ಹುಬ್ಬಳ್ಳಿ: ಅವಶ್ಯಕ ನಿರ್ವಹಣಾ ಕಾರ್ಯದ ಹಿನ್ನೆಲೆಯಲ್ಲಿ ರೈಲುಗಳ ಭಾಗಶಃ ರದ್ದುಪಡಿಸುವಿಕೆ ಮತ್ತು ಪ್ರಯೋಗಾತ್ಮಕ ನಿಲುಗಡೆ ಮಾಡುತ್ತಿದ್ದು ರೈಲ್ವೆ ಪ್ರಯಾಣಿಕರು ಸಹಕರಿಸಬೇಕು ಹಾಗು ಈ ಕುರಿತು ಗಮನ ಹರಿಸಬೇಕು ಎಂದು ನೈಋತ್ಯ ರೈಲ್ವೆ ಮನವಿ ಮಾಡಿದೆ.
1. ರೈಲುಗಳ ಭಾಗಶಃ ರದ್ದುಪಡಿಸುವಿಕೆ :
ಹುಬ್ಬಳ್ಳಿ ಯಾರ್ಡ್‌ನಲ್ಲಿ ಸ್ವಿಚ್ ನವೀಕರಣ ಕಾಮಗಾರಿಗೆ ಸಂಬಂಧಿಸಿ, ಸಂಬಂಧಪಟ್ಟ ಅಧಿಕಾರಿಗಳು ಲೈನ್ ಬ್ಲಾಕ್ ಹಾಗೂ ಪವರ್ ಬ್ಲಾಕ್‌ಗೆ ಅನುಮೋದನೆ ನೀಡಿದ್ದಾರೆ. ಈ ಅವಶ್ಯಕ ನಿರ್ವಹಣಾ ಕಾರ್ಯದ ಹಿನ್ನೆಲೆಯಲ್ಲಿ, ಕೆಳಕಂಡ ರೈಲುಗಳನ್ನು 27.01.2026 ರಂದು ಪ್ರಯಾಣ ಆರಂಭಿಸುವ ಸಂದರ್ಭದಲ್ಲಿ ಭಾಗಶಃ ರದ್ದುಪಡಿಸಲಾಗಿದೆ:
• ರೈಲು ಸಂಖ್ಯೆ 07330 ವಿಜಯಪುರ – ಹುಬ್ಬಳ್ಳಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್
ಈ ರೈಲು ಗದಗ ಮತ್ತು ಹುಬ್ಬಳ್ಳಿ ನಡುವಿನ ಸಂಚಾರವನ್ನು ಭಾಗಶಃ ರದ್ದುಪಡಿಸಿ, ಹುಬ್ಬಳ್ಳಿಯ ಬದಲು ಗದಗದಲ್ಲಿ ಅಂತ್ಯಗೊಳ್ಳಲಿದೆ.
• ರೈಲು ಸಂಖ್ಯೆ 07329 ಹುಬ್ಬಳ್ಳಿ – ವಿಜಯಪುರ ಇಂಟರ್‌ಸಿಟಿ ಎಕ್ಸ್‌ಪ್ರೆಸ್
ಈ ರೈಲು ಹುಬ್ಬಳ್ಳಿ ಮತ್ತು ಗದಗ ನಡುವಿನ ಸಂಚಾರವನ್ನು ಭಾಗಶಃ ರದ್ದುಪಡಿಸಿ, ಹುಬ್ಬಳ್ಳಿಯ ಬದಲು ಗದಗದಿಂದ ಪ್ರಯಾಣ ಆರಂಭಿಸಲಿದೆ.
2. ರೈಲುಗಳ ಪ್ರಯೋಗಾತ್ಮಕ ನಿಲುಗಡೆ :
ಹುಬ್ಬಳ್ಳಿ ವಿಭಾಗದ ಗೋಕಾಕ್ ರೋಡ್ ನಿಲ್ದಾಣದಲ್ಲಿ ರೈಲು ಸಂಖ್ಯೆ 17317/17318 ಹುಬ್ಬಳ್ಳಿ – ದಾದರ್ – ಹುಬ್ಬಳ್ಳಿ ಎಕ್ಸ್‌ಪ್ರೆಸ್‌ಗಳಿಗೆ ಪ್ರಯೋಗಾತ್ಮಕ ನಿಲುಗಡೆ ನೀಡಲು ರೈಲ್ವೆ ಬೋರ್ಡ್ ಅನುಮೋದನೆ ನೀಡಿದ್ದು. 26 ಜನವರಿ 2026 ರಿಂದ ಪ್ರಯಾಣ ಆರಂಭಿಸುವ ಸಂದರ್ಭದಲ್ಲಿ ಪ್ರಯೋಗಾತ್ಮಕವಾಗಿ ನಿಲುಗಡೆ ಜಾರಿಗೊಳ್ಳಲಿದೆ:
• ರೈಲು ಸಂಖ್ಯೆ 17317 ಹುಬ್ಬಳ್ಳಿ – ದಾದರ್ ಎಕ್ಸ್‌ಪ್ರೆಸ್
ಗೋಕಾಕ್ ರೋಡ್ ನಿಲ್ದಾಣಕ್ಕೆ ಆಗಮನ / ನಿರ್ಗಮನ ಸಮಯ: 19:41 / 19:42 ಗಂಟೆ.
• ರೈಲು ಸಂಖ್ಯೆ 17318 ದಾದರ್ – ಹುಬ್ಬಳ್ಳಿ ಎಕ್ಸ್‌ಪ್ರೆಸ್
ಗೋಕಾಕ್ ರೋಡ್ ನಿಲ್ದಾಣಕ್ಕೆ ಆಗಮನ / ನಿರ್ಗಮನ ಸಮಯ: 06:35 / 06:36 ಗಂಟೆ.

