ಬೆಂಗಳೂರು, ಏ.30: ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಪ್ರಕರಣ ಪ್ರಬಂಧ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ.
ಬೆಂಗಳೂರು, ಹುಬ್ಬಳ್ಳಿ, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರತಿಭಟನೆ ಮಾಡಿ ಅವರನ್ನು ಬಂಧಿಸಬೇಕು ಎಂಬ ಭತ್ತಾಯ ಕೇಳಿಬಂದಿದೆ.
ಪ್ರಜ್ವಲ್ ಪ್ರಕರಣ ಮಹಿಳಾ ವರ್ಗಕ್ಕೆ ಮಾಡಿರುವ ಅಪಮಾನವಾಗಿದ್ದು,ಅವರು ಮಾಡಿರುವ ಘಟನೆ ಅಮಾನವೀಯ ಎಂದು ವಿವಿಧ ಸಂಘಟನೆಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮಹಿಳಾ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದವು.
ಹಾಸನದ ಪೆನ್ ಡ್ರೈವ್ ಬಗ್ಗೆ ಬಿಜೆಪಿ ಪ್ರತಿಭಟನೆ ಯಾವಾಗ,ಬೇಟಿ ಬಚಾವೊ ಅಂದವರು ಈಗೆಲ್ಲಿದ್ದಾರೆ,ಮೋದಿ ಪರಿವಾರ ಹೀಗೆ ಅನೇಕ ಘೋಷಣೆಗಳ ಭಿತ್ತಿಪತ್ರ ಹಿಡಿದು ಮಹಿಳಾ ಕಾಂಗ್ರೆಸ್ ನವರು ಆಕ್ರೋಶ ವ್ಯಕ್ತಪಡಿಸಿದರು.