲೀಕರಿಗೆ ನಿವೇಶನಗಳನ್ನ ಹಂಚಿಕೆ ಮಾಡುತ್ತಿರುವ ವಿಚಾರದಲ್ಲಿ ಕಾನೂನುಗಳನ್ನ ಉಲ್ಲಂಘಿಸಲಾಗಿದೆ ಎಂಬ ದೂರು ಬಂದ ಹಿನ್ನಲೆಯಲ್ಲಿ ಮುಡಾ ಅಧ್ಯಕ್ಷರು ನಿರ್ಧಾರ ಕೈಗೊಂಡಿದ್ದಾರೆ.
2021 ನೆ ಸಾಲಿನಿಂದ ಹಂಚಿಕೆ ಮಾಡಿರುವ 50-50 ಅನುಪಾತದ ನಿವೇಶನಗಳ ಸಂಪೂರ್ಣ ವಿವರಣೆಯನ್ನ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯುವಂತೆ ಸೂಚಿಸಿದ್ದಾರೆ.
ಈ ಸಂಬಂಧ ಸ್ವೀಕರಿಸಲಾಗಿರುವ ಹಾಗೂ ಸ್ವೀಕರಿಸುವ ಅರ್ಜಿಗಳನ್ನ ವಿಶೇಷ ಭೂಸ್ವಾಧೀನ ಅಧಿಕಾರಿಗಳು,ತಾಂತ್ರಿಕ ಶಾಖೆಯ ಅಭಿಯಂತರರು ಹಾಗೂ ಸರ್ವೆಯರ್ ಕೂಲಂಕುಶವಾಗಿ ಪರಿಶೀಲಿಸಿ ನಿಖರ ಮಾಹಿತಿಯೊಂದಿಗೆ ಪ್ರಾಧಿಕಾರದ ಸಭೆಯಲ್ಲಿ ಮಂಡಿಸಿ,ಸಭೆಯು ಕೈಗೊಂಡ ನಿರ್ಧಾರವನ್ನ ಸರ್ಕಾರದ ಅನುಮೋಧನೆಗೆ ಕಳುಹಿಸಿ ಅನುಮೋಧನೆ ಪಡೆದು ಕ್ರಮವಹಿಸುವಂತೆ ಸೂಚಿಸಿದ್ದಾರೆ.