Fri. Nov 1st, 2024

ಪೆನ್ ಡ್ರೈವ್ ಪ್ರಕರಣ; ನಾನಾಗಲಿ ಡಿ.ಕೆ ಶಿ ಅವರಾಗಲಿ ಇಲ್ಲ: ಶಿವರಾಮೇಗೌಡ

Share this with Friends

ಬೆಂಗಳೂರು, ಮೇ.19: ಅಶ್ಲೀಲ ಪೆನ್ ಡ್ರೈವ್ ಪ್ರಕರಣದಲ್ಲಿ ನಾನಾಗಲಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರಾಗಲಿ ಇಲ್ಲ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮುಖಂಡ ದೇವರಾಜೇಗೌಡ ನಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ.ಈ ಮೊದಲು ಆತನನ್ನು ನೋಡಿರಲೇ ಇಲ್ಲ.ಫೋನ್ ನಲ್ಲಿ ಮಾತನಾಡಿದ್ದೆ,ಆದರೆ ಅದನ್ನೇ ಆತ ದುರುಪಯೋಗ ಮಾಡಿಕೊಂಡು ಸುಳ್ಳು ಹೇಳುತ್ತಿದ್ದಾರೆ ಆತನನ್ನು ಯಾರೂ ನಂಬಬೇಡಿ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ 100 ಕೋಟಿ ಆಫರ್ ನೀಡಿದ್ದರು, ಸಂಪುಟ ದರ್ಜೆಯ ಸ್ಥಾನಮಾನ ನೀಡುವುದಾಗಿ ಹೇಳಿದ್ದರು,ಅಡ್ವಾನ್ಸ್ ಆಗಿ‌ ಐದು ಕೋಟಿ ರೂ ಕಳಿಸಿದ್ದರು ಎಂದೆಲ್ಲ ಹೇಳಿದ್ದಾರಲ್ಲಾ ಅದನ್ನೆಲ್ಲಾ ಈ ಮೊದಲೇ ಏಕೆ ಹೇಳಲಿಲ್ಲ,ಬಿಜೆಪಿ ನಾಯಕರಿಗೂ ತಿಳಿಸಬೇಕಾಗಿತ್ತು ಅದು ಬಿಟ್ಟು ತನ್ನ ಬಂಧನದ ನಂತರ ಏನೇನೊ ಆರೋಪ ಮಾಡುತ್ತಿದ್ದಾರೆ ಅದಷ್ಟೂ ಸುಳ್ಳು ಎಂದು ಶಿವರಾಮೇಗೌಡ ಸ್ಪಷ್ಟಪಡಿಸಿದರು.

ಈ ಮೊದಲು ನಾನು ಕಾಂಗ್ರೆಸ್ ನಲ್ಲಿದ್ದವನು ನಂತರ ಬಿಜೆಗೆ‌ ಸೇರಿದ್ದೆ,ನಾನು ಈಗ ಬಿಜೆಪಿಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಇದೇ‌ ವೇಳೆ ಎಲ್.ಆರ್.ಶಿವರಾಮೇಗೌಡ ತಿಳಿಸಿದರು.


Share this with Friends

Related Post