Mon. Dec 23rd, 2024

ಮೇ 31ಕ್ಕೆ ಪ್ರಜ್ವಲ್ ಭಾರತಕ್ಕೆ ವಾಪಸ್:ಆದರೂ ಸಣ್ಣ ಅನುಮಾನ

Share this with Friends

ಬೆಂಗಳೂರು,ಮೇ.29: ಸಂಸದ ಪ್ರಜ್ವಲ್ ರೇವಣ್ಣ ಮೇ 31ಕ್ಕೆ ಭಾರತಕ್ಕೆ ವಾಪಸ್ ಆಗುವುದಾಗಿ ಸ್ವತಃ ಅವರೇ ತಿಳಿಸಿದ್ದರೂ ಒಂದು ಮೂಲೆಯಲ್ಲಿ ಅನುಮಾನ ಇದ್ದೇ ಇದೆ

ಈಗಾಗಲೇ ಮ್ಯೂನಿಕ್‍ನಿಂದ ಬೆಂಗಳೂರಿಗೆ ಬರಲು ಪ್ರಜ್ವಲ್ ರೇವಣ್ಣ ಲುಫ್ತಾನ್ಸಾ ಏರ್‌ಲೈನ್ಸ್ ಬುಕ್ ಮಾಡಿದ್ದಾರೆ.

ಮೇ 31ರ ಮಧ್ಯರಾತ್ರಿ ಪ್ರಜ್ವಲ್ ಬೆಂಗಳೂರಿಗೆ ಬರುತ್ತಿದಂತೆ ಏರ್ ಪೋರ್ಟ್‍ನಲ್ಲೇ ಬಂಧಿಸಲು ಎಸ್‍ಐಟಿ ಅಧಿಕಾರಿಗಳು ಸಜ್ಜಾಗಿದ್ದಾರೆ.

ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್‌ ರೇವಣ್ಣ ಸೋಮವಾರ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದರು.

ಅದರಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಎಸ್‌ಐಟಿ ಮುಂದೆ ಹಾಜರಾಗಿ ಉತ್ತರ ನೀಡುತ್ತೇನೆ, ಕುಟುಂಬಸ್ಥರು ಮತ್ತು ರಾಜ್ಯದ ಜನತೆಯಲ್ಲಿ ಕ್ಷಮೆ ಕೇಳುತ್ತಿದ್ದೇನೆ ಎಂದು ಹೇಳಿದ್ದರು.

ಈ ನಡುವೆ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನಿಗೂ ಅರ್ಜಿ ಸಲ್ಲಿಸಿದ್ದಾರೆ. ಈ ಮೊದಲು ಎರಡು ಮೂರು ಬಾರಿ ಅವರು ವಾಪಸಾಗಲು ಟಿಕೆಟ್ ಬುಕ್ ಮಾಡಿ ರದ್ದು ಮಾಡಿದ್ದರು.ಹಾಗಾಗಿ ಅವರ ಬರುವಿಕೆಯಲ್ಲಿ ಒಂದು ಸಣ್ಣ ಅನುಮಾನ ಮೂಡಿದೆ.ಎಲ್ಲದಕ್ಕೂ ಮೇ.31 ರಂದು ಉತ್ತರ ಸಿಗಲಿದೆ.


Share this with Friends

Related Post