Mon. Dec 23rd, 2024

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆನ್ಲೈನ್ ನೋಂದಣಿ ಪ್ರಾರಂಭ

Share this with Friends

ಬೆಂಗಳೂರು ಫೆ.23: ಪ್ರತಿಷ್ಟಿತ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಫೆ.29ರಿಂದ ಮಾ.7ರ ವರೆಗೆ ನಡೆಯಲಿದ್ದು‌ ಇದನ್ನು ಕಣ್ ತುಂಬಿಕೊಳ್ಳಲು ಸಿನಿಪ್ರಿಯರು ಕಾಯುತ್ತಿದ್ದಾರೆ.

ಸಿನಿಪ್ರಿಯರ ಪಾಲಿಗೆ ಚಲನ‌ಚಿತ್ರೋತ್ಸವ ಎಂದರೆ ಎಲ್ಲಿಲ್ಲದ ಸಂಭ್ರಮ,ಫೆ.29 ರಂದು ವಿಧಾನಸೌಧದ ಮುಂಭಾಗ ಅದ್ದೂರಿ ಚಾಲನೆ ಸಿಗಲಿದ್ದು,ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಬ್ಯಾಂಕ್ವೆಟ್ ಹಾಲ್​ನಲ್ಲಿ ಮಾರ್ಚ್ 7ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಏಷ್ಯನ್​​, ಭಾರತೀಯ ಮತ್ತು ಕನ್ನಡ ಚಲನಚಿತ್ರ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಸಿನಿಮಾ ನಿರ್ಮಾಪಕರು, ರಾಷ್ಟ್ರೀಯ ಚಲನಚಿತ್ರ ಪ್ರತಿನಿಧಿಗಳು, ಕಲಾವಿದರು, ತಂತ್ರಜ್ಞರು, ನಿರ್ದೇಶಕರು ಸೇರಿದಂತೆ ಅನೇಕ ಗಣ್ಯರು ಈ ಚಲನಚಿತ್ರೋತ್ಸವದಲ್ಲಿ ಭಾಗಿ ಆಗಲಿದ್ದಾರೆ.

ಸಿನಿಮೋತ್ಸವ ನಡೆಯು ಸ್ಥಳ:
ಬೆಂಗಳೂರಿನ ರಾಜಾಜಿನಗರದ ಒರಿಯಾನ್ ಮಾಲ್​ನ ‘ಪಿವಿಆರ್ ಸಿನಿಮಾ’ದ 11 ಪರದೆಗಳು, ಚಾಮರಾಜಪೇಟೆಯ ಕಲಾವಿದರ ಸಂಘದ ಕಟ್ಟಡದಲ್ಲಿ ಇರುವ ಡಾ. ರಾಜ್​ಕುಮಾರ್​ ಭವನ ಮತ್ತು ಬನಶಂಕರಿ 2ನೇ ಹಂತದ ‘ಸುಚಿತ್ರಾ ಫಿಲ್ಮ್​ ಸೊಸೈಟಿ’ಯಲ್ಲಿ ಮಾರ್ಚ್ 1ರಿಂದ ಸಿನಿಮಾಗಳ ಪ್ರದರ್ಶನ ಆರಂಭವಾಗಲಿದೆ. ಅಂದಾಜು 50 ದೇಶಗಳ 200ಕ್ಕೂ ಹೆಚ್ಚು ‌ಸಿನಿಮಾಗಳು ಬೇರೆ ಬೇರೆ ವಿಭಾಗಗಳಲ್ಲಿ ಪ್ರದರ್ಶನಗೊಳ್ಳಲಿವೆ,ಜತೆಗೆ
ಕಾರ್ಯಾಗಾರ, ಸಂವಾದ, ಉಪನ್ಯಾಸಗಳು ಕೂಡಾ ಇರಲಿದೆ.

