Tue. Dec 24th, 2024

ಜನರ ಪ್ರಾರ್ಥನೆಗೂ ಶಕ್ತಿ ಇದೆ;ಟಿಕೆಟ್ ಸಿಗಲಿದೆ:ಪ್ರತಾಪ್ ಸಿಂಹ ವಿಶ್ವಾಸ

Pratap Simha
Share this with Friends

ಮೈಸೂರು,ಮಾ12: ದುರ್ಜನರ ಕೆಟ್ಟ ಆಲೋಚನೆಗೆ ಪ್ರಭಾವಕ್ಕೆ ಶಕ್ತಿ ಇರಬಹುದು, ಆದರೆ ನನಗೆ ಒಳ್ಳೆಯದಾಗಬೇಕೆಂದು ಲಕ್ಷಾಂತರ ಜನರು ಹಾರೈಸುತ್ತಿದ್ದಾರೆ ಎಂದು ಸಂಸದ‌ ಪ್ರತಾಪ್ ಸಿಂಹ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ‌ ಅವರು,ಜನರ ಪ್ರಾರ್ಥನೆಗೂ ಶಕ್ತಿ ಇದೆಯಲ್ಲವೆ,ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ, ಟಿಕೆಟ್ ಮಿಸ್ ಆಗುತ್ತಿದೆ ಎಂಬ ವಿಚಾರವೆ ಗೊತ್ತಿಲ್ಲ ಎಂದು ತಿಳಿಸಿದರು.

ಮೀಟಿಂಗ್ ಆಗಿರುವುದು ನಿಜ
ಅಲ್ಲಿಯ ಮೆಂಬರ್ ನಾನಲ್ಲ,ಜತೆಗೆ
ಅದೇ ಅಂತಿಮ‌ ತೀರ್ಮಾನವೂ ಅಲ್ಲಾ
ಕಳೆದ ಮೂರ್ನಾಲ್ಕು ದಿನದಿಂದ ಕ್ಷೇತ್ರದ ಆಚೆಗೂ ನನ್ನ ಪರ ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯದನ್ನು ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಸಂಸದರು ಬೇಕು ಎಂದು ದ್ವನಿ ಎತ್ತುವುದು ವಿರಳ,ಆದರೆ‌ ನನಗೆ ಟಿಕೆಟ್ ಕೊಡಬೇಕು ಎಂದು ಜನ‌ ಕೇಳುತ್ತಿದ್ದಾರೆ,
ಈ ವಿಚಾರದಲ್ಲಿ ನಾನು ಭಾಗ್ಯಶಾಲಿ
ಟಿಕೆಟ್ ಸಿಗಲಿದೆ ಎಂದು ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು.


Share this with Friends

Related Post