Fri. Mar 6th, 2026

ಪಿಜಿ ಮೆಡಿಕಲ್ ಪ್ರವೇಶ: ಸೇವಾ ನಿರತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೆಇಎ ಅವಕಾಶ

Share this with Friends

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಸ್ನಾತಕೋತ್ತರ ವೈದ್ಯಕೀಯ (PG Medical) ಕೋರ್ಸ್‌ಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ಪ್ರಮುಖ ಪ್ರಕಟಣೆ ಹೊರಡಿಸಿದೆ.

ಮೂರನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳು ತಮ್ಮ ಇಚ್ಛೆ/ಆಯ್ಕೆಗಳನ್ನು (Options) ದಾಖಲಿಸಲು ಫೆಬ್ರವರಿ 16 ರಿಂದ 17ರ ಬೆಳಿಗ್ಗೆ 11 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿದೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಫೆಬ್ರವರಿ 17ರವರೆಗೆ ಫಲಿತಾಂಶ ಪ್ರಕಟಿಸದಿರಲು ತೀರ್ಮಾನಿಸಲಾಗಿದೆ. ಇದುವರೆಗೆ ಆಯ್ಕೆಗಳನ್ನು ದಾಖಲಿಸದವರು ಈ ಅವಕಾಶ ಬಳಸಿಕೊಳ್ಳಬಹುದು ಎಂದು ಕೆಇಎ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ತಿಳಿಸಿದ್ದಾರೆ.

ಸೇವಾ ನಿರತರಿಗೆ ಹೊಸದಾಗಿ ಅರ್ಜಿ: ಅರ್ಹತಾ ಅಂಕಗಳನ್ನು ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ, ಇದುವರೆಗೆ ಅರ್ಜಿ ಸಲ್ಲಿಸದ ಸೇವಾ ನಿರತ ಅಭ್ಯರ್ಥಿಗಳು ಫೆಬ್ರವರಿ 12 ರಿಂದ 14ರವರೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ.

ದಾಖಲೆ ಪರಿಶೀಲನೆ: ಅರ್ಜಿ ಸಲ್ಲಿಸಿದ ಹೊಸ ಅಭ್ಯರ್ಥಿಗಳು ಫೆಬ್ರವರಿ 16ರ ಬೆಳಿಗ್ಗೆ 11 ಗಂಟೆಯೊಳಗೆ ಕೆಇಎ ಕಚೇರಿಯಲ್ಲಿ ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕು. ಇವರಿಗೆ ಫೆಬ್ರವರಿ 17ರ ಬೆಳಿಗ್ಗೆ 11ರವರೆಗೆ ಆಯ್ಕೆಗಳನ್ನು ದಾಖಲಿಸಲು ಅವಕಾಶವಿರುತ್ತದೆ.

ಎಂ-ಫಾರ್ಮ ಮತ್ತು ಫಾರ್ಮ-ಡಿ ತಾತ್ಕಾಲಿಕ ಫಲಿತಾಂಶ:

ಎಂ-ಫಾರ್ಮ ಮತ್ತು ಫಾರ್ಮ-ಡಿ ಕೋರ್ಸ್‌ಗಳ ಮೊದಲ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ನಲ್ಲಿ ಪ್ರಕಟಿಸಲಾಗಿದೆ. ಈ ಫಲಿತಾಂಶದ ಬಗ್ಗೆ ಏನಾದರೂ ಆಕ್ಷೇಪಣೆಗಳಿದ್ದರೆ ಫೆಬ್ರವರಿ 13ರ ಬೆಳಿಗ್ಗೆ 11 ಗಂಟೆಯೊಳಗೆ ಸಲ್ಲಿಸಲು ಸೂಚಿಸಲಾಗಿದೆ.


Share this with Friends

Related Post