ಹಾವೇರಿ:ಅಧಿಕಾರ ಮತ್ತು ಹಣ ಕಾಕ್ ಟೈಲ್ ಇದ್ದ ಹಾಗೆ ಅದರ ಹಿಂದೆ ಹೊರಟರೆ ಅದು ನಿಮಗೆ ನಿಶೆ ತರುತ್ತದೆ. ಇದೆಲ್ಲವನ್ನು ನಿಯಂತ್ರಣ ಮಾಡಿ ಸಮಾಜ ಸೇವೆ ಮಾಡಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮಾತೋಶ್ರೀ ಗಂಗಮ್ಮ ಸೋಮಪ್ಪ ಬೊಮ್ಮಾಯಿರವರ 92 ನೇಯ ಹುಟ್ಟುಹಬ್ಬದ ಅಂಗವಾಗಿ ಶಿಗ್ಗಾಂವ – ಸವಣೂರ ವಿಧಾನಸಭಾ ಮತಕ್ಷೇತ್ರದ ಅತ್ಯುತ್ತಮ ಸಂಘ- ಸಂಸ್ಥೆಗಳಿಗೆ ಏರ್ಪಡಿಸಿದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು,ನಾನು ಸಿಎಂ ಆಗಿದ್ದಾಗ ಟಿವಿಯಲ್ಲಿ ಸಣ್ಣ ಮಗು ಒಂದು ಪ್ರಶ್ನೆ ಕೇಳಿತು, ನಾನು ಆ ಮಗುವಿನ ಮನಸ್ಸು ಅರ್ಥ ಮಾಡಿಕೊಂಡೆ ಅಲ್ಲದೇ ನನ್ನ ಮನಸಲ್ಲಿಯೂ ಅದೇ ಭಾವನೆ ಇತ್ತು. ಸಿಎಂ ಅಂದರೆ ಕಾಮನ್ ಮ್ಯಾನ್ ಅಂತ. ಕೆಲವು ಕಡೆ ನಮ್ಮ ಗನ್ ಮ್ಯಾನ್ ಇಲ್ಲದೇ ನಾನು ಓಡಾಡುತ್ತೆನೆ. ಎಲ್ಲರೂ ಏನ್ ಇಷ್ಟು ಸಿಂಪಲ್ ಆಗಿದ್ದೀರಿ ಅಂತ ಕೇಳುತ್ತಾರೆ. ಅಧಿಕಾರ ಬಂದಾಗ ಬಹಳ ಜನರು ಸಂಬಂಧಿಕರಾಗಿತ್ತಾರೆ, ಸ್ನೇಹಿತರಾಗುತ್ತಾರೆ. ನಾನು ಸಿಎಂ ಅಗಿದ್ದಾಗಲೂ ನಮ್ಮ ತಂದೆ ಕಟ್ಟಿಸಿದ ಮನೆಯಲ್ಲಿಯೇ ಇದ್ದೆ. ಬಹಳಷ್ಟು ಜನರು ಹೊರ ದೇಶದ ಗಣ್ಯರು ಭೇಟಿ ಆಗುತ್ತಾರೆ. ಅದಕ್ಕೆ ಹೊಸ ಮನೆ ತೆಗೆದುಕೊಳ್ಳಿ ಎಂದು ಹೇಳಿದ್ದರು. ಆದರೆ ನಾನು ಇದೇ ಮನೆಯಲಿಯೇ ಇರುತ್ತೇನೆ ಎಂದು ಹೇಳಿದೆ ಎಂದರು.
