Sat. Dec 28th, 2024

ಪ್ರಜ್ವಲ್ ಗೆ ಜೂನ್ 24 ರವರೆಗೆ ನ್ಯಾಯಾಂಗ ಬಂಧನ

Share this with Friends

ಬೆಂಗಳೂರು,ಜೂ.18: ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಎಸಿಎಂಎಂ ವಿಶೇಷ ನ್ಯಾಯಾಲಯ ಜೂನ್ 24 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

42ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜೂನ್ 12 ರಂದು ಪ್ರಜ್ವಲ್ ವಿರುದ್ಧದ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಜೂನ್ 18 ರವರೆಗೆ ವಶಕ್ಕೆ ನೀಡಿತ್ತು.

ಮೇ 31 ರಂದು ಜರ್ಮನಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ರೇವಣ್ಣನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದರು.


Share this with Friends

Related Post