Mon. Dec 23rd, 2024

ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲೂ ಆಪರೇಷನ್

Share this with Friends

ಮುಂಬೈ, ಮೇ. 13: ಮಹಾರಾಷ್ಟ್ರದಲ್ಲಿ ಮಹಾಘಟಬಂಧನ ಸರ್ಕಾರ ಉರುಳಿಸಿದ ರೀತಿಯಲ್ಲೇ ಕರ್ನಾಟಕದಲ್ಲೂ ಆಗಲಿದೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಸ್ಪೋಟಕ ಮಹಿತಿ ನೀಡಿದ್ದಾರೆ.

ತೆರೆಯ ಮರೆಯಲ್ಲಿ ಕರ್ನಾಟಕದ ಬಿಜೆಪಿ ನಾಯಕರಿಂದಲೇ ತಮಗೆ ಆಪರೇಷನ್​​ ಮಾಡಲು ಆಹ್ವಾನವಿದೆ ಎಂದು ಏಕನಾಥ ಶಿಂಧೆ ಹೇಳಿದ್ದು ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ.

ನಾಥ್ ಮಾದರಿ ಆಪರೇಷನ್ ಮಹಾರಾಷ್ಟ್ರದಲ್ಲಿ ಖ್ಯಾತಿ ಗಳಿಸಿದೆ.ಅದೇ ರೀತಿ ಆಪರೇಷನ್​​ಗೆ ಕರ್ನಾಟಕದಿಂದಲೂ ಆಹ್ವಾನವಿದೆ ಎಂದು ಹೊಸ‌ ಬಾಂಬ್ ಹಾಕಿದ್ದಾರೆ.

ನಾಸಿಕ್ ಲೋಕಸಭಾ ಕ್ಷೇತ್ರದಲ್ಲಿ ಶಿಂಧೆ ಸಮ್ಮುಖದಲ್ಲಿ ಶಿವಸೇನಾ ಇತ್ತೀಚೆಗೆ ಶಿಂಧೆ ಬಣದ ಪದಾಧಿಕಾರಿಗಳ ಸಭೆಯನ್ನು ಆಯೋಜಿಸಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ್ದ ಶಿಂಧೆ, ಲೋಕಸಭೆಯ ನಂತರ ಕರ್ನಾಟಕದಲ್ಲಿ ಬದಲಾವಣೆಯಾಗಲಿದೆ, ನಾನು ಇತ್ತಿಚೇಗೆ ಕರ್ನಾಟಕದ ಒಂದು ಸಭೆಗೆ ತೆರಳಿದ್ದೆ, ಕರ್ನಾಟಕದಲ್ಲಿಯೂ ನಾಥ ಆಪರೇಷನ್ ಮಾಡೋದಿದೆ ಅಂದಿದ್ದಾರೆ.

ನಾಥ ಆಪರೇಷನ್ ಅಂದರೆ ಏನು ಅಂತ ಕೇಳಿದೆ, ಆಗ ಅವರು, ನೀವು ಮಹಾರಾಷ್ಟ್ರದ ಮಹಾಘಟ‌ ಬಂಧನ ಸರ್ಕಾರ ಪತನ ಮಾಡಿದ್ದಿರಿ ಹೀಗಾಗಿ ನಿಮ್ಮ ಅನುಭವ ನಮಗೆ ತುಂಬಾ ಅವಶ್ಯಕವಿದೆ ಎಂದರು. ಖಂಡಿತವಾಗಿಯೂ ನಾನು ಬರುತ್ತೇನೆ ಸಹಾಯ ಮಾಡುತ್ತೇನೆ‌ ಎಂದು ಹೇಳಿದೆ ಏಕನಾಥ್ ಶಿಂಧೆ ತಿಳಿಸಿದ್ದಾರೆ.

ಶಿಂಧೆ ಅವರೇ‌ ಹೀಗೆ ಹೇಳಿರುವುದು‌ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ‌ ಗ್ರಾಸ ಒಸಗಿಸಿದೆ.


Share this with Friends

Related Post