Mon. Dec 23rd, 2024

ಲಯನ್ಸ್ ಅಂಬಾಸಿಡರಸ್ ಸಂಸ್ಥೆಯಿಂದ ಲಲಿತಾ ಫ್ರೌಢಶಾಲೆಯ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಪಾವತಿ

Share this with Friends

ಮೈಸೂರು, ಸೆ.15 : ಇಲ್ಲಿನ ಲಯನ್ಸ್ ಅಂಬಾಸಿಡರಸ್ ಸಂಸ್ಥೆಯ ಸೇವಾ ಚಟುವಟಿಕೆಗಳ ಕಾರ್ಯಕ್ರಮಗಳ ಅಡಿಯಲ್ಲಿ ಮೈಸೂರಿನ ಯಾದವಗಿರಿಯ ಲಲಿತಾ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕವನ್ನು ಪಾವತಿಸಿದೆ.

ಶಾಲೆಯ ವಿದ್ಯಾರ್ಥಿಗಳಾದ ಪ್ರಗತಿ .ಆರ್ ಮತ್ತು ಕಾರ್ತಿಕ್ ಎಂಬ ಇಬ್ಬರ ಈ ವರ್ಷದ ಶಾಲಾ ಶುಲ್ಕವಾದ 19000 ರೂ ಗಳನ್ನು ಬೆಂಗಳೂರಿನ ಹೆಚ್ ವಿ ಮಂಜುನಾಥ್ , ಮೈಸೂರಿನ ನಂದ ಮಹೇಶ್, ಭಾರತಿ ಸುಧೀರ್, ಸೃಜನ್ ದಿನೇಶ್ ಮತ್ತು ಭೌತಶಾಸ್ತ್ರ ಉಪನ್ಯಾಸಕ ಎಂಎಸ್ ರಾಮಾನುಜ ನೀಡಿದ್ದು ಲಯನ್ಸ್ ಅಂಬಾಸಿಡರಸ್ ಸಂಸ್ಥೆಯ ಮೂಲಕ ನೀಡಿದ್ದಾರೆ.

ಈ ವೇಳೆ ಜಾಹ್ನವಿ ದಿನೇಶ್ ಮತ್ತು ಶಾಲೆಯ ಮುಖ್ಯ ಶಿಕ್ಷಕಿ ಬಿಂದು ಇದ್ದರು.


Share this with Friends

Related Post