Mon. Dec 23rd, 2024

ಲೋಕಸಭಾ ಚುನಾವಣೆ ಜಿಲ್ಲೆಯಲ್ಲಿ ಸುಗುಮ ಶಾಂತಿಯುತ ಮತದಾನಕ್ಕೆ ಸಕಲ‌ಸಿದ್ದತೆ:ಜಿಲ್ಲಾಧಿಕಾರಿ ನಿತೇಶ ಪಾಟೀಲ

Share this with Friends

ಬೆಳಗಾವಿ : ಜಿಲ್ಲೆಯಲ್ಲಿ‌ ಮೇ 07 ರಂದು ಎರಡು ಮತಕ್ಷೇತ್ರದಲ್ಲಿ ಚುನಾವಣೆ ನಡೆಯಲಿದ್ದು ಯಾವುದೇ ಲೋಪ ದೋಷಗಳಾಗದಂತೆ ‌ಈಗಾಗಾಲೇ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ‌ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಿತೇಶ ಪಾಟೀಲ ಹೇಳಿದರು.

ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈಗಾಗಲೇ ಮತದಾನ ಜಾಗೃತಿ ಬಗ್ಗೆ ಜಿಲ್ಲಾ ಸ್ವೀಪ್ ಸಮೀತಿಯಿಂದ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.

02-ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ 957559 ಪುರುಷ ಮತದಾರರು, 966134 ಮಹಿಳೆಯರು, 95 ಇತರೆ ಸೇರಿದಂತೆ 1923788 ಮತದಾರರಿದ್ದಾರೆ. 01-ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದಲ್ಲಿ 885200 ಪುರಷರು, 876414 ಮಹಿಳೆಯರು ಹಾಗೂ 80 ಇತರೆ ಮತದಾರರು ಸೇರಿದಂತೆ ಒಟ್ಟು 1761694 ಮತದಾರರಿದ್ದಾರೆ ಮಾಹಿತಿ‌‌ ನೀಡಿದರು.

ಮತದಾನ ನಡೆಯುವ 48 ಗಂಟೆಗಳ ಮುನ್ನಾ ಕಾನೂನುಬಾಹಿರ ಸಭೆಗಳನ್ನು ನಿಷೇಧಿಸಲಾಗಿದೆ ಹಾಗೂ ಸಾರ್ವಜನಿಕ ಸಭೆಗಳನ್ನು ನಡೆಸುವುದನ್ನು ನಿಷೇಧಿಸುವ ಬಗ್ಗೆ ಆದೇಶಗಳನ್ನು ನೀಡಲಾಗಿದೆ. ಇನ್ನು ಚುನಾವಣೆಗೆ ಶಾಲಾ‌,ಕಾಲೇಜುಗಳು, ಉದ್ಯಮ ಕೈಗಾರಿಕೆಗಳು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಆರ್‌ಪಿ ಕಾಯ್ದೆ 1951 ರ ಸೆಕ್ಷನ್ 135 ಬಿ ಪ್ರಕಾರ ಪಾವತಿಸಿದ ರಜೆಯನ್ನು ಮಂಜೂರು ಮಾಡಲು ಆದೇಶಿಸಲಾಗಿದೆಂದರು.

