ಬೆಳಗಾವಿ: ನಮ್ಮ ದೇಶ ಸುಸಂಸ್ಜೃತಿ ವೈಭವ ಸಾರುವ ನಾಡು ಈ ನಾಡಿನಲ್ಲಿ ಧರ್ಮ, ಸಂಪ್ರದಾಯ, ಆರಾಧನೆ, ಜಾತ್ರೆ ಹೀಗೆ ವಿಶೇಷ ಆಚರಣೆಗಳು ನಾವು ಕಾಣುತ್ತೇವೆ. ಇದರ ಜೊತೆಯಲಿ ಅಪಾರ ದೈವ ನಂಬಿಕೆ ಹೊಂದಿದ್ದೇವೆ. ನಗರದ ಪ್ರದೇಶಗಳಲ್ಲಿರುವ ಜಾತ್ರೆಗಿಂತ ಪಟ್ಟಣ,ಹಳ್ಳಿಗಳಲ್ಲಿ ಜಾತ್ರಾ ಮಹೋತ್ಸವದ ಆಚರಣೆ ಮಾಡುವ ಉದಾಹರಣೆ ಸಾಕಷ್ಟು ಕಂಡಿದ್ದೇವೆ. ಅದೇ ರೀತಿ ಜಿಲ್ಲೆಯ ಗಡಿಭಾಗದಲ್ಲಿನ ಕೃಷ್ಣಾ ನದಿ ತೀರದ ಜಾಗೃತ ದೇವಿ ಎಂದು ಕರೆಸಿಕೊಳ್ಳುವ ಶ್ರೀ ಮಹಾಲಕ್ಷ್ಮೀ ದೇವಿಯ ಜಾತ್ರಾಮಹೋತ್ಸವ .ದಿ, ಉಗಾರ ಸಕ್ಕರೆ ಕಾರ್ಖಾನೆ ಹಾಗು ಪುರಸಭೆ ಸಹಯೋಗದಲ್ಲಿ ಪ್ರತಿ ವರ್ಷ ನೆರವೇರುತ್ತಾ ಬಂದಿದೆ.
ಕಿ.ಶ ಆರನೇ ಶತಮಾನದಲ್ಲಿ ಶ್ರೀ ಮಹಾಲಕ್ಷ್ಮೀ ದೇವಿ ಮೂರ್ತಿ ಆಗಿನ ಆಳ್ವಿಕೆಯಲ್ಲಿ ಹಿಂದೂ ಧರ್ಮದ ರಾಜ ಮನೆತನದವರು ಪ್ರತಿಷ್ಠಾಸಿದ್ದಾರೆ. ಆದರೆ ನಂತರ ದಿನಗಳಲ್ಲಿ 1931ರಲ್ಲಿ ಮಹಾರಾಷ್ಟ್ರದ ಸಾಂಗಲಿ ಪಟವರ್ಧನ ಸಂಸ್ಥೆ ಉಗಾರ ಖುರ್ದ ಪಟ್ಟಣದಲ್ಲಿ ಸರಕಾರನಡೆಸುವ ಮೂಲಕ ತಮ್ಮ ಹದ್ದಿಯಲ್ಲಿರುವ ದೇವಸ್ಥಾನದ ಜಾಗಗಳು ನೋಡಿಕೊಳ್ಳುತ್ತಿದ್ದರು.
1931 ರಲ್ಲಿ ಸಾಂಗಲಿ ಸಂಸ್ಥಾನ ಅಪ್ಪಾಸಾಹೇಬ ಪಟವರ್ಧನ ಸರಕಾರ ಜಾರಿಯಲ್ಲಿದಾಗ ಗ್ರಾಮ ಪಂಚಾಯತಿ ಸ್ಥಾಪನೆ ಮಾಡಿ ಶ್ರೀ ಮಹಾಲಕ್ಷೀ ದೇವಿ ಜಾತ್ರೆ ಆಚರಣೆೆ ಮಾಡಲು ಆದೇಶಿಸಿದರು.ಅಂದಿನಿಂದ ಇಂದಿನವರೆಗೆ ಗ್ರಾಮದೇವಿ ಶ್ರೀ ಮಹಾಲಕ್ಷ್ಮೀದೇವಿಯ ಜಾತ್ರಾ ಮಹೋತ್ಸವ ನೆರವೇರುತ್ತಾ ಬಂದಿದೆ.
ಗರ್ಭಗುಡಿಯಲ್ಲಿ ಎರಡು ಲಕ್ಷ್ಮೀ ದೇವಿಯ ಮೂರ್ತಿಯನ್ನು ನಾವು ಕಾಣುತ್ತೇವೆ. ಮೊದಲು ಗರ್ಭ ಗುಡಿಯಲ್ಲಿ ಪ್ರತಿಷ್ಠಾಪಿಸಿದ ಮೂರ್ತಿ ಭಿನ್ನ ಆಗಿದ್ದರಿಂದ ಕೃಷ್ಣಾ ನದಿಯಲ್ಲಿ ವಿಸರ್ಜನೆ ಮಾಡಿ ಮತ್ತೋಂದು ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಿದ್ದರು. ಆದರೆ ಊರಿನ ಗಣ್ಯ ವ್ಯಕ್ತಿಯ ಕನಿಸಿನಲ್ಲಿ ಬಂದ ಶ್ರೀ ಮಹಾಲಕ್ಷ್ಮೀ ದೇವಿ ನಾನು ಮೊದಲು ಎಲ್ಲೆ ಇದ್ದೆ ಅಲ್ಲೆ ನನ್ನನ್ನು ಮತ್ತೆ ಪ್ರತಿಷ್ಠಾಪಿಸಿರಿ ನಾನು ಜಾಗೃತದೇವಿಯಾಗಿದ್ದೇನೆ ಎಂದು ಹೇಳಿದಾಗ ಮತ್ತೆ ಪುನಃ ದೇವಿಯ ಮೂರ್ತಿಯನ್ನು ಗರ್ಭ ಗುಡಿಯಲ್ಲಿ ಸ್ಥಾಪನೆ ಮಾಡಲಾಯಿತು.
