Wed. Dec 25th, 2024

ಲಾಡ್ಜ್ ನಲ್ಲಿ ವೇಶ್ಯಾವಟಿಕೆ:ಇಬ್ಬರು ಯುವತಿಯರ ರಕ್ಷಣೆ

Share this with Friends

ಮೈಸೂರು,ಜು.8: ವೇಶ್ಯಾವಟಿಕೆ ನಡೆಯುತ್ತಿದ್ದ ಲಾಡ್ಜ್ ಮೇಲೆ ದಾಳಿ ನಡೆಸಿದ ಸಿಸಿಬಿ ಹಾಗೂ ವಿಜಯನಗರ ಠಾಣೆ ಪೊಲೀಸರು ಇಬ್ಬರು ಯುವತಿಯರನ್ನ ರಕ್ಷಿಸಿದ್ದಾರೆ.

ವಿಜಯನಗರದ ಟ್ಯಾಂಕ್ ರಸ್ತೆಯಲ್ಲಿರುವ ಕರಣ್ ರೆಸಿಡೆನ್ಸಿಯಲ್ಲಿ ವೇಶ್ಯಾವಟಿಕೆ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿ ಸಿಸಿಬಿ ಹಾಗೂ ವಿಜಯನಗರ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.

ಈ ವೇಳೆ ಜಾರ್ಖಂಡ್ ನ ಒಬ್ಬ ಯುವತಿ ಹಾಗೂ ಹುಣಸೂರಿನ ಒಬ್ಬ ಯುವತಿಯನ್ನ ಪೊಲೀಸರು ರಕ್ಷಿಸಿದ್ದು,ಮೂವರು‌ ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದಾರೆ.

ಹುಬ್ಬಳ್ಳಿ ರಾಜು ಎಂಬುವರು ಲಾಡ್ಜ್ ನಡೆಸುತ್ತಿದ್ದರೆಂದು ಹೇಳಲಾಗಿದೆ.6 ತಿಂಗಳ ಹಿಂದೆ ಇದೇ ಲಾಡ್ಜ್ ನಲ್ಲಿ ವೇಶ್ಯಾವಟಿಕೆ ನಡೆಯುತ್ತಿದ್ದ ಹಿನ್ನಲೆ ದಾಳಿ ನಡೆಸಲಾಗಿತ್ತು

ಈ‌ ಸಂಬಂಧ ವಿಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post