Mon. Dec 23rd, 2024

ಮಧು ಬಂಗಾರಪ್ಪ ಹೇಳಿಕೆಗೆರಘು ಕೌಟಿಲ್ಯ ಕಿಡಿ

Share this with Friends

ಮೈಸೂರು, ಮೇ.28: ನನಗೆ ಹೇರ್ ಕಟ್ ಮಾಡೋರು ಫ್ರಿ ಇಲ್ಲ, ಬಿ.ವೈ ವಿಜಯೇಂದ್ರ ಫ್ರಿ ಇದ್ದರೇ ಬಂದು ಕಟಿಂಗ್ ಮಾಡಲಿ ಎಂಬ ಸಚಿವ ಮಧು ಬಂಗಾರಪ್ಪ ಹೇಳಿಕೆಗೆ ಬಿಜೆಪಿ ಮುಖಂಡ ರಘು ಕೌಟಿಲ್ಯ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಘು, ಶಿಕ್ಷಣ ಪರಿಶುಭ್ರತೆಗೆ ಕಪ್ಪು ಚುಕ್ಕೆ ಸಂಕೇತಿಸುವ ವಿಕೃತಿ ಅಳವಡಿಸಿಕೊಂಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಮುಖಕ್ಕೆ ಕನ್ನಡಿ ಹಿಡಿದು ತಿಳಿಹೇಳಿದ ನಮ್ಮ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಸಲಹೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಬದಲು ವಿಚಲಿತಗೊಂಡಂತೆ ಪ್ರತಿಕ್ರಿಯಿಸಿ,ಹೇರ್ ಕಟ್ ಮಾಡೋರು ಬಿಜಿ ಇದ್ದಾರೆ ಎಂದು ಹೇಳುವ ಮೂಲಕ ಸಂಕಷ್ಟಿತ ಶ್ರಮಿಕ ಜೀವಿಗಳಾದ ಕ್ಷೌರಿಕ ವೃತ್ತಿಶೀಲರ ಕುರಿತು ಹಗುರವಾಗಿ ಮಾತನಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಧು ಬಂಗಾರಪ್ಪನವರು ಕೇಶಾಲಂಕಾರ ಮಾಡಿಕೊಳ್ಳದಿದ್ದರೂ ಪರವಾಗಿಲ್ಲ ಹೆಂಡದ ಮಾರಯ್ಯ ವೃತ್ತಿ ತ್ಯಜಿಸಿ ಶರಣ ಶ್ರೇಷ್ಠನಾಗಲು ಪ್ರಭಾವಬೀರಿದ ಅಣ್ಣ ಬಸವಣ್ಣನವರ ಬಲಗೈಯಂತಿದ್ದ ಮಹಾಶರಣ ಹಡಪದ ಅಪ್ಪಣ್ಣನ ಸಮಾಜವೂ ಸೇರಿದಂತೆ ಇತರ ವೃತ್ತಿನಿರತ ಕಾಯಕ ಸಮುದಾಯಗಳನ್ನು ಗೌರವದಿಂದ ಕಾಣುವ ಸಂಸ್ಕಾರ ಬೆಳಸಿಕೊಳ್ಳಲಿ ಎಂದು ರಘು ಕೌಟಿಲ್ಯ ಸಲಹೆ ನೀಡಿದ್ದಾರೆ.


Share this with Friends

Related Post