Tue. Dec 24th, 2024

ಮಳೆ ಅನಾಹುತ:ವಲಯ ಮಟ್ಟದಲ್ಲಿ ಸಹಾಯವಾಣಿ ಸ್ಥಾಪನೆಯಾಗಲಿ 

Share this with Friends

ಮೈಸೂರು, ಮೇ.6: ಮೈಸೂರಿನಲ್ಲಿ ಇತ್ತೀಚೆಗೆ ಜೋರು ಗಾಳಿ ಮಳೆಯಿಂದಾಗಿ ವಿದ್ಯುತ್ ಕಂಬಗಳು ಧರೆಗುಳಿದ ಕಾರಣ ಹಲವಾರು ಬಡಾವಣೆ ವಾಸಿಗಳು ತೊಂದರೆಪಟ್ಟಿದ್ದಾರೆ.

ಜತೆಗೆ ಮರಗಳು, ಕೊಂಬೆಗಳು ಭಾರಿ ಪ್ರಮಾಣದಲ್ಲಿ ತುಂಡಾಗಿ ಬಿದ್ದಿವೆ ಹಾಗಾಗಿ ವಿದ್ಯುತ್ ಪೊರೈಕೆ ನೀರು ಸರಬರಾಜು ವ್ಯತ್ಯಯವಾಗಿ ನಗರ ಬಡಾವಣೆಯ ನಿವಾಸಿಗಳು ಸಂಕಷ್ಟದಲ್ಲಿದ್ದಾರೆ.

ಪಾದಚಾರಿಗಳು ಮತ್ತು ವಾಹನ ಚಾಲಕರು ಸುರಕ್ಷಿತವಾಗಿ ಸಂಚರಿಸಲು ಮತ್ತು ಮನೆಯಲ್ಲಿ ಆಕ್ಸಿಜನ್ ಕಾನ್ಸನ್ಟ್ರೇಟರ್ ಗಾಗಿ ವಿದ್ಯುತ್ ಸಮಸ್ಯೆ ಪರದಾಡುವಂತಾಯಿತು.

ಕುಡಿಯುವ ನೀರು ಸಮರ್ಪಕವಾಗಿ ಬಡಾವಣೆಗಳಿಗೆ ಬಾರದೆ ತೊಂದರೆಯಾಗಿದೆ, ಒಳಚರಂಡಿ ನೀರು ರಸ್ತೆಯ ಮೇಲೆ ಹರಿದಿದೆ,ಅಲ್ಲದೆ ಮಳೆನೀರು ಮೋರಿಗಳೆಲ್ಲವೂ ಮುಚ್ಚಿಹೋಗಿವೆ.

ಮೇ 8 ರಿಂದ ಭಾರಿ ಮಳೆ ಬರುವ ಸಂಭವವಿದೆ ಎಂದು ಹವಮಾನ ಇಲಾಖೆ ಮನ್ಸೂಚನೆ ನೀಡಿದ್ದು ನಾಗರೀಕರ ಸಹಾಯಕ್ಕಾಗಿ ಸಕಾಲಕ್ಕೆ ನಗರಮಟ್ಟದಲ್ಲಿ ಸಹಾಯವಾಣಿಯ ಅವಶ್ಯಕವಿದೆ ಎಂದು ಸಾಮಾಜಿಕ ಹೋರಾಟಗಾರ‌ ಅಜಯ್ ಶಾಸ್ತ್ರಿ
ಮನವಿ ಮಾಡಿದ್ದಾರೆ.

ನಗರಪಾಲಿಕೆ, ಚೆಸ್ಕಾಂ, ವಾಣಿವಿಲಾಸ ವಾಟರ್ ವರ್ಕ್ಸ್, ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ಆರಕ್ಷಕ ಇಲಾಖೆ, ಸಂಘ ಸಂಸ್ಥೆಗಳೊಂದಿಗೆ ನಗರ ಸಹಾಯವಾಣಿಯನ್ನ ಸ್ಥಾಪಿಸಿದರೆ ಮುಂಜಾಗ್ರತ ಕ್ರಮವಾಗಿ, ಅವಘಡಗಳು ನಷ್ಟಗಳನ್ನ ತಡೆಗಟ್ಟಬಹುದು,ನಗರಪಾಲಿಕೆ ವಲಯಮಟ್ಟದಲ್ಲಿ ನಗರ ಸಹಾಯವಾಣಿ ನಿಯೋಜಿಸಲು ಮುಂದಾಬೇಕೆಂದು ಅವರು ಹೇಳಿದ್ದಾರೆ.

https://www.facebook.com/share/p/voU1mi9RDe8XoH6S/?mibextid=oFDknk

Share this with Friends

Related Post