ಮೈಸೂರು, ಏ.23: ಶ್ರೀ ರಾಮನವಮಿ ಪ್ರಯುಕ್ತ ಮೈಸೂರಿನ ಸಿದ್ದಾರ್ಥ ನಗರದ ಪಂಚವಟಿ ಶ್ರೀ ಸೀತಾರಾಮ ದೇವಾಲಯದಲ್ಲಿ ಇಂದು ಡಾ ನರಸಿಂಹನ್ ಅವರಿಂದ ಪ್ರವಚನ ಏರ್ಪಡಿಸಲಾಗಿತ್ತು.
ಮಂಡ್ಯ ಪಿ ಇ ಎಸ್ ಕಾಲೇಜಿನ ಪ್ರಾಧ್ಯಾಪಕರಾದ ಡಾ.ನರಸಿಂಹನ್ ಅವರು ಶ್ರೀ ರಾಮಗುಣನಾಮ ಎಂಬ ವಿಷಯದ ಕುರಿತು ಪ್ರವಚನವನ್ನು ಇಂದೂ ಕೂಡಾ ಮುಂದುವರಿಸಿದರು.
ರಾಮನಲ್ಲಿ ಸೌಶೀಲ್ಯ ಗುಣ ನೋಡಬಹುದು
ರಾಮನಲ್ಲಿ ಮಾತ್ರ ನಾವು ಈ ಗುಣವನ್ನು ಕಾಣಬಹುದು ಎಂದು ಅದನ್ನು ಉದಾಹರಣೆ ಸಹಿತ ನಿನ್ನೆ ಅವರು ವಿವರಿಸಿದ್ದರು.
ರಾಮಾಯಣದ ಕತೆಯಲ್ಲಿನ ಪಾತ್ರಗಳನ್ನು ಡಾ ನರಸಿಂಹನ್ ವಿವರವಾಗಿ ತಿಳಿಸಿ ರಾಮ ಹೇಗೆಲ್ಲಾ ಗುಣವಂತ ಎಂಬುದನ್ನು ತಿಳಿಸಿಕೊಟ್ಟರು.
ರಾಮ ಆತ್ಮದ್ಯುತಿಮನ್,ಅನುಸೂಯಕಹ ಅಂದರೆ ಹೇಗೆ ಆತ್ಮ ನಿಗ್ರಹ ಮಾಡುತ್ತಿದ್ದ,ಎಂತಹ ಸ್ಥಿತಪ್ರಜ್ಞ,ಕಷ್ಟ ಬರಲಿ,ಸುಖ ಬರಲಿ ಎಲ್ಲವನ್ನೂ ಸಮಚಿತ್ತನಾಗಿ ರಾಮ ತೆಗೆದುಕೊಳ್ಳುತ್ತಿದ್ದ ಎಂದು ಪಟ್ಟಾಭಿಷೇಕ, ಮತ್ತು ಅದು ನಿಂತು ಹೋಗಿ ಕಾಡಿಗೆ ಹೋಗಬೇಕಾದ ಪ್ರಸಂಗ ಎಲ್ಲವನ್ನೂ ನರಸಿಂಹನ್ ತಿಳಿಸಿದರು.
ಕಾರ್ಯಕ್ರಮ ನಡೆಸಿಕೊಟ್ಟ ಎಲ್ಲರಿಗೂ ಹಾಗೂ ಸೇವಾರ್ಥದಾರರಿಗೂ ದೇವಾಲಯದ ಧರ್ಮದರ್ಶಿ ಗಿಣಿಸ್ವಾಮಿ ಅವರು ಧನ್ಯವಾದ ಸಲ್ಲಿಸಿದರು.
ನಂತರ ಶ್ರೀರಾಮಚಂದ್ರನ ಸನ್ನಿಧಿಯಲ್ಲಿ ಅರ್ಚನೆ,ಮಹಾ ಮಂಗಳಾರತಿ ಮಾಡಿ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.