Sun. Dec 22nd, 2024

ಮೈಸೂರು ಕೇಂದ್ರ ಕಾರಾಗೃಹದ ಆವರಣದಲ್ಲಿ ನಿಷೇಧಿತ ವಸ್ತು ಪತ್ತೆ

Share this with Friends

ಮೈಸೂರು: ಮೈಸೂರಿನ ಕೇಂದ್ರ ಕಾರಾಗೃಹದ ಆವರಣದಲ್ಲಿ ನಿಷೇಧಿತ ವಸ್ತುಗಳು ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿದೆ.

ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಕಪ್ಪು ಬಣ್ಣದ ಬಟ್ಟೆಯಲ್ಲಿ ಸುತ್ತಿದ ಪ್ಯಾಕೆಟ್ ಕಂಡು ಬಂದಿದೆ.

ತಕ್ಷಣ ಆ ವಸ್ತುವನ್ನು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲಿಸಿದಾಗ ಪ್ಯಾಕೆಟ್ ನಲ್ಲಿ ಒಂದು ಮೊಬೈಲ್, ಬ್ಯಾಟರಿ‌ ಹಾಗೂ ಗಾಂಜಾ ಕಂಡು ಬಂದಿದೆ.

ಸ್ಮಶಾನಕ್ಕೆ ಹೊಂದಿಕೊಂಡಂತೆ ಇರುವ ಕಾರಾಗೃಹದ ಗೋಡೆ ಒಳಗೆ ವಸ್ತುಗಳು ಪತ್ತೆಯಾಗಿದ್ದು,ಹೊರಗಿನಿಂದ ಅನಾಮಧೇಯ ವ್ಯಕ್ತಿಗಳು ಕಾರಾಗೃಹದ ಒಳಗೆ ಎಸೆದಿರಬಹುದೆಂದು ಶಂಕಿಸಲಾಗಿದೆ.

ಮಂಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Share this with Friends

Related Post