ಮೈಸೂರು,ಜು.22: ಸಾಂಸ್ಕೃತಿಕ ನಗರಿಯ ಹಳೆಯ ಚಿತ್ರಮಂದಿರಗಳಲ್ಲಿ ಒಂದಾದ ಒಲಂಪಿಯ ಚಿತ್ರಮಂದಿರದ ಕಟ್ಟಡ ಕುಸಿದಿದ್ದು,ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಚಿತ್ರಮಂದಿರದ ಹಿಂಬಾಗದ ಗೋಡೆ ಶಿಥಿಲಗೊಂಡಿದ್ದರಿಂದ ಸತತ ಮಳೆಗೆ ಕುಸಿದುಬಿದ್ದಿದೆ.
ಕಟ್ಟಡದ ಸಮೀಪ ಇದ್ದ ಇಬ್ಬರು ವ್ಯಕ್ತಿಗಳಿಗೆ ಗಾಯವಾಗಿದ್ದು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಒಲಂಪಿಯ ಚಿತ್ರಮಂದಿರ ನಗರದಲ್ಲಿ ಪ್ರಸಿದ್ದವಾಗಿತ್ತು, ಪ್ರದರ್ಶನ ಸ್ಥಗಿತವಾಗಿ ಹಲವು ವರ್ಷಗಳಾಗಿದೆ.
ಕಟ್ಟಡದ ಬಗ್ಗೆ ನ್ಯಾಯಾಲಯದಲ್ಲಿ ವಿವಾದವಿದೆ ಎಂದು ತಿಳಿದು ಬಂದಿದ್ದು ಕಾಮಗಾರಿ ನಡೆಸಲು ಯತ್ನಿಸಿದ್ದರೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಕಟ್ಟಡದ ಬಳಿ ಕೆಲವರು ಬೀದಿ ಬದಿ ವ್ಯಾಪಾರ ಮಾಡುತ್ತಿದ್ದು ಅದೃಷ್ಟವಶಾತ್ ಯಾರಿಗೂ ಏನೂ ಆಗಿಲ್ಲ.
ಸ್ಥಳಕ್ಕೆ ಪಾಲಿಕೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಕುಸಿದ ಕಟ್ಟಡದ ಅವಶೇಷಗಳನ್ನ ತೆರುವುಗೊಳಿಸುತ್ತಿದ್ದಾರೆ.
ದೇವರಾಜ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.