Sat. Nov 2nd, 2024

ಮರಗಳಿಗೆ ಡಬ್ಬಿ ಇಟ್ಟು ನೀರು,ಆಹಾರ ಹಾಕಿ ಪಕ್ಷಿ,ಪ್ರಾಣಿ ಸಂರಕ್ಷಣೆ

Share this with Friends

ಮೈಸೂರು,ಮಾ.12: ಮೈಸೂರಿನಲ್ಲಿ ತೂಗುದೀಪ ದರ್ಶನ್ ಅಭಿಮಾನಿ ಬಳಗದಿಂದ ಬೇಸಿಗೆ ದಗೆಯಿಂದ ಪಕ್ಷಿಪ್ರಾಣಿಗಳ ಸಂರಕ್ಷಿಸುವ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು.

ಮೈಸೂರಿನ ನ್ಯಾಯಾಲಯದ ಎದುರಿನ ಕೃಷ್ಣರಾಜ ಬೌಲೇಯಾರ್ಡ್ ರಸ್ತೆಯಲ್ಲಿನ ಮರಗಳಿಗೆ ಎರಡು ಡಬ್ಬಿಗಳನ್ನು ನೇತುಹಾಕಿ, ಒಂದು ಡಬ್ಬದಲ್ಲಿ ನೀರು ಮತ್ತೊಂದರಲ್ಲಿ ಆಹಾರ ಹಾಕಲಾಯಿತು.

ಡಬ್ಬಿಗಳನ್ನು ಮರಗಳಿಗೆ ಮೊಳೆಯನ್ನು ಹೊಡೆಯದೇ ನೇತುಹಾಕಿದ್ದು ವಿಶೇಷವಾಗಿತ್ತು.ಸುಮಾರು‌ 30 ಮರಗಳಿಗೆ ಡಬ್ಬಿಗಳನ್ನು ಅಳವಡಿಸಲಾಯಿತು.

ಈ ಅನಬಿಯಾನಕ್ಕೆ ಪರಿಸರ ಪ್ರೇಮಿ ಬನ್ನೂರು ಮಹೇಂದ್ರ ಸಿಂಗ್ ಕಾಳಪ್ಪ
ಡಬ್ಬಿಗಳಿಗೆ ಆಹಾರ-ಧಾನ್ಯ ಹಾಕುವ ಮೂಲಕ ಛಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮನೆಯ ಮೇಲೆ ಅಥವಾ ಮನೆಯ ಮುಂದೆ ಪಕ್ಷಿ ಪ್ರಾಣಿಗಳಿಗೆ ನೀರಿನ ಬಟ್ಟಲು ಇಡಿ ಎಂದು ದರ್ಶನ್ ಅವರು ಅಭಿಮಾನಿಗಳಿಗೆ ಸಂದೇಶ ನೀಡಿದ್ದರು, ಹಾಗಾಗಿ ಅಭಿಮಾನಿಗಳು ಅವರ ಕರೆಗೆ ಓಗೊಟ್ಟು ಪ್ರಾಣಿ ಪಕ್ಷಿ ಸಂರಕ್ಷಿಸಲು ನೀರಿನ ಬಟ್ಟಲನ್ನು ಮರಗಳಿಗೆ ಅಳವಡಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದೇವೆ ಎಂದು ತಿಳಿಸಿದರು.

ಸ್ವತಃ ದರ್ಶನ್ ರವರು ಪ್ರಾಣಿಪ್ರಿಯರು. ಮೃಗಾಲಯದಲ್ಲಿ ಪ್ರಾಣಿ ದತ್ತು ಸ್ವೀಕರಿಸುವುದು, ಪ್ರಾಣಿ-ಪಕ್ಷಿ ಸಾಕುವುದು ಅವರಿಗೆ ಅತೀ ಪ್ರೀತಿ ಎಂದು ಹೇಳಿದರು.

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ ಪ್ರಕಾಶ್ ಮಾತನಾಡಿ
ಸಕಲ ಜೀವರಾಶಿಗಳಲ್ಲಿ ದೇವರನ್ನು ಕಾಣು ಎಂದು ನಮ್ಮ ಪೂರ್ವಜರು ತಿಳಿಸಿದ್ದಾರೆ,
ಪಕ್ಷಿಗಳಿಗೆ ನವಣೆ, ಕಡಲೆ ಹೊಟ್ಟು, ಅಕ್ಕಿ ನುಚ್ಚು ನೀಡುವುದು ಒಳ್ಳೆಯದು ಎಂದು ಹೇಳಿದರು.

ಈ ವೇಳೆ ನೋಡಲು ಅಧಿಕಾರಿ ಎಸ್. ಕೆ ಮಿತಲ್, ಲಾಯರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಉಮೇಶ್, ದರ್ಶನ್ ಅಭಿಮಾನಿ ಬಳಗದ ಸಂಚಾಲಕರಾದ ಬೈರತಿ ಲಿಂಗರಾಜು, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಪ್ರಕಾಶ್ ಪ್ರಿಯದರ್ಶನ್, ಜಿ ರಾಘವೇಂದ್ರ, ಕಡಕೋಳ ಜಗದೀಶ್, ಎಸ್ ಎನ್ ರಾಜೇಶ್, ರಾಕೇಶ್, ಸುಚಿಂದ್ರ, ವಿಜಯ್ ನಾಯಕ್, ಭಾಸ್ಕರ್ , ಸಿದ್ದರಾಜು ಮತ್ತಿತರ ಅಭಿಮಾನಿಗಳು ಪಾಲ್ಗೊಂಡಿದ್ದರು.


Share this with Friends

Related Post