ನೋಂದಣಿ ಬಗ್ಗೆ ಮಾಹಿತಿ:
ಚಿತ್ರೋತ್ಸವದಲ್ಲಿ ಭಾಗವಹಿಸಲು ಬಯಸುವ ಪ್ರತಿನಿಧಿಗಳ ನೋಂದಣಿ ಕಾರ್ಯ ಈಗಾಗಲೇ ಚಿತ್ರೋತ್ಸವದ ಜಾಲತಾಣ (biffes.org)ದಲ್ಲಿ ಪ್ರಾರಂಭವಾಗಿದೆ.

ಆಸಕ್ತರು ಚಿತ್ರೋತ್ಸವದ ವೆಬ್​ಸೈಟ್​ಗೆ ಹೋಗಿ, ನಿಯಮಗಳನ್ನು ಅನುಸರಿಸಿ, ನಿಗದಿ ಆಗಿರುವ ಶುಲ್ಕ ಪಾವತಿಸಿ ನೋಂದಾಣಿ ಮಾಡಿಕೊಳ್ಳಬಹುದಾಗಿದೆ.

ಸಾರ್ವಜನಿಕರಿಗೆ 800 ರೂಪಾಯಿ ಶುಲ್ಕ ಇದ್ದರೆ,ಚಿತ್ರೋದ್ಯಮದ ಸದಸ್ಯರು, ಚಿತ್ರ ಸಮಾಜಗಳ ಸದಸ್ಯರು, ಹಿರಿಯ ನಾಗರಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ 400 ರೂ. ಶುಲ್ಕವಿದೆ.

ನೋಂದಣಿ ಕುರಿತು ಮಾಹಿತಿಗೆ 080-23493410 ದೂರವಾಣಿ ಸಂಖ್ಯೆ ಹಾಗೂ biffesblr@gmail.com ಇ-ಮೇಲ್​ ಸಂಪರ್ಕಿಸಬಹುದಾಗಿದೆ.

ಪಾಸ್ ಗಳು ದೊರೆಯುವ ಸ್ಥಳ:
ಕರ್ನಾಟಕ ಚಲನಚಿತ್ರ ಅಕಾಡೆಮಿ- ನಂದಿನಿ ಎಫ್ ಎಚ್ ಎಸ್ ಲೇಔಟ್, ಪ್ರೆಸಿಡೆನ್ಸಿ ಶಾಲೆ ಪಕ್ಕ, ಬೆಂಗಳೂರು.ಇಲ್ಲಿ ಫೆ.22ರಿಂದ‌29 ರ ತನಕ ಪಾಸ್ ಗಳನ್ನು ಪಡೆಯಬಹುದಾಗಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ- ನಂಬರ್ 28, ಹರೇ ಕೃಷ್ಣ ರಸ್ತೆ, ಮಾಧವನಗರ, ಗಾಂಧಿ ನಗರ, ಬೆಂಗಳೂರು.
ಇಲ್ಲಿ ಫೆ.22ರಿಂದ 29ರ ತನಕ ಪಾಸ್ ಗಳು ಸಿಗಲಿದೆ.

ಸುಚಿತ್ರ- ನಂಬರ್ 36, 9ನೇ ಮುಖ್ಯರಸ್ತೆ ಬಿ.ವಿ.ಕಾರಂತ ರಸ್ತೆ, ಬನಶಂಕರಿ 2ನೇ ಹಂತ ಬೆಂಗಳೂರು.ಇಲ್ಲಿ‌ ಫೆ.22ರಿಂದ28ರ ತನಕ ಪಾಸ್ ಗಳನ್ನು ಪಡೆಯಬಹುದು.

ಪಿವಿಆರ್ ಸಿನಿಮಾಸ್ ಓರೆಯಾನ್ ಮಾಲ್, ರಾಜಕುಮಾರ್ ರಸ್ತೆ, ರಾಜಾಜಿನಗರ, ಬೆಂಗಳೂರು.ಇಲ್ಲಿ ಮಾರ್ಚ್ 1ರಿಂದ ಪಾಸ್‌ಗಳು ದೊರೆಯಲಿದೆ.

.


Share this with Friends

Related Post