Fri. Dec 27th, 2024

ರಾಹುಲ್ ಗಾಂಧಿ ಜನ್ಮದಿನ: ಮೈಸೂರಿನಲ್ಲಿ ಸಿಹಿ ವಿತರಿಸಿ ಸಂಭ್ರಮ

Share this with Friends

ಮೈಸೂರು,ಜೂ.19: ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಜನುಮದಿನದ ಪ್ರಯುಕ್ತ ಮೈಸೂರಿನಲ್ಲಿ ಅಭಿಮಾನಿಗಳು ಸಿಹಿ ವಿತರಿಸಿ ಸಂಭ್ರಮಿಸಿದರು.

ವಿಜಯನಗರದ ಸಂಸದ ಸುನಿಲ್ ಬೋಸ್ ಅವರ ವಿಜಯನಗರದಲ್ಲಿರುವ
ಕಚೇರಿಯಲ್ಲಿ ರಾಹುಲ್ ಗಾಂಧಿ ಜನುಮದಿನದ ಪ್ರಯುಕ್ತ ಅವರ ಭಾವಚಿತ್ರ
ಹಿಡಿದು ಸಿಹಿ ಹಂಚಿ ಸಂಭ್ರಮಿಸಿದರು.

ಈ ವೇಳೆ ಸುನಿಲ್ ಬೋಸ್ ಮಾತನಾಡಿ,
ಭಾರತ್ ಜೋಡೋ ಯಾತ್ರೆ ಹಾಗೂ ಭಾರತ್ ನ್ಯಾಯ್ ಯಾತ್ರೆ ಮೂಲಕ ದೇಶದ ಉದ್ದಗಲಕ್ಕೂ ಜನರ ನಡುವೆ ಪ್ರೀತಿ ಮತ್ತು ಭಾಂದವ್ಯವನ್ನು ಹಂಚಿ ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಡಿ ಭಾರತದ ಅಸ್ಮಿತೆಗೆ ಅಪರಿಮಿತ ಕೊಡುಗೆ ನೀಡಿದ ಹೆಮ್ಮೆಯ ನಾಯಕ ರಾಹುಲ್ ಗಾಂಧಿ ಅವರೇ ನಮಗೆ ಆದರ್ಶ ನಾಯಕ ಎಂದು ತಿಳಿಸಿದರು.

ಕೆಪಿಸಿಸಿ ಸದ್ಯಸ ನಜರ್ಬಾದ್ ನಟರಾಜ್, ಸಿದ್ದರಾಮಯ್ಯ ಬ್ರಿಗೇಡ್ ರಾಜ್ಯಾಧ್ಯಕ್ಷ ಹಿನಕಲ್ ಉದಯ್, ವರುಣ ಮಹದೇವ್, ಲಕ್ಷ್ಮೀನಾರಾಯಣ್,
ಕಾಲಿಹುಂಡಿ ಶಂಕರ್, ಹರೀಶ್ ಮತ್ತಿತರರು ಹಾಜರಿದ್ದರು.


Share this with Friends

Related Post