Sat. Nov 2nd, 2024

ಅಂತರ್ಜಲ ಬಳಸಲು ಅನುಮತಿ ಕಡ್ಡಾಯ

Share this with Friends

ಮೈಸೂರು,ಏ.9: ಮೈಸೂರು ಜಿಲ್ಲೆಯಲ್ಲಿ ಅಂತರ್ಜಲವನ್ನು ಬಳಸಲು ಕರ್ನಾಟಕ ಅಂತರ್ಜಲ ಪ್ರಾಧಿಕಾರ/ ಜಿಲ್ಲಾ ಅಂತರ್ಜಲ ಸಮಿತಿಯಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕಿದೆ.

ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ರಿಗ್ ಯಂತ್ರಗಳು ಕರ್ನಾಟಕ ಅಂತರ್ಜಲ ಪ್ರಾಧಿಕಾರದಲ್ಲಿ ನೊಂದಣಿಯಾಗಿ ನಿರಾಕ್ಷೇಪಣಾ ಪತ್ರವನ್ನು ಪಡೆದು ಕೊರೆಯುವ ಕೆಲಸ ನಿರ್ವಹಿಸಬೇಕಿದೆ.

ಒಂದು ವೇಳೆ ಅನುಮತಿ ಪಡೆಯದೆ ಕಾರ್ಯನಿರ್ವಹಿಸುವ ರಿಗ್ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾ ಅಂತರ್ಜಲ ಸಮಿತಿಯ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು ಎಚ್ಚರಿಸಿದ್ದಾರೆ.

ಮೈಸೂರು ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಕೈಗಾರಿಕೆ/ ವಾಣಿಜ್ಯ/ ಮೂಲ ಸೌಕರ್ಯ ಅಭಿವೃದ್ಧಿ ಮನೋರಂಜನೆ ಘಟಕಗಳು ಅಂತರ್ಜಲವನ್ನು ಬಳಸಲು ಕರ್ನಾಟಕ ಅಂತರ್ಜಲ ಪ್ರಾಧಿಕಾರ, ಜಿಲ್ಲಾ ಅಂತರ್ಜಲ ಸಮಿತಿಯಿಂದ ನಿರಾಕ್ಷೇಪಣಾ ಪತ್ರ ಪಡೆಯಲು ಸೂಕ್ತ ದಾಖಲಾತಿಗಳೊಂದಿಗೆ https://kgwa.in/Public/ ವೆಬ್ ಪೋರ್ಟೆಲ್ ಅಥವಾ https://antharjala.karnataka.gov.In ವೆಬ್ಸೈಟ್ ಮೂಲಕ ಅರ್ಜಿ
ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮೈಸೂರಿನ ಸರಸ್ವತಿಪುರಂನಲ್ಲಿರುವ ಜಿಲ್ಲಾ ಅಂತರ್ಜಲ ಕಛೇರಿಯ ಹಿರಿಯ ಭೂವಿಜ್ಞಾನಿಯವರ ದೂ.ಸಂ:0821-2340619 ಅಥವಾ ಇ-ಮೇಲ್: sggwsmys@gmail.com ಸಂಪರ್ಕಿಸಬಹುದು ಎಂದು ಜಿಲ್ಲಾ ಅಂತರ್ಜಲ ಸಮಿತಿಯ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು ತಿಳಿಸಿದ್ದಾರೆ.


Share this with Friends

Related Post