ಹಾವೇರಿ( ಬ್ಯಾಡಗಿ) : ರಾಜ್ಯ ಕಾಗ್ರೆಸ್ ಸರ್ಕಾರದ ನೂತನ ಪರೀಕ್ಷಾ ನೀತಿಯಿಂದ ಶಿಕ್ಷಣದ ಗುಣಮಟ್ಟ ಹಾಳಾಗುತ್ತಿದೆ ಎಂದು ಮಾಜಿ ಸಿಎಂ ಹಾಗು ಸಂಸದ ಬಸವರಾಜ ಬೊಮ್ಮಾಯಿ ಕಳವಳ ವ್ಯಕ್ತಪಡಿಸಿದ್ದು, ವರ್ಷಕ್ಕೆ ಮೂರು ವಾರ್ಷಿಕ ಪರೀಕ್ಷಾ ಪದ್ದತಿ ತಡೆಗಟ್ಟಿ ಶಿಕ್ಷಣಕ್ಕೆ ಆದ್ಯತೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಇಂದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರ ಗ್ರಾಮದಲ್ಲಿ ಏರ್ಪಡಿಸಿದ ಶಾಲಾ ವಾರ್ಷಿಕೋತ್ಸವದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು,ಈಗ ವರ್ಷದಲ್ಲಿ ಮೂರು ಬಾರಿ ಪರೀಕ್ಷೆ ಬರೆಯುವಂತೆ ಮಾಡಿದ್ದಾರೆ. ಈಗ ಒಟ್ಟು ಮೂವತ್ತು ಮಾರ್ಕ್ ಬಿದ್ದರೆ ಸಾಕು. ಅದರಲ್ಲಿ 16 ಅಂಕ ಆಂತರಿಕ ಮಾರ್ಕ್ ಕೊಡ್ತಾರಂತೆ. ಇದರಿಂದ ಶಿಕ್ಷಣ ಗುಣಮಟ್ಟ ಹಾಳಾಗುತ್ತದೆ ಇದನ್ನು ತಡೆಗಟ್ಟಿ ಶಿಕ್ಷಣಕ್ಕೆ ಆದ್ಯತೆ ಕೊಡಬೇಕು. ಉತ್ತರ ಕರ್ನಾಕದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಗುರುವ ಅನ್ಯಾಯ ಸರಿಪಡಿಸಬೇಕು ಎಂದು ಹೇಳಿದರು.
ಈ ಸರ್ಕಾರದಲ್ಲಿ ಹೆಂಗಿದೆ ಅಂದರೆ ಮೊದಲು ದೇತು ದೇತು ಅಂತಾರೆ, ದಿಲಾತು ದಿಲಾತು ಅಂತಾರೆ ನಂತರ ದೇನೆವಾಲಾಂಕೊ ದಿಕಾತು ಅಂತ ಹೇಳುತ್ತಾರೆ. ಉತ್ತರ ಕರ್ನಾಟಕ ಶಿಕ್ಷಣಕ್ಕೆ ಪ್ರಾಥಮಿಕ ಆದ್ಯತೆ ಕೊಡಬೇಕು. ನಮ್ಮ ಅವಧಿಯಲ್ಲಿ ವಿವೇಕ ಯೊಜನೆಯಿಂದ 30 ಸಾವಿರ ಶಾಲಾ ಕೊಠಡಿ ಕಟ್ಟಲು ಪ್ರಾರಂಭಿಸಿದ್ದೇವು. 9 ಸಾವಿರ ಶಾಲಾ ಕೊಠಡಿ ನಿರ್ಮಾಣ ಪೂರ್ಣಗೊಳ್ಳುತ್ತಿದೆ. ಈ ಸರ್ಕಾರ ಶಿಕ್ಷಣಕ್ಕೆ ಸರ್ಕಾರ ಹೆಚ್ಚು ಒತ್ತು ಕೊಡಬೇಕು ಎಂದರು.
ದಕ್ಷಿಣ ಕರ್ನಾಟಕದಲ್ಲಿ ಮಹಾರಾಜರ ಕಾಲದಿಂದ ಶಾಲೆ ಕಾಲೆಜುಗಳಿವೆ ಉತ್ತರ ಕರ್ನಾಟಕದಲ್ಲಿ ಐವತ್ತುರಷ್ಟು ಸರ್ಕಾರಿ ಶಾಲೆ ಕಡಿಮೆ ಇವೆ. ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಪ್ರೇಮಿಗಳು ದಾನಿಗಳು ಶಿಕ್ಷಣ ಪ್ರಾರಂಭಿಸಿದರು. ಧಾರವಾಡ ಮುರುಗಾ ಮಠ ನೂರು ವರ್ಷದಿಂದ ಶಿಕ್ಷಣ ಮತ್ತು ದಾಸೊಹ ಆರಂಭಿಸಿದೆ. ಹುಬ್ಬಳ್ಳಿಯ ಮೂರು ಸಾವಿರ ಮಠ, ಬಿಎಲ್ ಡಿಇ ಸಂಸ್ಥೆ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ, ಬಸವೇಶ್ವರ ವಿದ್ಯಾವರ್ಧಕ ಸಂಘ ಎಲ್ಲ ಸಂಸ್ಥೆಗಳು ಶಿಕ್ಷಣ ನೀಡುತ್ತ ಬಂದಿವೆ. ಈಗ ಉತ್ತರ ಕರ್ನಾಟಕದಲ್ಲಿ ದಕ್ಷಿಣ ಕರ್ನಾಟಕದಲ್ಲಿ ಇರುವಷ್ಟು ಶಾಲೆಗಳು ಉತ್ತರ ಕರ್ನಾಟಕದಲ್ಲಿ ಆಗಬೇಕು. ನಾನು ಹಾವೇರಿಗೆ ಯುನಿವರ್ಸಿಟಿ ಮಾಡಿದೆ ಅದರಿಂದ ಬ್ಯಾಡಗಿ, ರಾಣೆಬೆನ್ನೂರು, ಹಾನಗಲ್ ವಿದ್ಯಾರ್ಥಿ ಗಳು ಪಿಜಿ ಮಾಡುವಂತಾಯಿತು. ಅದರಲ್ಲೂ ಎಸ್ಸಿ, ಎಸ್ಟಿ ಮಕ್ಕಳು 50% ರಷ್ಟು ಇದ್ದಾರೆ. ಅವುಗಳನ್ನು ಬಂದ್ ಮಾಡಬೇಕು ಅಂತ ಸರ್ಕಾರ ಪ್ರಯತ್ನ ಮಾಡುತ್ತಿದೆ ಸರ್ಕಾರ ನಯಾ ಪೈಸೆ ಕೊಡುತ್ತಿಲ್ಲ. ನಮ್ಮ ರಾಜ್ಯದಲ್ಲಿ ನಾವು ಶಿಕ್ಷಣ ಕಲಿಸಲು ಮುಂದಾದರೆ, ಅದನ್ನು ಸರ್ಕಾರವೇ ನಿಲ್ಲಿಸಿದರೆ ನಮ್ಮ ಬಡ ಮಕ್ಕಳು ಎಲ್ಲಿಗೆ ಹೋಗಬೇಕು? ಎಂದು ಪ್ರಶ್ನಿಸಿದರು.

