ಬೆಂಗಳೂರು,ಜು.16: ಈ ಕತ್ತೆ ಅನ್ನೋ ಪದ ಇದಿಯಲ್ಲಾ ಸಾಮಾನ್ಯವಾಗಿ ಎಲ್ಲರೂ ಬಯ್ಯೋದಕ್ಕೆ ಬಳಸುವ ಶಬ್ದ…
ಆದರೆ ಕತ್ತೆ ಒಂದು ಪಾಪದ ಪ್ರಾಣಿ ಅಂತಾ ಯಾರಿಗೂ ಅನ್ನಿಸೋದೇ ಇಲ್ಲಾ, ಸದಾ ಕತ್ತು ಬಗ್ಗಿಸಿಕೊಂಡು ದುಡಿಯೋದು,
ಮಾಲೀಕನಿಂದ ಒದೆ ತಿನ್ನೋದು ಇದರ ಗುಣ.
ಕತ್ತೆ ತರ ದುಡೀತಾರೆ ಅಂತಾ ಹೇಳೋರೂ ಇದಾರೆ. ಕತ್ತೆ ಅಂದರೆ ದುಡಿಯೊದಕ್ಕಷ್ಟೆ ಎಂಬಂತಾಗಿಬಿಟ್ಟಿದೆ ಈ ಪಾಪದ ಪ್ರಾಣಿಯ ಸ್ಥಿತಿ.
ಇಷ್ಟೆಲ್ಲಾ ಯಾಕೆ ಕತ್ತೆ ಬಗ್ಗೆ ಬರೆದಿದಾರೆ ಅಂತೀರಾ ಅದಕ್ಕೂ ಮುಖ್ಯವಾದ ಕಾರಣ ಇದೆ.ಸಾಮಾನ್ಯವಾಗಿ ತೀರ್ಥ ಕ್ಷೇತ್ರಗಳಲ್ಲೂ ಕತ್ತೆಗಳ ಬಳಕೆ ಬಹಳಷ್ಟಿದೆ.
ಬದರಿನಾಥ, ಕೇದಾರನಾಥ, ಸೇರಿದಂತೆ ಅನೇಕ ಪುಣ್ಯ ಕ್ಷೇತ್ರಗಳಲ್ಲಿ ಮನುಷ್ಯರಿಗೆ ಈ ಕತ್ತೆಯೇ ಆಧಾರ.
ಆದರೆ ಪುಣ್ಯಕ್ಷೇತ್ರ ಗಳಿಗೆ ಹೋಗುವವರು ಹೀಗೆ ಕತ್ತೆ ಮೇಲೆ ಮಣಭಾರ ಹೇರಿ ದೇವರ ದರ್ಶನ ಮಾಡುವುದು ಎಷ್ಟು ಸರಿ.ಆ ಕತ್ತೆ ಕತ್ತು ಬಗ್ಗಿಸಿಕೊಂಡು ಅಷ್ಟೂ ಭಾರ ಹೊತ್ತು ಅನಿವಾರ್ಯವಾಗಿ ಸಾಗುತ್ತೆ.
ಕೆಲವು ಕಡೆ ಮಹಿಳೆಯರು, ವೃದ್ಧರು ಕೂಡಾ ಕತ್ತೆಗಳ ಮೇಲೆ ಸಾಮಾನುಗಳನ್ನು ಹೇರಿ ತಾವೂ ಕುಳಿತು ಹೋಗುತ್ತಾರೆ.ಈ ರೀತಿಯೂ ಪುಣ್ಯಕ್ಷೇತ್ರ ದರ್ಶನ ಮಾಡಬೇಕೆ?
ಆ ಕತ್ತೆಗೆ ಅದೆಷ್ಟು ನೋವಾಗಿರುತ್ತದೊ ಇದರಿಂದ ಖಂಡಿತಾ ಪುಣ್ಯ ಬರುವುದಿಲ್ಲಾ ಪಾಪವೇ ಜಾಸ್ತಿಯಾಗುತ್ತದೆ.
ಹೀಗೆಲ್ಲಾ ಮೂಕ ಪ್ರಾಣಿಗೆ ಕಷ್ಟ ಕೊಟ್ಟು ನೀವು ದೇವರ ದರ್ಶನ ಪಡೆದರೆ ಆ ದೇವ ಮೆಚ್ಚಿಯಾನೆ,ಖಂಡಿತಾ ಇಲ್ಲಾ.
ನಿಮ್ಮ ಕೈನಲ್ಲಿ ಆಗದ ಮೇಲೆ ಮನೆಯಲ್ಲೇ ಇದ್ದುಕೊಂಡು ಇರುವಲ್ಲಿಂದಲೇ ದೇವರ ನೆನೆದರೆ ಅದೇ ಸಾಕು, ಸಾಕಷ್ಟು ಪುಣ್ಯ ಬರುತ್ತದೆ, ಅದು ಬಿಟ್ಟು ಹೀಗೆ ಮೂಕ ಪ್ರಾಣಿಗಳಿಗೆ ತೊಂದರೆ ಕೊಡಬಾರದು ಎಂಬುದೇ ನಮ್ಮ ಕಳಕಳಿಯ ಮನವಿ.