Mon. Dec 23rd, 2024

ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು

Share this with Friends

ಬೆಂಗಳೂರು,ಏ.30: ಸತತ ಆರೋಪಗಳು ಕೇಳಿ ಬಂದ ಕಾರಣ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಅಮಾನತು ಪಡಿಸಲಾಗಿದೆ.

ಈ ಕುರಿತು ಮಾತನಾಡಿದ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ, ಪ್ರಜ್ವಲ್‌ ಅಮಾನತಿಗೆ ನಿನ್ನೆಯೇ ನಿರ್ಧಾರ ಮಾಡಲಾಗಿತ್ತು, ತಪ್ಪು ಯಾರೇ ಮಾಡಿದರೂ ತಪ್ಪೇನೆ,ಎಸ್ ಐ ಟಿ ತನಿಖೆಯ ವರದಿ ಬಂದ ಬಳಿಕ ಈ ಬಗ್ಗೆ ಮಾತನಾಡುವೆ ಎಂದು ಹೇಳಿದರು.

ಪೆನ್‍ಡ್ರೈವ್ ಸುಳಿಯಲ್ಲಿರುವ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಹಾಸನ, ಹುಬ್ಬಳ್ಳಿ ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಯುತ್ತಿದೆ. ಆತ ಮನುಷ್ಯನಲ್ಲ, ದೇವೇಗೌಡರ ಮೊಮ್ಮಗ ಅಂತ ಬಿಡಬಾರದು,ಕೂಡಲೇ ಪ್ರಜ್ವಲ್ ಬಂಧಿಸಬೇಕೆಂದು ಆಗ್ರಹಿಸುತ್ತಿದ್ದಾರೆ.

ಇದರ ಬೆನ್ನಲ್ಲೇ ಪ್ರಜ್ವಲ್ ಅಮಾನತು ಮಹತ್ವ ಪಡೆದುಕೊಂಡಿದೆ, ಪ್ರಜ್ವಲ್ ಪ್ರಕರಣವನ್ನು ಈಗಾಗಗಲೇ ಎಸ್‍ಐಟಿ ಕೈಗೆತ್ತಿಕೊಂಡಿದೆ.

ಹೊಳೆ ನರಸಿಪುರದಲ್ಲಿ ದಾಖಲಾಗಿರುವ ಎಫ್ ಐಆರ್ ಅಧಾರದ ಮೇಲೆ ತನಿಖೆ ನಡೆಸಲಿದೆ,ಆದರೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿದ್ದಾರೆ.

ಪ್ರಜ್ವಲ್ ರೇವಣ್ಣ‌ ವಿಚಾರ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿ ಆಗಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬಕ್ಕೂ ಮುಜುಗರ ಉಂಟಾಗಿತ್ತು.

ಅಲ್ಲದೆ, ಸ್ವತಃ ಜೆಡಿಎಸ್ ಶಾಸಕರೇ ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮ ಕೈಗೊಳ್ಳಬೇಕು, ಜೆಡಿಎಸ್ ಪಕ್ಷದಿಂದಲೇ ಉಚ್ಛಾಟನೆ ಮಾಡಬೇಕು ಎಂದು ಬಂಡಾಯ ಎದ್ದಿದ್ದರು.
ಇದೆಲ್ಲದರಿಂದ ವಿಚಲಿತರಾದ ಜೆಡಿಎಸ್ ರಾಷ್ಟ್ರೀಯ ‌ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು ಸ್ವಂತ ಮೊಮ್ಮಗನ ವಿರುದ್ಧ ಕ್ರಮಕ್ಕೆ ಆದೇಶಿಸಿದ್ದಾರೆ,ಹಾಗಾಗಿ ಪ್ತಜ್ವಲ್‌ ಅಮಾನತು ಗೊಂಡಿದ್ದಾರೆ.


Share this with Friends

Related Post