ಅಧಿಕಾರ ಮತ್ತು ಹಣ ಕಾಕ್ ಟೈಲ್ ಇದ್ದಹಾಗೆ ಅದರ ಹಿಂದೆ ಹೊರಟರೆ ಅದು ನಿಮಗೆ ನಿಶೆ ತರುತ್ತದೆ. ಇದೆಲ್ಲವನ್ನು ನಿಯಂತ್ರಣ ಮಾಡಿ ಸಮಾಜ ಸೇವೆ ಮಾಡಬೇಕು.ನಾನು ಶಾಸಕನಾಗಿ ಬಂದ ಮೇಲೆ ಶಾಲೆಗಳಿಗೆ ಶಿಕ್ಷಕರು ಇರಲಿಲ್ಲ. ನಾನು ನಮ್ಮ ಟ್ರಸ್ಟ್ ನಿಂದ ಹಳ್ಳಿಯಲ್ಲಿ ಬಿಎಸ್ಸಿ ಎಂಎಸ್ಸಿ ಮಾಡಿದವರಿಗೆ ತರಬೇತಿ ನೀಡಿ ಅವರಿಂದ ಪಾಠ ಮಾಡಿಸಿ ಅವರಿಗೆ ಸಂಬಳ ಕೊಟ್ಟೆ. ಮಕ್ಕಳಿಗೆ ಸ್ಕಾಲರ್ ಶಿಪ್, ಎಸ್ಸಿ ಎಸ್ಟಿ ಮಕ್ಕಳಿಗೆ ಸ್ಕಾಲರ್ ಶಿಪ್ ಆಸ್ಪತ್ರೆಗಳಿಗೆ ಅಂಬುಲೆನ್ಸ್ ಕೊಡಿಸಿದ್ದೆ. ಹೆಲ್ತ್ ಕ್ಯಾಂಪ್ ಮಾಡಿದೆವು ಹೃದ್ರೋಗ ಖಾಯಿಲೆ ಇರುವ ಜನರಿಗೆ ಪ್ರತ್ಯೇಕ ತಪಾಸಣೆ, ಕ್ಯಾನ್ಸರ್ ರೋಗಿಗಳಿಗೆ ಪ್ರತ್ಯೇಕ ತಪಾಸಣೆ ಮಾಡಿಸಿದ್ದೇನೆ. ಈಗ ಮತ್ತೆ ಆರಂಭಿಸುತ್ತೇನೆ. ಇದಕ್ಕೂ ರಾಜಕಾರಣಕ್ಕೂ ಸಂಬಂಧವಿಲ್ಲ ಎಂದು ಹೇಳಿದರು.
ರಾಜಕಾರಣ ಅಂದರೆ ಬಹಳ ವಿಚಿತ್ರವಾಗಿದೆ. ರಾಜಕಾರಣಕ್ಕೆ ವಯಸ್ಸಿಲ್ಲ ಮತಹಾಕಲು ವಯಸ್ಸಿದೆ. ರಾಜಕಾರಣ ಪ್ರವೇಶಕ್ಕೆ ವಯಸ್ಸಿಲ್ಲ ನಿವೃತ್ತಿ ಆಗಲು ವಯಸ್ಸಿಲ್ಲ. ಅವರ ಶಕ್ತಿ ಅನುಸಾರ ರಾಜಕಾರಣ ಮಾಡುತ್ತಾರೆ. ನೌಕರಿ ಮಾಡಲು ಹೋದರೆ ಏನು ಓದಿದಿಯಾ ಅಂತ ಕೇಳುತ್ತಾರೆ. ಆದರೆ ರಾಜಕಾರಣಿಗೆ ಯಾವುದೇ ಓದಿನ ಅವಶ್ಯಕತೆಯಿಲ್ಲ. ರಾಜಕಾರಣ ಸೇವೆ ಮಾಡಲು ಇರುವುದು ಅದಕ್ಕೆ ಪ್ರಧಾನಿ ತಾವು ಪ್ರಧಾನಮಂತ್ರಿಯಲ್ಲ ಪ್ರಧಾನ ಸೇವಕ ಅಂತ ಹೇಳಿದ್ದಾರೆ. ಸೇವೆ ಮಾಡಲು ನಿಮ್ಮ ಶಕ್ತಿ ಅನುಸಾರ ಸೇವೆ ಮಾಡುವುದು. ಆದರೆ ಅಧಿಕಾರ ಇದ್ದರೆ ಮಾತ್ರ ಸೇವೆ ಮಾಡುತ್ತೇನೆ ಎನ್ನುವ ವರ್ಗ ಇದೆ. ಸೇವೆ ಮಾಡಲು, ಜನರನ್ನು ಸಂಘಟಿಸಿ ಜಾಗೃತಿ ಮಾಡಲು, ಒಳ್ಳೆಯ ಅವಕಾಶ ಮಾಡಿಕೊಡಲು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಅಧಿಕಾರ ಇಲ್ಲದಿದ್ದರೂ ಮಾಡಬಹುದು ಜನರ ಸೇವೆ ಮಾಡದೇ ಅಧಿಕಾರಕ್ಕಾಗಿ ರಾಜಕಾರಣ ಮಾಡಿದರೆ ಶಾಸ್ವತ ಅಲ್ಲ. ಅಧಿಕಾರ ಶಾಸ್ವತ ಅಲ್ಲ. ಯಾರಿಗೆ ಸಂಸ್ಕಾರ ಯಾರಲ್ಲಿ ನೀತಿ ಬಿಂಬಿತವಾಗಿರುತ್ತದೆ ಅವರು ಅಧಿಕಾರ ರಹಿತ ರಾಜಕಾರಣ ಮಾಡುತ್ತಾರೆ. ಸಾಕಷ್ಟು ಸಂಘ ಸಂಸ್ಥೆಗಳು ಹೆಲ್ತ್ ಕ್ಯಾಂಪ್ ಐ ಕ್ಯಾಂಪ್ ಮಾಡುತ್ತಾರೆ. ಸಾಕಷ್ಟು ಸಂಸ್ಥೆಗಳು ರೈತರಿಗೆ ಸಹಾಯ ಮಾಡುತ್ತಾರೆ. ಬಹಳಷ್ಟು ಸ್ವ ಸಹಾಯ ಗುಂಪುಗಳು ಸಾಕಷ್ಟು ಕೆಲಸ ಮಾಡುತ್ತಾರೆ ಅವರ್ಯಾರು ರಾಜಕಾರಣ ಮಾಡುವುದಿಲ್ಲ. ದೇವರ ಜಾತ್ರೆ ಮಾಡುತ್ತಾರೆ. ಸಮಾಜ ಇಷ್ಟೆಲ್ಲ ಅಭಿವೃದ್ಧಿ ಆಗಲು ಬಹಳ ಜನರು ನಿಶ್ವಾರ್ಥ ಸೇವೆ ಮಾಡುತ್ತಾರೆ. ಅವರನ್ನು ಗುರುತಿಸಬೇಕು ಸನ್ಮಾನಿಸಬೇಕು ಅದರಿಂದ ಪ್ರೇರಣೆಗೊಂಡು ಅವರು ಇನ್ನಷ್ಟು ಸೇವೆ ಮಾಡುತ್ತಾರೆ ಎಂದು ಹೇಳಿದರು.
ಋಣ ಮರೆಯುವುದಿಲ್ಲ:
ನೀವೆಲ್ಲ ನಿಶ್ವಾರ್ಥ ಸಮಾಜ ಸೇವೆ ಮಾಡಿದ್ದೀರಿ, ರಾಜ್ಯ ಮಟ್ಡದ ಪ್ರಶಸ್ತಿ ಎಲ್ಕರಿಗೂ ಸಿಗುವುದಿಲ್ಲ. ನಮ್ಮದು ಅದಕ್ಕಿಂತ ಶ್ರೇಷ್ಟ ನಮ್ಮ ಪ್ರಶಸ್ತಿ ಅಂತ ಇದನ್ನು ಕೊಡುತ್ತ ಇದ್ದನೆ. ಜನರಿಗೆ ಸ್ಪೂರ್ತಿ ಕೊಡುವ ಕೆಲಸ ಕಾರ್ಯ ಮಾಡುತ್ತ ಬಂದಿದ್ದೇನೆ ಶಿಗ್ಗಾವಿ ತಾಲೂಕಿನ ಜನರ ಋಣ ನಾನು ಸಾಯುವವರೆಗೂ ಮರೆಯುವುದಿಲ್ಲ ನನಗೆ ಎಲ್ಲಿಯವರೆಗೂ ಶಕ್ತಿ ಇರುತ್ತದೆ ಅಲ್ಲಿಯವರೆಗೂ ನಿಮ್ಮ ಸೇವೆ ಮಾಡುತ್ತೇನೆ. ಪ್ರಶಸ್ತಿ ಪಡೆದ ಎಲ್ಲರಿಗೂ ಅಭಿನಂದನೆಗಳು ಎಂದು ಹೇಳಿದರು.

