Sun. Dec 22nd, 2024

ಕೋರ್ಟ್ ಗೆ ಸಿ.ಟಿ.ರವಿ ಹಾಜರುಪಡಿಸಿದ ಪೊಲೀಸರು

Share this with Friends

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಪರಿಷತ್ ನಲ್ಲಿ ಕೆಟ್ಟ ಪದಬಳಕೆ ಮಾಡಿದ ಆರೋಪದಲ್ಲಿ ಬಂಧಿತರಾದ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರನ್ನು ಹಿರೇಬಾಗೇವಾಡಿ ಪೊಲೀಸರು ಬೆಳಗಾವಿ ಕೋರ್ಟ್‌ಗೆ ಹಾಜರುಪಡಿಸಿದರು.

5ನೇ ಸಿವಿಲ್ ಅಂಡ್ ಜೆಎಂಎಫ್‌ಸಿ ಕೋರ್ಟ್‌ಗೆ ಇಂದು ಹಾಜರುಪಡಿಸಲಾಯಿತು.

ನಂತರ ನ್ಯಾಯಾಧೀಶರಾದ ಸ್ಪರ್ಶಾ ಎಂ ಡಿಸೋಜಾ ಎದುರು ವಾದ ಮಂಡಿಸಿದ ಸಿ.ಟಿ ರವಿ ಪರ ವಕೀಲರಾದ ಎಮ್.ಬಿ ಜಿರಲಿ ಮತ್ತು ರವಿರಾಜ್ ಪಾಟೀಲ್ ತಮ್ಮ ಕಕ್ಷಿದಾರರಿಗೆ ಜಾಮೀನು ನೀಡಬೇಕೆಂದು ಮನವಿ ಮಾಡಿದರು.

ಅದಕ್ಕೆ ನ್ಯಾಯಾಧೀಶರು ಎಲ್ಲಿ ಅರೆಸ್ಟ್ ಆಯ್ತು, ಎಷ್ಟು ಗಂಟೆಗೆ ಆಯ್ತು, ಏನಾದರೂ ತೊಂದರೆ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಿ.ಟಿ ರವಿ,ಗದಗ, ಧಾರವಾಡ, ಸವದತ್ತಿ, ರಾಮದುರ್ಗದಲ್ಲಿ ನನ್ನ ಸುತ್ತಾಡಿಸಿದರು. ಖಾನಾಪುರ ಪೊಲೀಸರು ನನ್ನನ್ನ ಹೊಡೆದರು, ಕಬ್ಬಿನ ಗದ್ದೆಯಲ್ಲಿ ನಿಲ್ಲಿಸಿದ್ದರು. ಪೊಲೀಸರು ನನಗೆ ಮಾನಸಿಕ, ದೈಹಿಕವಾಗಿ ಹಿಂಸೆ ಕೊಟ್ಟಿದ್ದಾರೆ, ಮೊಬೈಲ್ ಜೊತೆಗೆ ವಾಚ್ ಕೂಡ ಕಿತ್ತುಕೊಂಡರು ಎಂದು ಆರೋಪಿಸಿದರು.

ಮಂತ್ರಿ ಲಕ್ಷ್ಮಿ ಹೆಬ್ಬಾಳ್ಕರ್‌ ಹಾಗೂ ಡಿ.ಕೆ ಶಿವಕುಮಾರ್ ನಿನ್ನನ್ನ ನೋಡಿ ಕೊಳ್ಳುತ್ತೇವೆ ಅಂದ್ರು. ಇದೆಲ್ಲವನ್ನೂ ನೋಡಿ ನಾನು ರಾತ್ರಿಯಿಡಿ ಆತಂಕದಲ್ಲಿದ್ದೆ ಎಂದು ನ್ಯಾಯಾಧೀಶರ ಎದುರು ಅಳಲು ತೋಡಿಕೊಂಡರು.

ಇದಕ್ಕೆ ದನಿಗೂಡಿಸಿದ ವಕೀಲ ಜಿರಲಿ, ನ್ಯಾಯಾಂಗದ ಸಮಯ ವ್ಯರ್ಥವಾಗುತ್ತದೆ ಅಲ್ಲದೇ ನನ್ನ ಕಕ್ಷಿದಾರರ ಮಾನಸಿಕ ಹಾಗು ದೈಹಿಕ ಆರೋಗ್ಯ ಹಾಳಾಗಬಹುದು. ಸ್ಪೀಕರ್ ಸಾವಿಂಧಾನಿಕ ಹೆಡ್ ಇರುತ್ತಾರೆ, ಸ್ಪೀಕರ್‌ಗೆ ಎಲ್ಲವೂ ಗೊತ್ತಿದೆ,ಆದರೆ ಡಿಸಿಶನ್ ತೆಗೆದುಕೊಂಡಿಲ್ಲ. ಮೊದಲು ನನ್ನ ಕಕ್ಷಿದಾರನಿಗೆ ವೈದ್ಯಕೀಯ ಚಿಕಿತ್ಸೆ ಬೇಕಾಗಿದೆ, ಹೀಗಾಗಿ ಜಾಮೀನು ನೀಡಬೇಕೆಂದು ಮನವಿ ಮಾಡಿದರು.


Share this with Friends

Related Post