Thu. Mar 5th, 2026

ರಾಹುಲ್ ಗಾಂಧಿಗೆ ರಾಹುಕಾಲ,ಸಿದ್ದರಾಮಯ್ಯಗೆ ಶುಕ್ರದೆಶೆ: ಅಶೋಕ್

Share this with Friends

ಬೆಂಗಳೂರು: ಬಿಹಾರ ಚುನಾವಣಾ ಫಲಿತಾಂಶದ ನಂತರ ಕಾಂಗ್ರೆಸ್ ನ ಇಂದಿನ ಭವಿಷ್ಯವನ್ನು ನೋಡುವುದಾದರೆ ರಾಹುಲ್ ಗಾಂಧಿಗೆ ರಾಹುಕಾಲ,ಸಿದ್ದರಾಮಯ್ಯಗೆ ಶುಕ್ರದಶೆ,ಡಿಕೆ ಶಿವಕುಮಾರ್ ಗೆ ಮನೆಗೆ ಹೋಗುವ ಕಾಲ ಬಂದಿದೆ ಎಂದು ಪ್ರತಿಪಕ್ಷ ನಾಯಕ‌ಆರ್.ಅಶೋಕ್ ಲೇವಡಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯ ಕಾಂಗ್ರೆಸ್ ನಲ್ಲಿ ನವೆಂಬರ್ ಕ್ರಾಂತಿಯಾಗಲಿದೆ ಎಂದಿದ್ದೆವು ಒಂದು ವೇಳೆ ಬಿಹಾರದ ಚುನಾವಣೆ ಗೆದ್ದಿದ್ದರೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗುತ್ತಿತ್ತು ಆದರೆ ಈಗ ಡಿಕೆ ಶಿವಕುಮಾರ್ ಗೆ ನಾಮ ಹಾಕಿದಂತಾಗಿದೆ ಒಟ್ಟಿನಲ್ಲಿ ಸಿದ್ದರಾಮಯ್ಯ ಪಕ್ಷದಲ್ಲಿ ಬಹಳ ಸ್ಟ್ರಾಂಗ್ ಆಗುತ್ತಿದ್ದಾರೆ. ರಾಹುಲ್ ಗಾಂಧಿ ಅವರನ್ನೇ ಪುಂಗಿ ಊದಿಕೊಂಡು ಹಾವಾಡಿಸುವ ರೀತಿ ಆಡಿಸುತ್ತಿದ್ದಾರೆ. ಇಷ್ಟು ದಿನ ರಾಹುಲ್ ಗಾಂಧಿ ಮಾತನ್ನು ಸಿದ್ದರಾಮಯ್ಯ ಕೇಳಬೇಕಿತ್ತು ಆದರೆ ಇನ್ಮುಂದೆ ಸಿದ್ದರಾಮಯ್ಯ ಮಾತನ್ನು ರಾಹುಲ್ ಗಾಂಧಿ ಕೇಳಬೇಕಾಗಲಿದೆ ಇದು ರಾಹುಲ್ ಗಾಂಧಿಗೆ ರಾಹುಕಾಲ,ಸಿದ್ದರಾಮಯ್ಯಗೆ ಶುಕ್ರದೆಶೆ, ಡಿಕೆ ಶಿವಕುಮಾರ್ ಗೆ ಮನೆಗೆ ಹೋಗುವ ಕಾಲ ಇದು ಇವತ್ತಿನ ಜ್ಯೋತಿಷ್ಯ ಎಂದರು.

ಚುನಾವಣೆಗೂ ಮೊದಲು ವೋಟ್ ಚೋರಿ ವೋಟ್ ಚೋರಿ ಎಂದು ಆರೋಪಿಸಿದರು ಅವರ ಆರೋಪ ಬೋಗಸ್ ಎಂದು ಸ್ಪಷ್ಟವಾಗಿ ಬಿಹಾರದ ಜನ ಹೇಳಿದ್ದಾರೆ. ಮತದಾರರ ಪಟ್ಟಿಯ ಎಸ್ಐಆರ್ ನಲ್ಲಿ ಎರಡೆರಡು ಕಡೆ ಹೆಸರು  ಯಾರ್ಯಾರ ಹೆಸರಿತ್ತೋ, ಹೊರಗಡೆಯಿಂದ ಯಾರು ಬಂದಿದ್ದರೋ,ಯಾರು ನಿಧನರಾಗಿದ್ದಾರೋ ಆ ಹೆಸರುಗಳನ್ನ ಡಿಲೀಟ್ ಮಾಡಿದ್ದಾರೆ ಒಂದು ವೇಳೆ ಅರ್ಹ ಮತದಾರರ ಹೆಸರು ಕೈಬಿಟ್ಟಿದ್ದರೆ ಆಗಲೇ ಪ್ರಶ್ನಿಸಬಹುದಿತ್ತು ಅದನ್ನು ಬಿಟ್ಟು ಈಗ ಪ್ರಶ್ನಿಸುತ್ತಿದ್ದಾರೆ ಸೋತ ಮೇಲೆ ಈಗ ಹೇಳಿಕೆ ನೀಡಿದರೆ ಯಾರು ನಂಬುವುದಿಲ್ಲ ಎಂದರು.

ಬಿಹಾರ ಚುನಾವಣೆ ಬಳಿಕ ಕಾಂಗ್ರೆಸ್ ದೇಶದಲ್ಲಿ ಮಕಾಡೆ ಮಲಗಿದೆ ಅವರಿಗೆ ಇರುವುದು ಕರ್ನಾಟಕದಲ್ಲಿನ ಎರಡು ವರ್ಷ ಮಾತ್ರ ಅಷ್ಟರಲ್ಲಿ ಲೂಟಿ ಮಾಡಬೇಕು, ಇವರಿಗೆ ಲೂಟಿ ಹೊಡೆಯಲು ಮತ್ತೆ ಅವಕಾಶ ಸಿಗಲ್ಲ ಬಿಹಾರ ಜನತೆಯ ತೀರ್ಪಿಗೆ ವೋಟ್ ಚೋರಿ ಎನ್ನುವ ಹೆಸರೇಳಿ ಇಡೀ ಬಿಹಾರ ಜನತೆಗೆ ಅವಮಾನ ಮಾಡುತ್ತಿದ್ದೀರಾ ಕೂಡಲೇ ಬಿಹಾರ ಮತದಾರರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ, ತೆಲಂಗಾಣದಲ್ಲಿ ಗೆದ್ದಾಗ ಸಂಭ್ರಮಾಚರಣೆ, ಬಿಜೆಪಿ ಗೆದ್ದ ಕಡೆ ವೋಟ್ ಚೋರಿ. ನಿಮ್ಮದು ಡಬಲ್ ಸ್ಟ್ಯಾಂಡ್, ಬಿಹಾರದ ಜನತೆ ಇದಕ್ಕೆ ಉತ್ತರಿಸಿದ್ದಾರೆ,ಜನತೆ ನಿಮಗೆ ಪಾಠ ಕಲಿಸಿದ್ದಾರೆ. ಇನ್ನಾದರೂ ಬುದ್ಧಿ ಕಲಿಯಿರಿ ಎಂದರು.

 


Share this with Friends

Related Post