Mon. Dec 23rd, 2024

ಕಳಪೆ ಕಾಮಗಾರಿ:15 ದಿನಕ್ಕೇ ಒಡೆದುಹೋದ ಪೈಪ್

Share this with Friends

ಮೈಸೂರು,ಜೂ24: ಮೈಸೂರು ಜಿಲ್ಲೆ, ಹಣಸೂರಿನಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ನೀರಿನ ಪೈಪ್ ಒಡೆದುಹೋಗಿದ್ದು ಕಳಪೆ‌ ಕಾಮಗಾರಿಗೆ ಸಾಕ್ಷಿಯಾಗಿದೆ.

ಹುಣಸೂರು ತಾಲೂಕಿನ ಕೊಳಘಟ್ಟ ಗ್ರಾಮದಲ್ಲಿ ಸುಮಾರು 8 ಲಕ್ಷ ವೆಚ್ಚದಲ್ಲಿ ನೀರಿನ ಪೈಪ್ ಕಾಮಗಾರಿ ನಡೆಯುತ್ತಿದೆ, ಆದರೆ,ಈಗಾಗಲೇ ಪೈಪ್ ತೂತು‌ ಬಿದ್ದಿದ್ದು ಕಳಪೆ‌ ಕಾಮಗಾರಿ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕೊಳಘಟ್ಟ ಗ್ರಾಮದಲ್ಲಿರುವ ಕೆಂಪಮ್ಮನ ಕೆರೆಯ ಕೋಡಿ ಹರಿದು ನೀರು‌ ಪೋಲಾಗುತ್ತಿತ್ತು.

ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಉದ್ದೇಶದಿಂದ ನೀರಾವರಿ ಇಲಾಖೆ 8 ಲಕ್ಷ ವೆಚ್ಚದಲ್ಲಿ ಪೈಪ್ ಅಳವಡಿಸಿ ಸಮೀಪದ ಹಳ್ಳಕ್ಕೆ ನೀರು ಸಂಗ್ರಹಿಸುವ ಕಾಮಗಾರಿ ಕೈಗೆತ್ತಿಕೊಂಡಿತು.

ಮೈಸೂರಿನ ಪ್ರೀತಂ ಎಂಬುವರಿಗೆ ಕಾಮಗಾರಿಯ ಗುತ್ತಿಗೆ ನೀಡಲಾಗಿದ್ದು, ಸುಮಾರು ಅರ್ಧ ಕಿಲೋಮೀಟರ್ ಪೈಪ್ ಅಳವಡಿಸಲಾಗಿದೆ,ಆದರೆ ಈಗಾಗಲೇ ಪೈಪ್ ಒಡೆದು ರಂಧ್ರಗಳಾಗಿವೆ.

ಈ ಕಳಪೆ ಪೈಪ್ ನಲ್ಲಿ ನೀರು ಹರಿಯಲು ಬಿಟ್ಟರೆ ಸಮೀಪದಲ್ಲಿರುವ ಜಮೀನುಗಳು ಜಲಾವೃತವಾಗುತ್ತದೆ,ಕಳಪೆ ಕಾಮಗಾರಿ ಮಾಡಿದ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ದ ಸ್ಥಳೀಯರು ಆಕ್ರೋಷ ವ್ಯಕ್ತಪಡಿಸಿದ್ದಾರೆ.ಕೂಡಲೇ ಗುತ್ತಿಗೆದಾರನ ಲೈಸೆನ್ಸ್ ರದ್ದುಪಡಿಸುವಂತೆ ಆಗ್ರಹಿಸಿದ್ದಾರೆ.


Share this with Friends

Related Post