Mon. Dec 23rd, 2024

ಬಾಲಿವುಡ್ ನಟಿ ಪೂನಂ ಪಾಂಡೆ ಹಠಾತ್‌ ನಿಧನ

Poonam-Pandya Passed Away
Share this with Friends

ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದ್ದ ಬಾಲಿವುಡ್ ನಟಿ ಪೂನಂ ಪಾಂಡೆ ವಿಧಿವಶರಾಗಿದ್ದಾರೆ. ಗರ್ಭಕಂಠ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪೂನಂ ಇದೀಗ 32ನೇ ವಯಸ್ಸಿಗೆ ನಿಧನರಾಗಿದ್ದಾರೆ. ಅವರ ಹಠಾತ್‌ ನಿಧನ ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ. ಉತ್ತರ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ.ಪೂನಂಪಾಂಡೆ ಅವರ ಮ್ಯಾನೇಜರ್ ಪಾರುಲ್ ಚಾವ್ಲಾ ಅವರು ತಮ್ಮ ಇನ್ಸಾಟಾಗ್ರಾಂ ಖಾತೆಯಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

ಇಂದು ನಮಗೆ ನಿಜಕ್ಕೂ ದುಃಖದ ದಿನವಾಗಿದೆ. ಪೂನಂಪಾಂಡೆ ಅವರು ಗಂಟಲು ಕ್ಯಾನ್ಸರ್‍ನಿಂದ ನಿಧನರಾಗಿದ್ದಾರೆಂದು ನಿಮಗೆ ತಿಳಿಸಲು ನಿಜಕ್ಕೂ ದುಃಖವಾಗುತ್ತಿದೆ. ಚಿತ್ರರಂಗದಲ್ಲಿ ಹಲವರಿಗೆ ಪ್ರೀತಿ ಪಾತ್ರರಾಗಿದ್ದ ಅವರ ನಿಧನ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಪೂನಂ ಪಾಂಡೆ ಅವರು ಕೆಲವು ತಿಂಗಳಿನಿಂದ ಕೊನೆಯ ಹಂತದ ಗಂಟಲಿನ ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ಇಂದು ಇಹಲೋಕ ಯಾತ್ರೆ ಮುಗಿಸಿದ್ದಾರೆ. ಅವರು ತಮ್ಮ ಕೊನೆಯ ದಿನಗಳಲ್ಲಿ ತವರೂರಾದ ಉತ್ತರಪ್ರದೇಶದಲ್ಲಿ ನೆಲೆಸಿದ್ದು ಆಕೆಯ ಅಂತಿಮ ವಿವಿಧಾನಗಳು ಅಲ್ಲೇ ನೆರವೇರಲಿದೆ ಎಂದು ಪಾರುಲ್ ಚಾವ್ಲಾ ತಿಳಿಸಿದ್ದಾರೆ.

ಊಟಕ್ಕೆ ಹಾಕದ ತಾಯಿಯನ್ನೇ ಹೊಡೆದು ಕೊಂದ ಮಗ

ಪೂನಂ ಪಾಂಡೆ ಅವರು 2013ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ‘ನಶಾ’ ಅವರ ನಟನೆಯ ಮೊದಲ ಸಿನಿಮಾ. ‘ಲವ್ ಈಸ್ ಪಾಯಿಸನ್’ ಹೆಸರಿನ ಕನ್ನಡ ಸಿನಿಮಾದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದರು. ತೆಲುಗು, ಬೋಜ್​ಪುರಿ ಸಿನಿಮಾಗಳಲ್ಲಿ ಪೂನಂ ನಟಿಸಿದ್ದಾರೆ. 2018ರಲ್ಲಿ ರಿಲೀಸ್ ಆದ ‘ದಿ ಜರ್ನಿ ಆಫ್ ಕರ್ಮ’ ಸಿನಿಮಾದಲ್ಲಿ ಅವರು ನಟಿಸಿದ್ದರು. ಆ ಬಳಿಕ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿಲ್ಲ.

ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲೂ ಪೂನಂ ಕಾಣಿಸಿಕೊಂಡಿದ್ದಾರೆ. 2022ರಲ್ಲಿ ಪ್ರಸಾರ ಕಂಡ ‘ಲಾಕ್​ಅಪ್​’ ಶೋನಲ್ಲಿ ಸ್ಪರ್ಧಿ ಆಗಿ ಪೂನಂ ಕಾಣಿಸಿಕೊಂಡಿದ್ದರು. ಅವರು ಏಳನೇ ಸ್ಥಾನದಲ್ಲಿ ಎಲಿಮಿನೇಟ್ ಆದರು. ಹಲವು ವಿವಾದಗಳನ್ನು ಕೂಡ ಅವರು ಮಾಡಿಕೊಂಡಿದ್ದರು.


Share this with Friends

Related Post