ತುಮಕೂರು. ಫೆ.06 : ಭಾರತ ಸಂವಿಧಾನದ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ತುಮಕೂರು ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಖಾಲಿ ಪ್ಲಾಸ್ಟಿಕ್ ಬಾಟಲಿಗಳಿಂದ “ನಮ್ಮ ಸಂವಿಧಾನ” ಎಂದು ಕನ್ನಡದ ವರ್ಣಮಾಲೆಗಳಲ್ಲಿ ಕ್ರಮಬದ್ದವಾಗಿ ಜೋಡಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಭಾರತ ಸಂವಿಧಾನ ಜಾಗೃತಿ ಜಾಥ ಅಭಿಯಾನದ ಹಿನ್ನೆಲೆಯಲ್ಲಿ ಅನುಪಯುಕ್ತವಾಗಿ ಇದ್ದಂತಹ 1,35,000 ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ, ಇವುಗಳಿಂದ “ನಮ್ಮ ಸಂವಿಧಾನ” ಎಂದು ಕನ್ನಡದ ವರ್ಣಮಾಲೆಗಳಲ್ಲಿ ಜೋಡಿಸಲಾಗಿದೆ.
ಈ ವಿಶೇಷ ಆಕೃತಿಯನ್ನು ಕನ್ನಡ ವರ್ಣಮಾಲೆಯಲ್ಲಿ ರಚಿಸಲು 305 ವಿದ್ಯಾರ್ಥಿಗಳು ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಗಳು ಮತ್ತು ಸಿಬ್ಬಂದಿ ವರ್ಗದವರು ಕೈ ಜೋಡಿಸಿದ್ದಾರೆ. ನಮ್ಮ ಸಂವಿಧಾನ ಎಂಬ ಅಕೃತಿಯನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ದೇಶದಲ್ಲಿ ಜೋಡಿಸಿರುವುದು ಇದೆ ಪ್ರಥಮ ಬಾರಿಗೆ.
ಈ ಹಿಂದೆ ಸ್ಮಾರ್ಟ್ ಸಿಟಿ, ಮಹಾನಗರ ಪಾಲಿಕೆ ವತಿಯಿಂದ ಒಂದು ಲಕ್ಷ ವಾಟರ್ ಬಾಟಲಿಗಳಿಂದ ತುಮಕೂರು ಎಂಬ ಅಕ್ಷರ ನಿರ್ಮಿಸಿ ಗಿನ್ನಿಸ್ ದಾಖಲೆ ನಿರ್ಮಿಸಲಾಗಿತ್ತು. ಸಂವಿಧಾನದ ಮಹತ್ವವನ್ನು ಸಾಮಾನ್ಯ ಜನರಿಗೆ ತಿಳಿಸುವ ಸಲುವಾಗಿ ಬೃಹತ್ ಮಟ್ಟದ ಖಾಲಿ ವಾಟರ್ ಬಾಟಲಿಗಳಿಂದ ದಾಖಲೆ ನಿರ್ಮಿಸಲಾಗಿದೆ.