Tue. Dec 24th, 2024

ಪುಟ್ಟಕ್ಕನ ಮಕ್ಕಳು ಸೀರಿಯಲ್ ದೃಶ್ಯ ಹೋಲಿಸಿ ಪತ್ನಿಗೆ ಹಲ್ಲೆ:ಪ್ರಕರಣ ದಾಖಲು

Share this with Friends

ಮೈಸೂರು,ಮೇ.20: ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಪ್ರಸಾರವಾಗುತ್ತಿದ್ದ ದೃಶ್ಯವನ್ನ ಹೋಲಿಸಿ ಪತ್ನಿಯನ್ನ ಹಂಗಿಸಿ ಹಲ್ಲೆ ನಡೆಸಿದ ಪತಿ,ಅತ್ತೆ ಮಾವನ ವಿರುದ್ದ ಪ್ರಕರಣ ದಾಖಲಾಗಿದೆ.

ನಜರಬಾದ್ ಪೊಲೀಸ್ ಠಾಣೆಯಲ್ಲಿ ಪತಿ ಗಿರೀಶ್,ಮಾವ ವೆಂಕಟೇಶ್ ಹಾಗೂ ಅತ್ತೆ ಲಲಿತಮ್ಮ ವಿರುದ್ದ ಪ್ರಕರಣ ದಾಖಲಾಗಿದೆ.

ಗಿರೀಶ್ ಪತ್ನಿ ವಸಂತಕುಮಾರಿ ಪ್ರಕರಣ ದಾಖಲಿಸಿದ್ದಾರೆ.

ಮೈಸೂರಿನ ಗುರುರಾಜ ಬಡಾವಣೆಯಲ್ಲಿ ಪತಿ ಗಿರೀಶ್ ಹಾಗೂ ಅತ್ತೆ ಮಾವನ ಜೊತೆ ವಸಂತಕುಮಾರಿ ವಾಸವಿದ್ದಾರೆ.ಕೆಲಸ ಮಾಡದ ಗಿರೀಶ್ ಪತ್ನಿಯ ವಿರುದ್ದ ಅನುಮಾನ ವ್ಯಕ್ತಪಡಿಸುತ್ತಾ ಮಾನಸಿಕ ಕಿರುಕುಳ ನೀಡಿದ್ದಾನೆ.

ಕೆಲವು ದಿನಗಳ ಹಿಂದೆ ಜೀ ವಾಹಿನಿಯಲ್ಲಿ ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು ಸೀರಿಯಲ್ ನೋಡುತ್ತಿದ್ದಾಗ ಪುಟ್ಟಕ್ಕನ ಮಗಳು ಬೀದಿಗೆ ಬೀಳುವ ಸನ್ನಿವೇಶ ಬಂದಿದೆ.

ಆಗ ಗಿರೀಶ್ ನಾನು ಇಲ್ಲದೆ ಇದ್ದಿದ್ದರೆ ನೀನೂ ಸಹ ಬೀದಿಗೆ ಬೀಳುತ್ತಿದ್ದೆ ಎಂದು ಪತ್ನಿಗೆ ಹಂಗಿಸಿ ವ್ಯಂಗ್ಯವಾಡಿದ್ದಾನೆ.

ಇದೇ ವಿಚಾರದಲ್ಲಿ ದಂಪತಿ ನಡುವೆ ಮಾತಿನ ಚಕಮಕಿ ನಡೆದಿದೆ,ವಿಕೋಪಕ್ಕೆ ಹೋಗಿ ಪತ್ನಿ ಮೇಲೆ ಗಿರೀಶ್ ಹಲ್ಲೆ ನಡೆಸಿದ್ದಾನೆ.

ಪತಿ ನೀಡಿದ ಕಿರುಕುಳಕ್ಕೆ ಅತ್ತೆ ಮಾವ ಸಹ ಸಹಕರಿಸಿದ್ದಾರೆಂದು ವಸಂತಿಕುಮಾರಿ ದೂರಿದ್ದು ನಜರಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share this with Friends

Related Post