Tue. Dec 24th, 2024

ಪಕ್ಷ ಸೂಚನೆ ಕೊಟ್ಟಂತೆ ಕೆಲಸ ಮಾಡುತ್ತೇನೆ:ಪ್ರೀತಮ್ ಗೌಡ ಸ್ಪಷ್ಟನೆ

Share this with Friends

ಮೈಸೂರು,ಏ.7: ಕಾಶ್ಮೀರಕ್ಕೆ ಹೋಗು ಅಂದರೂ ಹೋಗುವೆ,ಕನ್ಯಾಕುಮಾರಿಗೆ ಅಂದ್ರೂ ಹೋಗ್ತಿನಿ ಒಟ್ಟಾರೆ
ಪಕ್ಷ ಹೇಳಿದ ಕಡೆ ಹೋಗುತ್ತೇನೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ ಹೇಳಿದರು.

ನಾನು ಪಕ್ಷದ ಕಾರ್ಯದರ್ಶಿ,
ಅದಕ್ಕಾಗಿ ಮೈಸೂರಿಗೆ ಬಂದಿದ್ದೇನೆ,
ಇಂದು ಮೈಸೂರು ಚಾಮರಾಜನಗರ ಕಾರ್ಯಕರ್ತರ ಸಭೆ ಮಾಡುತ್ತೇನೆ ಎಂದು ‌ಸ್ಪಷ್ಟಪಡಿಸಿದರು.

ಸದಾನಂದ ಗೌಡರು ಹಾಸಕ್ಕೆ ಹೋಗಿದ್ರು.
ಯಾಕೆ ಹಾಸನಕ್ಕೆ ಹೋಗಿದ್ರಿ ಅಂತ ಕೇಳೋಕೆ ಆಗುತ್ತಾ,ನಾನು ಪಕ್ಷ ಹೇಳಿದ ಕಡೆ ಹೋಗುತ್ತೇನೆ ಎಂದು ಮಾಧ್ಯಮದವರಿಗೆ ತಿಳಿಸಿದರು.

ಪ್ರಜ್ವಲ್ ರೇವಣ್ಣ ಭೇಟಿ ವಿಚಾರ ಗೊತ್ತಿಲ್ಲ,ನನಗೆ ಈ ಬಗ್ಗೆ ಮಾಹಿತಿ ಇಲ್ಲ,
ಎನ್.ಡಿ.ಎ ಅಭ್ಯರ್ಥಿ ಗೆಲ್ಲಬೇಕು‌ ಅಷ್ಟೇ ಎಂದರು.

ಪ್ರೀತಮ್ ಗೌಡ ಮುಖ ನೋಡಿ ಯಾರೂ ಮತ ಹಾಕಲ್ಲಾ,ನಮ್ಮ ಮನೆಯಲ್ಲೂ ಮೋದಿ ಮುಖ ನೋಡಿ ಮತ ಹಾಕ್ತಾರೆ,
ಇದು ಪಂಚಾಯಿತಿ ಚುನಾವಣೆಯಲ್ಲ, ದೇಶದ ಚುನಾವಣೆ,ಪಕ್ಷದ ವರಿಷ್ಠರು ಸೂಚನೆ ಕೊಟ್ಟಂತೆ ಕೆಲಸ ಮಾಡುತ್ತೇನೆ ಎಂದು ಪ್ರೀತಮ್ ಗೌಡ ತಿಳಿಸಿದರು.


Share this with Friends

Related Post