Tue. Dec 24th, 2024

ಲೋಕಸಭೆ ಸಭಾಧ್ಯಕ್ಷರಾಗಿ ಓಂ ಬಿರ್ಲಾ ಆಯ್ಕೆ

Share this with Friends

ನವದೆಹಲಿ,ಜೂ.26: 18ನೇ ಲೋಕಸಭೆಯ ಸಭಾಧ್ಯಕ್ಷರಾಗಿ 2 ನೇ ಬಾರಿಗೆ ಓಂ ಬಿರ್ಲಾ ಆಯ್ಕೆಯಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಓಂ ಬಿರ್ಲಾ ಅವರ ಹೆಸರನ್ನು ಪ್ರಸ್ತಾಪಿಸಿದರು. ನಂತರ ಪ್ರಧಾನಿ ಮೋದಿ ಮತ್ತು ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಓಂ ಬಿರ್ಲಾ ಅವರನ್ನು ಸ್ಪೀಕರ್‌ ಕುಳಿತುಕೊಳ್ಳುವ ಆಸನದ ಬಳಿ ಕರೆದೊಯ್ದರು.

ಈ ವೇಳೆ ಮೋದಿಯವರು, ನೀವು ಎರಡನೇ ಬಾರಿಗೆ ಈ ಸ್ಥಾನವನ್ನು ಅಲಂಕರಿಸಿರುವುದು ಸದನದ ಸೌಭಾಗ್ಯ, ನಾನು ನಿಮ್ಮನ್ನು ಮತ್ತು ಇಡೀ ಸದನವನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.

ಸ್ವಾತಂತ್ರ್ಯದ ನಂತರ, ಲೋಕಸಭೆಯ ಸ್ಪೀಕರ್ ಮತ್ತು ಉಪಸಭಾಪತಿಯನ್ನು ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಒಮ್ಮತದ ಮೂಲಕ ಆಯ್ಕೆ ಮಾಡಲಾಗುತಿತ್ತು.

ಆದರೆ ಈ ಬಾರಿ ಇಂಡಿಯಾ ಬಣ ಅಭ್ಯರ್ಥಿ ಘೋಷಣೆಯ ನಂತರ ಚುನಾವಣೆ ನಡೆದಿದೆ. ಈ ಹಿಂದೆ 1952 ಮತ್ತು 1976ರಲ್ಲಿ ಲೋಕಸಭಾ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆದಿದ್ದನ್ನು ಸ್ಮರಿಸಬಹುದು.


Share this with Friends

Related Post