Tue. Dec 24th, 2024

ಜೂನ್ 6ರಂದು ಶ್ರೀ ಶನೇಶ್ಚರಸ್ವಾಮಿ ಜಯಂತಿ ಮಹೋತ್ಸವ

Share this with Friends

ಮೈಸೂರು, ಜೂ.3: ಮೈಸೂರಿನ ‌ಅಗ್ರಹಾರ,ಕೆ.ಆರ್.ಪೊಲೀಸ್ ಠಾಣೆ ಪಕ್ಕದಲ್ಲಿರುವ ಶ್ರೀ ಮಹಾ ಗಣಪತಿ ದೇವಸ್ಥಾನದ ಆವರಣದಲ್ಲಿ ಜೂನ್ 6 ರಂದು ಶ್ರೀ‌ ಶನೇಶ್ಚರ‌ಸ್ವಾಮಿ ಜಯಂತಿ ಮಹೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.

ಇದೇ ಗುರುವಾರ ಅಮಾವಾಸ್ಯೆ ಕೂಡಾ ಇದ್ದು,ಅಂದು ಉದಯ‌ ಲಗ್ನದಲ್ಲಿ ಪ್ರಾತಃಕಾಲ 6 ಗಂಟೆಯಿಂದ ರುದ್ರಾಭಿಷೇಕ,ತೈಲಾಭಿಷೇಕ,ಗಣಪತಿ ಪೂಜೆ,ಹೋಮ,ನವಗ್ರಹ ಶಾಂತಿ ಹೋಮ,ಶನೇಶ್ಚರ ತಿಲಾ ಹೋಮ ಮತ್ತು ಮೃತ್ಯುಂಜಯ ಹೋಮ ಹಮ್ಮಿಕೊಳ್ಳಲಾಗಿದೆ ಎಂದು ಶಿವಾರ್ಚಕರಾದ ಎಸ್.ಯೋಗಾನಂದ ಅವರು ತಿಳಿಸಿದ್ದಾರೆ.

ನಂತರ 9ರಿಂದ 11.30 ಗಂಟೆವರೆಗೆ ಪೂರ್ಣಾಹುತಿ 12 ಗಂಟೆಗೆ ಮಹಾಮಂಗಳಾರತಿ ಇದೆ.ಆನಂತರ ಅನ್ನ ಸಂತರ್ಪಣೆ ಮಾಡಲಾಗುತ್ತದೆ.

ಸಂಜೆ 7 ಗಂಟೆಗೆ ಭಕ್ತಿ ಗೀತೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಈ ಎಲ್ಲಾ ಕಾರ್ಯಕ್ರಮ ಗಳಲ್ಲೂ‌ ಸದ್ಭಕ್ತರು ಪಾಲ್ಗೊಳ್ಳಬೇಕೆಂದು ಶಿವಾರ್ಚಕರಾದ ಎಸ್.ಯೋಗಾನಂದ ಅವರು ಮನವಿ ಮಾಡಿದ್ದಾರೆ.


Share this with Friends

Related Post