Wed. Jan 1st, 2025

ಯುಗಾದಿ ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

Share this with Friends

ಮೈಸೂರು,ಏ.12: ಕೆ ಎಂ ಪಿ ಕೆ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಆನ್ಲೈನ್ ರಂಗೋಲಿ ಸ್ಪರ್ಧೆಯ ವಿಜೇತರಿಗೆ ಇಂದು ಬಹುಮಾನ ವಿತರಿಸಲಾಯಿತು.

ನಗರದ ರಾಮಾನುಜ ರಸ್ತೆಯಲ್ಲಿರುವ ನಮೋ ಯೋಗ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.

ಈ ವೇಳೆ ಮಾತನಾಡಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷಡಿ ಟಿ ಪ್ರಕಾಶ್ ಅವರು,ಯುಗಾದಿಯನ್ನ ಸಂಭ್ರಮದಿಂದಆಚರಿಸಿದಂತೆಯೇ,
ಲೋಕಸಭಾ ಚುನಾವಣೆಯನ್ನ ಪ್ರಜಾಪ್ರಭುತ್ವದ ಹಬ್ಬವನ್ನಾಗಿ ಆಚರಿಸಬೇಕು ಎಂದು ಕರೆ ನೀಡಿದರು.

ಸಂವಿಧಾನ ನಮಗೆ ಮತದಾನದ ಹಕ್ಕು ಕೊಟ್ಟಿದೆ. ಆದರೆ ಬಹಳ ಜನ ಮತದಾನದಿಂದ ದೂರ ಉಳಿಯುತ್ತಾರೆ. ಇದರಿಂದ ಮತದಾನ ಪ್ರಮಾಣ
ಕಡಿಮೆಯಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಮಾಜ ಸೇವಕ ಕೆ ರಘುರಾಮ್ ವಾಜಪೇಯಿ ಮಾತನಾಡಿ,ರಂಗ ಅಂದರೆ ವಿಷ್ಣು ರಂಗವಲ್ಲಿ ಮೂಲಕ ವಿಷ್ಣುವನ್ನು ಬರಮಾಡಿಕೊಳ್ಳುವುದೇ ರಂಗೋಲಿ ಮನೆ ಮುಂದೆ ರಂಗೋಲಿ ಬಿಡಿಸುವುದು ಶುಭ ಸೂಚನೆಯ ಸಂಕೇತ ರಂಗೋಲಿಯನ್ನು ದಾಟಿಕೊಂಡು ಹೊರಗೆ ಹೋದರೆ ಶುಭ ಎಂಬ ಮಾತಿದೆ ಎಂದು ತಿಳಿಸಿದರು.

ಹೆಣ್ಣಿಗೆ ಹಣೆಯಲ್ಲಿ ಕುಂಕುಮ, ಸಿಂಧೂರ ಎಷ್ಟು ಮುಖ್ಯವೋ ಅದೇ ರೀತಿ ಮನೆಗೆ ರಂಗೋಲಿಯೂ ಅಷ್ಟೇ ಮುಖ್ಯ ರಂಗೋಲಿ ನಮ್ಮ ಭಾರತೀಯ ಸಂಪ್ರದಾಯದ ಪ್ರತೀಕ ಎಂದು ನುಡಿದರು.

ಒಟ್ಟು 350 ಸ್ಪರ್ಧಿಗಳು ಭಾಗವಹಿಸಿದ್ದರು, ಅತ್ಯುತ್ತಮ 10 ಸ್ಪರ್ಧಾಳುಗಳಾದ
ಕುವೆಂಪು ನಗರ ನಿವಾಸಿ ಗೀತಾ, ಕುಂಬಾರಕೊಪ್ಪಲಿನ ವಿಜಯಲಕ್ಷ್ಮಿ, ದೇವಿರಮ್ಮಣಿ ಅಗ್ರಹಾರದ ವಿಜಯಲಕ್ಷ್ಮಿ ಕುಲಕರ್ಣಿ, ಹಿನಕಲ್ ನ ದೇವಕಿ, ಶ್ರೀರಾಂಪುರದ ವಿಮಲಾ ಪರಿಶಿವಮೂರ್ತಿ, ಸರಸ್ವತಿಪುರಂನ ಸಾನ್ವಿ. ಸಿ, ಕುವೆಂಪು ನಗರದ ಸುಧಾ ಪ್ರಸಾದ್, ವಿದ್ಯಾನಗರದ ವಿಜಯ. ಆರ್, ಜೆ ಸಿ ನಗರದ ಜೆ ನಾಗು ಬಾಯ್, ಕೃಷ್ಣಮೂರ್ತಿಪುರಂನ ಉಷಾರಾಣಿ, ರವರಿಗೆ ಬಹುಮಾನ ಪಡೆದುಕೊಂಡರು.

ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಚಕ್ರಪಾಣಿ, ಶ್ರೀಕಾಂತ್ ಕಶ್ಯಪ್, ನಾಗಶ್ರೀ ಸುಚಿಂದ್ರ, ಮಿರ್ಲೆ ಪಣೀಶ್ ಮತ್ತಿತರರು ಉಪಸ್ಥಿತರಿದ್ದರು.


Share this with Friends

Related Post