Thu. Dec 26th, 2024

ಉರುಳಿಬಿದ್ದ ಕಾರು: ಇಬ್ಬರು ಸ್ನೇಹಿತರ ದುರ್ಮರಣ

Share this with Friends

ಖಾನಾಪುರ,ಜು.11: ರಸ್ತೆ ಪಕ್ಕದ ಸೇತುವೆಗೆ ಕಾರು ಡಿಕ್ಕಿಹೊಡೆದು ಉರುಳಿಬಿದ್ದ ಪರಿಣಾಮ ಇಬ್ಬರು ಸ್ನೇಹಿತರು ಮೃತಪಟ್ಟ ಘಟನೆ‌ ಖಾನಾಪುರದಲ್ಲಿ ನಡೆದಿದೆ.

ಪಟ್ಟಣದ ಹೊರವಲಯದ ಬಾಚೋಳಿ ಕ್ರಾಸ್ ಬಳಿ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.

ಕಾರಿನ ಚಾಲಕ ಮತ್ತು ಪ್ರಯಾಣಿಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಳಗಾವಿ ತಾಲೂಕು ಮಚ್ಛೆ ನಿವಾಸಿ, ಕಾರು ಚಾಲಕ ಶಂಕರ ಮೋಹನ ಗೋಮನಾಚೆ (೨೭) ಹಾಗೂ ಆತನ ಸ್ನೇಹಿತ, ತಾಲೂಕಿನ ಹತ್ತರವಾಡ ನಿವಾಸಿ ಆಶೀಷ್ ಮೋಹನ ಪಾಟೀಲ (೨೬) ಮೃತ ದುರ್ಧೈವಿಗಳು.

ಮಚ್ಛೆ ಗ್ರಾಮದವರಾದ ನಿಖೇಶ್ ಜಯವಂತ್ ಪವಾರ (೨೬) ಮತ್ತು ಜ್ಯೋತಿಬಾ ಗೋವಿಂದ ಗಾಂವಕರ (೨೯) ಗಾಯಗೊಂಡಿದ್ದಾರೆ.

ಖಾನಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post