ಶ್ರೀ ಮಹಾಲಕ್ಷ್ಮೀ ದೇವಿ ಗಂಡ ಮತ್ತು ತವರು ಮನೆ ಊರಿನಲ್ಲೆ ಇದ್ದು ಹಿರಿಯರು ಹೇಳುತ್ತಾ ಬಂದಿದ್ದಾರೆ. ಸಾಂಗ್ಲೀ ಸಂಸ್ಥಾನ ಆಳ್ವಿಕೆಯಲ್ಲಿ ಮೊದಲು ದೇವಿ ಪ್ರತ್ಯಕ್ಷವಾಗಿ ಬಡಿಗೇರ ಮನೆತನದ ಭರಮು ಬಡಿಗೇರ ಅವರಿಗೆ ಒಲಿದಿದ್ದು ಅವರ ಮನೆಯ ಕುಲದೇವಿಯಾಗಿ ತವರು ಮನೆ ಎಂದು ಕರೆಸಿಕೊಂಡಿದ್ದಾಳೆ.
ಹಬ್ಬದ ಸಮಯ, ಜಾತ್ರೆಯಲ್ಲಿ ಶ್ರೀ ಮಹಾಲಕ್ಷ್ಮೀದೇವಿಯ ಪಲ್ಲಕಿ ಬಡಿಗೇರ ಮನೆಯಲ್ಲಿದ್ದ ದೇವಿಯ ಚೌರಾ (ಚೌರಿಯನ್ನು )ತೆಗೆದುಕೊಂಡು ಹೋಗುತ್ತಾರೆ. ಊರಿನ ಯಾವುದೇ ಹೆಣ್ಣು ಮಗಳು ಬೇರೆ ಊರಿಗೆ ಮದುವೆ ಮಾಡಿಕೊಂಡು ಹೋದರು ಸಹ ಅವರ ಸಂಕಲ್ಪನ್ನು ಈಡೆರಿಸಿದ ನಂತರ ಅವರು ಪ್ರತಿ ವರ್ಷ ದೇವಿಯ ಜಾತ್ರೆ ಬಂದು ದೀರ್ಘ ದಂಡ ನಮಸ್ಕಾರ ಸೇರಿದಂತೆ ಅನೇಕ ಹರಕೆ ಹಾಕಿ ತೀರಿಸುತ್ತಾರೆ.
ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರೆ ಅಕ್ಷಯ ತೃತೀಯ ಆಗಿ ಎಂಟನೆ ದಿನದಂದು ಆಚರಿಸಿಲಾಗುತ್ತಿತ್ತು. ಮೊದಲು ದೇವಿಯ ಜಾತ್ರೆ ಗ್ರಾಮದ ಕೃಷ್ಣಾ ನದಿ ದಂಡೆ ಪಕ್ಕದಲ್ಲಿರುವ ಪಂಪಿಗ್ ಸ್ಟೇಶನ ಬಾಗಡಿ ಗಲ್ಲಿಯಲ್ಲಿ ಆಚರಿಸುವ ಸಮಯದಲ್ಲಿ ಮಾರುತಿ ದೇವಸ್ಥಾನ ಹತ್ತಿರ ಭಕ್ತರು ಓಕುಳಿ ಆಡಿ ಸಂಭ್ರಮಿಸುತಿದ್ದರು. ನಂತರ ದಿನಗಳಲ್ಲಿ ದೇವಸ್ಥಾನದ ಹತ್ತಿರ ಜಾತ್ರೆ ಆಚರಣೆಗೆ ಪ್ರಾರಂಭಿಸಿದ ಹಿನ್ನಲೆ ಜನ ಸೇರುವುದಕ್ಕೆ ಶುರು ಮಾಡಿದರು. ಶ್ರೀ ಮಹಾಲಕ್ಷ್ಮೀ ದೇವಿ ಜಾಗೃತವಾಗಿ ನೆಲೆಸಿ ಭಕ್ತರ ಇಷ್ಟಾರ್ಥ ನೆರವೇರಿಸುತ್ತಿದ್ದಾಳೆ.
ಈ ಬಾರಿ ಶುಕ್ರವಾರ 17 ಮೇ ರಿಂದ 21 ಮೇ ವರೆಗೂ ಜಾತ್ರಾಮಹೋತ್ಸವ ನಡೆಲಿದ್ದು,ಜಾತ್ರೆಯ ನಿಮಿತ್ತವಾಗಿ ಮೊದಲ ದಿನದಂದು ಪೂಜೆ, ಅಭಿಷೇಕ, ಪಲ್ಲಕಿ ಗ್ರಾಮ ಪ್ರದಕ್ಷೀಣೆ ನೆರವೇರುತ್ತದೆ. ಎರಡನೆ ದಿನದಂದು ನೆವೇದ್ಯ, ಮೂರನೆ ದಿನದಂದು ಜಾನಾವಾರು ಪ್ರದರ್ಶನ ,ಮಹಾಪ್ರಸಾದ ಬಹುಮಾನ ವಿತರಣ ಸಮಾರಂಭ,ಮೇ 21ರಂದು ಜಾತ್ರೆಯ ಸಮಾರೋಪ ಸಮಾರಂಭ ಜರಗುಲಿದೆ ಎಂದು ಶ್ರೀ ಮಹಾಲಕ್ಷ್ಮೀದೇವಿಯ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.