Fri. Mar 20th, 2026

ಪೂರ್ವ ಮುಂಗಾರು ಅಬ್ಬರ: ವಿದ್ಯುತ್ ಸುರಕ್ಷತೆಗೆ ಬೆಸ್ಕಾಂ ಕಟ್ಟೆಚ್ಚರ, ಸಹಾಯವಾಣಿ ಸಂಖ್ಯೆ ಪ್ರಕಟ

Share this with Friends

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳೆದ ಎರಡು ದಿನಗಳಿಂದ ಪೂರ್ವ ಮುಂಗಾರು ಮಳೆ ಚುರುಕುಗೊಂಡಿದ್ದು, ಸಾವು-ನೋವು ಹಾಗೂ ಆಸ್ತಿ ಪಾಸ್ತಿ ಹಾನಿ ತಡೆಗಟ್ಟಲು ಬೆಸ್ಕಾಂ (BESCOM) ಸಾರ್ವಜನಿಕರಿಗೆ ಮಹತ್ವದ ಸುರಕ್ಷತಾ ಮಾರ್ಗಸೂಚಿಗಳನ್ನು ನೀಡಿದೆ.

ಗಾಳಿ-ಮಳೆಗೆ ವಿದ್ಯುತ್ ಕಂಬಗಳು ವಾಲುವುದು ಅಥವಾ ತಂತಿಗಳು ತುಂಡಾಗಿ ಬೀಳುವ ಸಾಧ್ಯತೆ ಹೆಚ್ಚಿರುವುದರಿಂದ, ಸಾರ್ವಜನಿಕರು ಇಂತಹ ಸ್ಥಳಗಳಿಂದ ದೂರವಿರಬೇಕು. ಯಾವುದೇ ತುರ್ತು ಸಂದರ್ಭದಲ್ಲಿ ತಕ್ಷಣವೇ ಸಮೀಪದ ಬೆಸ್ಕಾಂ ಕಚೇರಿ ಅಥವಾ 1912 ಸಹಾಯವಾಣಿಗೆ ಕರೆ ಮಾಡುವಂತೆ ಮನವಿ ಮಾಡಲಾಗಿದೆ.

ಮರದ ಕೆಳಗೆ ನಿಲ್ಲಬೇಡಿ:

ಧಾರಾಕಾರ ಮಳೆ ಸುರಿಯುವಾಗ ವಿದ್ಯುತ್ ಲೈನ್‌ಗಳು ಹಾದುಹೋಗಿರುವ ಮರಗಳ ಕೆಳಗೆ ಅಥವಾ ಟ್ರಾನ್ಸ್‌ಫಾರ್ಮರ್‌ಗಳ (ವಿದ್ಯುತ್ ಪರಿವರ್ತಕ) ಹತ್ತಿರ ಆಶ್ರಯ ಪಡೆಯಬಾರದು. ಕಂಬಗಳು ಬಿದ್ದಿರುವುದು ಕಂಡುಬಂದಲ್ಲಿ ಸ್ವತಃ ಸರಿಪಡಿಸಲು ಮುಂದಾಗದೆ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಎಚ್ಚರಿಸಲಾಗಿದೆ.

ವಾಟ್ಸ್ ಆಪ್ ಮೂಲಕ ದೂರು ನೀಡಿ:

ಮಳೆಯ ಸಮಯದಲ್ಲಿ ಕರೆಗಳ ಒತ್ತಡದಿಂದ 1912 ಸಂಖ್ಯೆ ಲಭ್ಯವಾಗದಿದ್ದರೆ, ಗ್ರಾಹಕರು ತಮ್ಮ ಜಿಲ್ಲಾವಾರು ನಿಗದಿಪಡಿಸಿದ ವಾಟ್ಸ್ ಆಪ್ ಸಂಖ್ಯೆಗಳಿಗೆ ಫೋಟೋ ಅಥವಾ ವಿಡಿಯೋ ಸಹಿತ ದೂರು ಕಳುಹಿಸಬಹುದು.

ಜಿಲ್ಲಾವಾರು ವಾಟ್ಸ್ ಆಪ್ ಸಹಾಯವಾಣಿಗಳು:

ಬೆಂಗಳೂರು ನಗರ: 8277884011 (ದಕ್ಷಿಣ), 8277884012 (ಪಶ್ಚಿಮ), 8277884013 (ಪೂರ್ವ), 8277884014 (ಉತ್ತರ).

ಬೆಂಗಳೂರು ಗ್ರಾಮಾಂತರ: 8277884017

ರಾಮನಗರ: 8277884018

ತುಮಕೂರು: 8277884019

ಕೋಲಾರ: 8277884015

ಚಿಕ್ಕಬಳ್ಳಾಪುರ: 8277884016

ಚಿತ್ರದುರ್ಗ: 8277884020

ದಾವಣಗೆರೆ: 8277884021

ಸಾರ್ವಜನಿಕರು ಈ ಸಂಖ್ಯೆಗಳನ್ನು ಬಳಸಿಕೊಂಡು ಮಾಹಿತಿ ನೀಡಿದರೆ ತ್ವರಿತವಾಗಿ ಸ್ಪಂದಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.


Share this with Friends

Related Post