Fri. Nov 1st, 2024

ದೇಶದ ಮೊದಲ ಅಂಡರ್ ವಾಟರ್ ಮೆಟ್ರೋ ಲೋಕಾರ್ಪಣೆ ಮಾಡಿದ ಮೋದಿ

first underwater metro
Share this with Friends

ಕೋಲ್ಕತ್ತಾ: ಭಾರತ ದೇಶ ಇಂದು ಬುಧವಾರ ತನ್ನ ಮೊದಲ ಜಲ ಮೆಟ್ರೋ ರೈಲು ಸೇವೆಯನ್ನು ಪಡೆಯಿತು. ಜಲ ಮೆಟ್ರೊಗೆ ಕೋಲ್ಕತ್ತಾದಲ್ಲಿಂದು ಚಾಲನೆ ನೀಡಿದ ಪ್ರಧಾನಿ ಮೋದಿ, ಶಾಲಾ ಮಕ್ಕಳೊಂದಿಗೆ ಎಸ್‌ಪ್ಲಾನೇಡ್‌ನಿಂದ ಹೌರಾ ಮೈದಾನಕ್ಕೆ ಮೆಟ್ರೋ ಸಂಚಾರ ಮಾಡಿದ ನಂತರ ಮೆಟ್ರೋ ನಿಲ್ದಾಣದಲ್ಲಿ ನೆರೆದಿದ್ದ ಜನರನ್ನು ಪ್ರಧಾನಿ ಮೋದಿ ಸ್ವಾಗತಿಸಿದರು. ಭಾರತದ ಮೊದಲ ನೀರೊಳಗಿನ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದರು.

ನರೇಂದ್ರ ಮೋದಿ ಅವರು 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 10 ದಿನಗಳ ಭೇಟಿ ನೀಡಲಿದ್ದು, ತಮ್ಮ ಭೇಟಿಯ ಭಾಗವಾಗಿ ಕೋಲ್ಕತ್ತಾದಲ್ಲಿ ಇಂದು 15,400 ಕೋಟಿ ರೂಪಾಯಿ ಮೌಲ್ಯದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ.

ದೇಶದ ಆಳವಾದ ಮೆಟ್ರೋ ನಿಲ್ದಾಣವೂ ಕೂಡ ಹೌದು. ಹೂಗ್ಲಿ ನದಿಯ ಕೆಳಗೆ, ಕೋಲ್ಕತ್ತಾ ಮತ್ತು ಹೌರಾ ಅವಳಿ ನಗರಗಳನ್ನು ಅದರ ಪೂರ್ವ ಮತ್ತು ಪಶ್ಚಿಮ ದಂಡೆಗಳಲ್ಲಿ ಬೇರ್ಪಡಿಸುವ ಮೆಟ್ರೊ ಮಾರ್ಗವು ಎಂಜಿನಿಯರ್ ಗಳ ಕುಶಲತೆಗೆ ಜಾಣ್ಮೆಯ ಕೆಲಸಕ್ಕೆ ಸಾಕ್ಷಿಯಾಗಿದೆ.

ಈ ಮೆಟ್ರೋ ಹೂಗ್ಲಿಯ ಪಶ್ಚಿಮ ದಂಡೆಯಲ್ಲಿರುವ ಪೂರ್ವ ಕರಾವಳಿಯ ಸಾಲ್ಟ್​ ಲೇಕ್ ನಗರಕ್ಕೆ ಸಂಪರ್ಕಿಸುತ್ತದೆ. ಇದು 6 ನಿಲ್ದಾಣಗಳನ್ನು ಹೊಂದಿರುತ್ತದೆ. ಈ ವಿಭಾಗವು 4.8 ಕಿ.ಮೀಗಳಷ್ಟು ಉದ್ದವಾಗಿವೆ. ಕೋಲ್ಕತ್ತಾ ಮೆಟ್ರೋ ಕಾಮಗಾರಿ ಹಲವು ಹಂತಗಳಲ್ಲಿ ನಡೆಯುತ್ತಿವೆ.

1970ರ ದಶಕದಲ್ಲಿ ಕೋಲ್ಕತ್ತಾ ಮೆಟ್ರೋ ಕಾಮಗಾರಿ ಆರಂಭಗೊಂಡಿತ್ತು. ಕಳೆದ 10 ವರ್ಷಗಳ ಮೋದಿ ಸರ್ಕಾರದ ಪ್ರಗತಿಯು ಹಿಂದಿನ 40 ವರ್ಷಗಳಿಗಿಂತ ಹೆಚ್ಚು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದರು. ಹೌರಾ ಮೆಟ್ರೋ ನಿಲ್ದಾಣವು ಭಾರತದ ಆಳವಾದ ಮೆಟ್ರೋ ನಿಲ್ದಾಣವಾಗಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ. ಕೋಲ್ಕತ್ತಾ ಮೆಟ್ರೋ ಅದನ್ನು ತಯಾರಿಸಲು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಇದು ಕೇವಲ 45 ಸೆಕೆಂಡುಗಳಲ್ಲಿ 520-ಮೀಟರ್ ದೂರ ಕ್ರಮಿಸಬಲ್ಲದು.


Share this with Friends

Related Post