Wed. Jan 1st, 2025

ಸೈನಿಕ್ ಅಕಾಡೆಮಿಯಲ್ಲಿ ಮಕ್ಕಳಿಗೆ ಚಿತ್ರಕಲಾ ಪ್ರದರ್ಶನ ನೀಡಿದ ಪುನೀತ್

Share this with Friends

ಮೈಸೂರು, ಏ.12: ಹೆಸರಾಂತ ಕಲಾವಿದ ಪುನೀತ್ ವೈ ಎಸ್ ಅವರು ಸೈನಿಕ್ ಅಕಾಡೆಮಿಯಲ್ಲಿ ಮಕ್ಕಳಿಗೆ ಚಿತ್ರಕಲಾ ಪ್ರದರ್ಶನ ನೀಡಿ ರಂಜಿಸಿದರು.

ಮೈಸೂರಿನ ಬೆಳವಾಡಿಯ ಸಿಲಿಕಾನ್ ವ್ಯಾಲಿ ಬಡಾವಣೆ ಯಲ್ಲಿರುವ ಸೈನಿಕ್ ಅಕಾಡೆಮಿ(ರಿ) ಗೆ ಆಗಮಿಸಿದ ಪುನೀತ್ ವೈ ಎಸ್, ಬೇಸಿಗೆ ಶಿಬಿರದ ಮಕ್ಕಳಿಗೆ ಚಿತ್ರಕಲಾ ಪ್ರದರ್ಶನ ನೀಡಿ ಮುದ ನೀಡಿದರು.

ಅವರ ಕುಂಚದಲ್ಲಿ ಅರಳಿದ ಹಲವಾರು ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಇದರಲ್ಲಿ ಪೆನ್ಸಿಲ್ ಡ್ರಾಯಿಂಗ್, ಆಯಿಲ್ ಪೇಂಟಿಂಗ್ ಮತ್ತು ಪೊಟ್ರೇಟ್ ಡ್ರಾಯಿಂಗ್ ಗಳು ಸಹ ಇದ್ದವು.

ಇದಲ್ಲದೆ ಮಕ್ಕಳಿಗೆ ಚಿತ್ರಕಲೆಯ ಬಗ್ಗೆ ಮಾಹಿತಿ ನೀಡಿ ಸ್ಥಳದಲ್ಲಿಯೇ ಸುಂದರವಾದ ಕಲಾಕೃತಿಯನ್ನು ರಚಿಸಿ ಮಕ್ಕಳಿಗೆ ರಂಜಿಸಿ, ಸ್ಪೂರ್ತಿ ನೀಡಿದರು.

ಕಾರ್ಯಕ್ರಮದಲ್ಲಿ ಸೈನಿಕ್ ಅಕಾಡೆಮಿ ಮೈಸೂರು ಸಂಸ್ಥಾಪಕರಾದ ಮಾಜಿ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಶ್ರೀಧರ್ ಸಿ ಎಂ ಅವರು ತಮ್ಮ ಸಿಬ್ಬಂದಿಯೊಂದಿಗೆ ಕಲಾವಿದದ ಪುನೀತ್ ವರನ್ನು ಸನ್ಮಾನಿಸಿ ಗೌರವಿಸಿದರು.


Share this with Friends

Related Post