Sat. Nov 2nd, 2024

ಗಿಡ ನೆಟ್ಟರೆ ಸಾಲದು, ಗಿಡಗಳನ್ನು ಪೋಷಿಸಬೇಕು:ದಿನೇಶ್

Share this with Friends

ನಂಜನಗೂಡು,ಜೂ.5: ಕೇವಲ ಗಿಡ ನೆಟ್ಟರೆ ಸಾಲದು ನೆಟ್ಟ ಗಿಡಗಳನ್ನು ಬೆಳೆಯುವ ತನಕ ಪೋಷಿಸಿದರೆ ಮಾತ್ರ ವಿಶ್ವ ಪರಿಸರ ದಿನಾಚರಣೆಗೆ ಸಾರ್ಥಕತೆ ಬರುತ್ತದೆ ಎಂದು ಪ್ರಾಂಶುಪಾಲ
ಲಯನ್ ಸಿ.ಆರ್ ದಿನೇಶ್ ಹೇಳಿದರು.

ನಂಜನಗೂಡಿನ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಗಿಡವನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ‌ ವೇಳೆ ಕಾಲೇಜಿನ ಪ್ರಾಂಶುಪಾಲ ಲಯನ್ ಸಿ.ಆರ್ ದಿನೇಶ್ ಮಾತನಾಡಿ ಕೇವಲ ಸಾಂಕೇತಿಕವಾಗಿ ಗಿಡ ನೆಟ್ಟರೆ ಪರಿಸರ ದಿನಾಚರಣೆ ಆಗಲಾರದು ಗಿಡಗಳನ್ನು ಹಚ್ವಾಗಿ ನೆಟ್ಟು ಪೋಷಿಸಬೇಕು,ಪರಿಸರ ಮಲಿನವಾಗುವುದನ್ನು ತಡೆಗಟ್ಟಬೇಕು ಆಗ ಮಾತ್ರ ಇದಕ್ಕೆಲ್ಲ ಅರ್ಥ‌ ಬರುತ್ತದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ವಲಯ ಅರಣ್ಯ ಅಧಿಕಾರಿ ಗಂಗಾಧರ್, ಉಪ ವಲಯ ಅರಣ್ಯ ಅಧಿಕಾರಿ ದಯಾನಂದ್, ಕಿಶೋರ್, ಅರಣ್ಯ ಪಾಲಕ ಮಂಜುನಾಥ್ ಮತ್ತು ಕಾಲೇಜಿನ ಹಿರಿಯ ಉಪನ್ಯಾಸಕರಾದ ಅಶ್ವತ್ ನಾರಾಯಣಗೌಡ, ಸರ್ಕಾರಿ ನೌಕರರ ಅಧ್ಯಕ್ಷರಾದ ರಂಗಸ್ವಾಮಿ ,ರಾಷ್ಟ್ರೀಯ ಸೇವಾ ಯೋಜನೆಯ ವಿಭಾಗ ಅಧಿಕಾರಿ ಡಾ.ಟಿ ಕೆ ರವಿ ದಿನೇಶ್ ಮುಂತಾದವರು ಉಪಸ್ಥಿತರಿದ್ದರು.


Share this with Friends

Related Post