Thu. Mar 5th, 2026

ಪಿಜಿ ವೈದ್ಯಕೀಯ: ಸೇವಾ ನಿರತರಿಗೆ ನ.30ರವರೆಗೆ ಆಪ್ಷನ್ ದಾಖಲಿಗೆ ಅವಕಾಶ

Share this with Friends

ಬೆಂಗಳೂರು:ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳ ಪ್ರವೇಶ ಸಂಬಂಧ ಸೇವಾ ನಿರತ ಅಭ್ಯರ್ಥಿಗಳಿಗೆ ಇಚ್ಚೆ/ಆಯ್ಕೆಗಳನ್ನು ದಾಖಲಿಸಲು/ಬದಲಿಸಲು ನ.30ರವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

ಪಿಜಿ ವೈದ್ಯಕೀಯ ಪ್ರವೇಶಕ್ಕೆ ಆಯಾ ಇಲಾಖೆಯ ಸೇವಾ ನಿರತ ಅಭ್ಯರ್ಥಿಗಳು ಆಯ್ಕೆ ಮಾಡಿಕೊಳ್ಳಲು ಅನುಮತಿಸಿರುವ ಪಿಜಿ ಕೋರ್ಸುಗಳ ಬಗ್ಗೆ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು, ಅವುಗಳಿಗೆ ಮಾತ್ರ ಇಚ್ಛೆ/ಆಯ್ಕೆಗಳನ್ನು ದಾಖಲಿಸಬೇಕು. ಕೆಲವರು ಇಲಾಖೆ ಅನುಮತಿ ನೀಡದಿರುವ ಕೋರ್ಸ್ ಗಳಿಗೂ ಇಚ್ಛೆ ದಾಖಲಿಸಿದ್ದು ಅಂತಹವರು ಕೂಡ ಇಚ್ಛೆಗಳನ್ನು ಬದಲು ಮಾಡಿಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.

ಒಂದು ವೇಳೆ ಇಲಾಖೆ ಅನುಮತಿ ನೀಡದಿರುವ ಕೋರ್ಸ್ ಗಳಿಗೂ ಇಚ್ಚೆಗಳನ್ನು ನಮೂದಿಸಿದ್ದಲ್ಲಿ ಸೀಟು ಹಂಚಿಕೆ ಸಂದರ್ಭದಲ್ಲಿ ಅವುಗಳನ್ನು ಕೈಬಿಡಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ಡಿ.8 ಮತ್ತು 9ರಂದು ವಿಶೇಷ ಚೇತನರಿಗೆ ಕೆಸೆಟ್ ದಾಖಲೆ ಪರಿಶೀಲನೆ:

ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್)ಯ ತಾತ್ಕಾಲಿಕ ಪಟ್ಟಿಯಲ್ಲಿ ಹೆಸರು ಇರುವ ಹಾಗೂ ದೈಹಿಕ ವಿಶೇಷ ಚೇತನದ ಪ್ರವರ್ಗದಡಿ ಅರ್ಹತೆ ಗಳಿಸಿರುವವರ ದಾಖಲೆ ಪರಿಶೀಲನೆ ಡಿ.8 ಮತ್ತು 9ರಂದು ನಡೆಸಲಾಗುವುದು. ಎಲ್ಲ ಮೂಲ ದಾಖಲೆಗಳ ಸಮೇತ ಕೆಇಎ ಕಚೇರಿಯಲ್ಲಿ ಈ ದಿನಾಂಕಗಳಂದು ನಡೆಯುವ ದಾಖಲೆ ಪರಿಶೀಲನೆಗೆ ಹಾಜರಾಗಬೇಕು ಎಂದು ಅವರು ಹೇಳಿದ್ದಾರೆ.


Share this with Friends

Related Post