ಮೈಸೂರು,ಜೂ.23:ರಾಜ್ಯ ಸರ್ಕಾರ ಕಾವೇರಿ ನೀರಿನ ಸಮಸ್ಯೆ ಬಗೆಹರಿಸದೆ, ಜೊತೆಗೆ ರೈತರ ಯಾವುದೇ ಸಮಸ್ಯೆಗಳನ್ನು ಬಗೆಹರಿಸದೆ ಕಾಲಹರಣ ಮಾಡುತ್ತಿದೆ ಎಂದು ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಜೆ.ಪಿ ಪ್ರಕಾಶ್ ಕಿಡಿಕಾರಿದ್ದಾರೆ.
ಮೈಸೂರಿನ ಟೌನ್ ಹಾಲ್ ಮುಂಭಾಗ ಕಾವೇರಿ ಕ್ರಿಯಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಧರಣಿ ಸತ್ಯಾಗ್ರಹ ಹಾಗೂ ಸಾರ್ವಜನಿಕರಿಂದ ಸಹಿ ಸಂಗ್ರಹ ಅಭಿಯಾನದ ವೇಳೆ ಅವರು ಮಾತನಾಡಿದರು.
ಮೇಕೆದಾಟು ಯೋಜನೆ ಪ್ರಾರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಲು ಸಿದ್ಧವಿದ್ದರೂ, ರಾಜ್ಯ ಸರ್ಕಾರ ಇದರ ಬಗ್ಗೆ ಮಾತನಾಡದೆ, ಕೇಂದ್ರ ಸರ್ಕಾರಕ್ಕೆ ಮನವಿ ಮಾಡದೇ ಇರುವುದು ಖಂಡನೀಯ ಎಂದು ಹೇಳಿದರು.
ಕಾವೇರಿ ನೀರಿನ ಶಾಶ್ವತ ಪರಿಹಾರಕ್ಕೆ ಹಾಗೂ ಮೇಕೆದಾಟು ಯೋಜನೆಗಾಗಿ ನಮ್ಮ ಕಾವೇರಿ ಕ್ರಿಯಾ ಸಮಿತಿ ಕಳೆದ 10 ತಿಂಗಳಿಂದ ಹೋರಾಟ ನಡೆಸುತ್ತಿದೆ. ಇದರ ಬಗ್ಗೆ ರಾಜ್ಯ ಸರ್ಕಾರ ಸ್ವಲ್ಪವೂ ಗಮನ ಹರಿಸುತ್ತಿಲ್ಲ ಎಂದು ಜೆ.ಪಿ ಪ್ರಕಾಶ್ ಬೇಸರ ವ್ಯಕ್ತಪಡಿಸಿದರು.
ಅಭಿಯಾನದಲ್ಲಿ ಮೂಗೂರು ನಂಜುಂಡಸ್ವಾಮಿ,ತೇಜೇಶ್ ಲೋಕೇಶ್ ಗೌಡ, ಕೃಷ್ಣೇಗೌಡ, ಸಿಂಧುವಳ್ಳಿ ಶಿವಕುಮಾರ್, ಬೋಗಾದಿ ಸಿದ್ದೇಗೌಡ, ನಾಗರಾಜ್, ಪ್ರಭುಶಂಕರ್, ಕೃಷ್ಣಪ್ಪ, ನೇಹಾ, ಆಟೋ ಮಹಾದೇವ ಮಂಜುಳಾ, ಹನುಮಂತೇಗೌಡ, ಪದ್ಮಿನಿ, ಪುರುಷೋತ್ತಮ್, ಚಂದ್ರಶೇಖರ್, ವಾಣಿ, ಲಕ್ಷ್ಮೀ, ರಘು ಅರಸ್ ,ಕುಮಾರ್ ಗೌಡ, ರಮೇಶ್, ಅಶೋಕ್, ಮಹಾದೇವ ಸ್ವಾಮಿ, ಹನುಮಂತಯ್ಯ, ಪ್ರಭಾಕರ್, ವಿಷ್ಣು, ಸಂಜಯ್ ಮತ್ತಿತರರು ಪಾಲ್ಗೊಂಡಿದ್ದರು.