ಲೋಕಸಭಾ ಕ್ಷೇತ್ರಗಳಿಗೆ ಸಾರ್ವತ್ರಿಕ ಚುನಾವಣೆಯ ಪ್ರಚಾರದ ಅವಧಿ ಮುಗಿದ ನಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದೇ ಪ್ರಚಾರ ನಡೆಸುವಂತಿಲ್ಲ, ಕ್ಷೇತ್ರದ ಹೊರಗಿನಿಂದ ಕರೆತಂದಿರುವ ರಾಜಕೀಯ ಕಾರ್ಯಕರ್ತರು/ ಪಕ್ಷದ ಕಾರ್ಯಕರ್ತರು/ ಮೆರವಣಿಗೆ/ ಪದಾಧಿಕಾರಿಗಳು/ ಪ್ರಚಾರ-ಕಾರ್ಯಕರ್ತರು ಮುಂತಾದವರು ಸೇರಿದಂತೆ ಆ ಕ್ಷೇತ್ರದ ಮತದಾರರಲ್ಲದ ರಾಜಕೀಯ ವ್ಯಕ್ತಿಗಳು ಕ್ಷೇತ್ರವನ್ನು ತೊರೆಯಬೇಕು. ಜೊತೆಗೆ‌ ಕಲ್ಯಾಣ ಮಂಟಪಗಳು / ಸಮುದಾಯ ಭವನಗಳು ಇತ್ಯಾದಿಗಳನ್ನು ಪರಿಶೀಲಿಸುವುದು, ಈ ಆವರಣದಲ್ಲಿ ಯಾರಾದರೂ ಹೊರಗಿನವರಿಗೆ ವಸತಿ ಕಲ್ಪಿಸಲಾಗಿದೆಯೇ ಎಂದು ಪರಿಶೀಲಿಸಲು ಸೂಚಿಸಲಾಗಿದೆ. ಕ್ಷೇತ್ರದ ಗಡಿಗಳಲ್ಲಿ ಚೆಕ್ ಪೋಸ್ಟಗಳನ್ನು ಸ್ಥಾಪಿಸಿ ಕ್ಷೇತ್ರದ ಹೊರಗಿನಿಂದ ಬರುವ ವಾಹನಗಳ ಚಲನವಲನದ ನಿಗಾವಹಿಸಲಾಗಿದೆ ಎಂದರು.

ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮ ಯಾವುದೇ ಸಮೀಕ್ಷೆ ನಡೆಸುವ ಮೂಲಕ ಮತದಾರರ ಮೇಲೆ‌ಪ್ರಭವ ಬೀರಬಾರದು ಏಳು ಹಂತಗಳ‌ ಚುನಾವಣೆ ಮುಗಿಯುವರೆಗೆ ಸಮೀಕ್ಷೆ, ಜನಾಭಿಪ್ರಾಯ ನಡೆಸದಂತೆ ಮಾಧ್ಯಮಗಳಿಗೆ ಸೂಚಿಸಲಾಗಿದೆಂದರು.

ಮತದಾರರ ಅನೂಕೂಲಕ್ಕಾಗಿ ಬಿಸಲಿನ ತಾಪ ನೀಗಿಸಲು ಕುಡಿಯುಬಮವ ಜೀರು, ವಿಶ್ರಾಂತಿ‌ಕೊಠಡಿ, ವಿದ್ಯುತ‌ ಸಂಪರ್ಕ , ಶೌಚಾಲಯ, ತುರ್ತು ಸಮಯದಲದಲಿ‌ ಅಂಬುಲೇನ್ಸ ಸೇರಿದಂತೆ ಮುಂತಾದಗಳಿಗೆ ಈಗಾಗಲೇ ಜಿಲ್ಲೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರತಿ ಬೂತ್‌ಗಳಲ್ಲಿ ಕೇವಲ ಒಂದು ಟೇಬಲ್ ಮತ್ತು ಎರಡು ಕುರ್ಚಿಗಳನ್ನು ಮಾತ್ರ ಮತದಾನ ಕೇಂದ್ರದ ಆವರಣದ 200 ಮೀಟರ್ ಹೊರಗಿನ ಜಾಗದಲ್ಲಿ ನೆರಳಿಗಾಗಿ ತಾತ್ಕಾಲಿಕ ಟೆಂಟ್ ಹಾಕಿಕೊಳ್ಳಬಹುದಾಗಿದೆ. ಮತದಾನದ ದಿನಾಂಕದಂದು ಮತಗಟ್ಟೆಗಳ ಸುತ್ತಲಿನ 200 ಮೀಟರ್ ಪ್ರದೇಶದಲ್ಲಿ ಯಾವುದೇ ಚುನಾವಣಾ ಪ್ರಚಾರವನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮರ್ಬನ್ಯಾಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಡಿಸಿಪಿ ರೋಹನ್ ಜಗದೀಶ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಶುಭಂ ಶುಕ್ಲಾ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


Share this with Friends

Related Post