ಬೆಂಗಳೂರು: ತುರ್ತು ಕಲಸದ ಹಿನ್ನಲೆಯಲ್ಲಿ ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಶನಿವಾರ ಇಡೀ ದಿನ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಲಿದ್ದು, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ನಾಗರಿಕರಿಗೆ ಬೆಸ್ಕಾಂ ಮನವಿ ಮಾಡಿದೆ.
66/11ಕೆವಿ ‘ಬಿ’ ಸ್ಟೇಷನ್ ನ 20 ಎಂ.ವಿ.ಎ ಶಕ್ತಿ ಪರಿವರ್ತಕ-01 & 02” ವ್ಯಾಪ್ತಿಯಲ್ಲಿ ಶನಿವಾರ( ದಿನಾಂಕ 20.12.2025) ರಂದು ಬೆಳಗ್ಗೆ 10:00 ಗಂಟೆಯಿಂದ ಸಂಜೆ 05:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬಿಸ್ಕಾಂ ಪ್ರಕಟಣೆ ಮೂಲಕ ತಿಳಿಸಿದೆ.
ಎಲ್ಲೆಲ್ಲಿ ಪವರ್ ಕಟ್?;
“100ft ರಸ್ತೆ, ಅಗಾ ಅಬಾಸ್ ಅಲಿ ರಸ್ತೆ, ಆರ್ಟಿಲರಿ ರಸ್ತೆ, ಬ್ರಂಟನ್ ಕ್ರಾಸ್ ರಸ್ತೆ, ಬ್ರಂಟನ್ ರಸ್ತೆ, ಬ್ರಿಗೇಡ್ ರಸ್ತೆ, ಕ್ಯಾಮ್ಬ್ರಿಡ್ಜ್ ರಸ್ತೆ, ಕ್ಯಾಸಲ್ ಸ್ಟ್ರೀಟ್, ಚರ್ಚ್ ಸ್ಟ್ರೀಟ್, ಕಾಮರ್ಶಿಯಲ್ ಸ್ಟ್ರೀಟ್, ಕಾನ್ ರಾಡ್ ಹೋಟೆಲ್, ಡಿಕ್ಸನ್ ರಸ್ತೆ, ಗೌತಂಪುರ, ಗಂಗಾಧ ಚೆಟ್ಟಿ ರಸ್ತೆ, ಹೌಡಿನ್ ರಸ್ತೆ, ಆಸ್ಪತ್ರೆ ರಸ್ತೆ, ಇನ್ಫೆಂಟ್ರಿ ರಸ್ತೆ, ಈಶ್ವರ ಲೇಔಟ್, ಜೋಗು ಪಾಳ್ಯ, ಕಾಮರಾಜ್ ರಸ್ತೆ, ಲಾಂಗ್ ಫಾರ್ಟ್ ಗಾರ್ಡೆನ್, ಮಾಗ್ರಾಥ್ ರಸ್ತೆ, ಮೆನ್ ಚಾನೆಲ್ ರಸ್ತೆ, ಮಿಡ್ ಫಾರ್ಡ್ ಗಾರ್ಡೆನ್, ಎಂ.ಜಿ. ರಸ್ತೆ (ಚಿನ್ನಸ್ವಾಮಿ ಸ್ಟೇಡಿಯಂ ಸಮೀಪದ ಭಾಗ ಸಹಿತ), ಮೊಟಪ್ಪನ್ ಪಾಳ್ಯ, ಮ್ಯೂಸಿಯಂ ರಸ್ತೆ, ಪ್ಲೇನ್ ಸ್ಟ್ರೀಟ್, ಪ್ರೆಸ್ಟಿಜ್ ಹೆರ್ಮಿಟೇಜ್ ಅಪಾರ್ಟ್ಮೆಂಟ್, ಪ್ರಿಮ್ರೋಸ್ ರಸ್ತೆ, ರಿಚ್ಮಂಡ್ ಟೌನ್, ರೆಸ್ಟ್ ಹೌಸ್ ರಸ್ತೆ, ಸೇಂಟ್ ಜೋಹ್ನ್ಸ್ ರಸ್ತೆ, ಸಾಯಿ ಬಾಬಾ ದೇವಸ್ಥಾನ, ಟ್ರಿನಿಟಿ ಸರ್ಕಲ್, ಯೂನಿಯನ್ ಸ್ಟ್ರೀಟ್, ವೆಲಿಂಗ್ಟನ್ ರಸ್ತೆ, ಮತ್ತು ವುಡ್ ಸ್ಟ್ರೀಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು”
“66/11ಕೆ.ವಿ ಭಾರತೀಯ ಸಿಟಿ”ಸ್ಟೇಷನ್ ನಲ್ಲಿ ಶನಿವಾರ( ದಿನಾಂಕ 20.12.2025) ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 04:00 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
“ಭಾರತೀಯ ಸಿಟಿ ಎಂಟ್ರಾನ್ಸ್ / ಮುಖ್ಯ ರಸ್ತೆ, ಹಾಜ್ ಭವನ, ಬೆಳ್ಳಳ್ಳಿ ಸರ್ಕಲ್, ಬೆಳ್ಳಳ್ಳಿ ಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶ, ಭಾರತೀಯ ಸಿಟಿ ಬ್ಯಾಕ್ ಗೇಟ್, ಆರ್ಮಿ ಕಾಲೇಜ್, ಸ್ಲಮ್ ಬೋರ್ಡ್, ಕೆ.ಎಂ.ಪಿ. ಲೇಔಟ್, ಕಿಂಗ್ಸ್ಟನ್ ರೆಸಿಡೆನ್ಸಿ, ದಲಪ್ಪ ಲೇಔಟ್, ಮಾದರ್ ಥೆರೀಸಾ ಲೇಔಟ್, ನಾಗೆನಹಳ್ಳಿ ದಿನ್ನೆ, ನಾಗೆನಹಳ್ಳಿ ಕಾಲೋನಿ, ಬೆನ್ಜ್ ರಾಯಲ್ ವುಡ್ ಲೇಔಟ್, ಕುಂಬಾರ ಲೇಔಟ್, ಆದಿತ್ಯ ಲೇಔಟ್, ಈಸ್ಟರ್ ಲೇಕ್, ಈಸ್ಟರ್ ರ್ಮೋನಿ ಲೇಔಟ್, ಬಾಲಾಜಿ ಲೇಔಟ್, ನಾಗೆನಹಳ್ಳಿ ಕೆರೆ, ನಾಗೆನಹಳ್ಳಿ ಹಳ್ಳಿ, ರಿಜೆನ್ಸಿ ಪಾರ್ಕ್ ಲೇಔಟ್, ಅಂಜನಪ್ಪ ಲೇಔಟ್, ಕೊಠ್ನೂರು, ಸಿ.ಎಸ್.ಐ. ಲೇಔಟ್, ನಕ್ಷತ್ರ ಲೇಔಟ್, ಲಾಯರ್ ಲೇಔಟ್, ಭಿಲಾಥಿ ಬಾಂಡೆ ಲೇಔಟ್ ಮತ್ತು ಸುತ್ತಮುತ್ತಲಿನ ಲೇಔಟ್ ಗಳು”

