Mon. Dec 23rd, 2024

ಒಂದು ರಾಷ್ಟ್ರ ಒಂದು ಚುನಾವಣೆಯಿಂದ ದೇಶದ ಪ್ರಗತಿ ಸಾಧ್ಯ:ಜೋಗಿ ಮಂಜು

Share this with Friends

ಮೈಸೂರು: ಒಂದು ರಾಷ್ಟ್ರ ಒಂದು ಚುನಾವಣೆಯಿಂದ ನಮ್ಮ ದೇಶದ ಆರ್ಥಿಕ ಪ್ರಗತಿ ಸಾಧ್ಯ ಎಂದು ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷ ಜೋಗಿ ಮಂಜು ತಿಳಿಸಿದ್ದಾರೆ.

ಒಂದು ರಾಷ್ಟ್ರ ಒಂದು ಚುನಾವಣೆಯಿಂದ ಭಾರತದಲ್ಲಿ ಲೋಕಸಭೆ ಹಾಗೂ ವಿಧಾನ ಸಭೆ ಚುನಾವಣೆಯು ಏಕಕಾಲದಲ್ಲಿ ನಡೆಯುವುದರಿಂದ ಪ್ರಜಾಪ್ರಭುತ್ವ ಗಟ್ಟಿಗೊಳ್ಳಲಿದೆ ಹಾಗೂ ಚುನಾವಣಾ ವೆಚ್ಚದಲ್ಲಿ ಬಾರಿ ಇಳಿಕೆಯಾಗಲಿದೆ ಜತೆಗೆ ಸಮಯ ಉಳಿತಾಯವಾಗಲಿದೆ ಆಂತರಿಕವಾಗಿ ಪ್ರಜಾಪ್ರಭುತ್ವಕ್ಕೆ ಜಯ ಸಿಗಲಿದೆ ಎಂದು ಹೇಳಿದ್ದಾರೆ.

ಗ್ರಾಮ ಪಂಚಾಯತಿಯಿಂದ ಲೋಕಸಭಾ ಚುನಾವಣಾ ಯವರೆಗೂ ಒಟ್ಟೊಟ್ಟಿಗೆ ನಡೆಯುವುದು ಇದು ಐತಿಹಾಸಿಕ ನಿಲುವುವಾಗಿದೆ, ಇದು ಪ್ರಜಾಪ್ರಭುತ್ವ ದ ಗೆಲುವಾಗಿದೆ ಎಂದು ಜೋಗಿ ಮಂಜು ಹೇಳಿದ್ದಾರೆ.

ವಿರೋಧ ಪಕ್ಷಗಳು ಒಂದು ದೇಶ ಒಂದು‌ ಚುನಾವಣೆಯನ್ನು ವಿರೋಧ ಮಾಡುವುದನ್ನು ಬಿಟ್ಟು ಇದಕ್ಕೆ ಸಹಕಾರ ನೀಡಬೇಕೆಂದು ಕೋರಿದ್ದಾರೆ.


Share this with Friends

Related Post