ಮೈಸೂರು,ಜು.13: ರಾಕೇಶ್ ಸಿದ್ದರಾಮಯ್ಯ ಹುಟ್ಟುಹಬ್ಬದ ಪ್ರಯುಕ್ತ ಮೈಸೂರಿನಲ್ಲಿ ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಯಿತು.
ನಗರದ ಟೌನ್ ಹಾಲ್ ನಲ್ಲಿ ಶ್ರೀನಿವಾಸ್ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆ ವತಿಯಿಂದ ರಾಕೇಶ್ ಸಿದ್ದರಾಮಯ್ಯ ಹುಟ್ಟು ಹಬ್ಬದ ಅಂಗವಾಗಿ ಪೌರ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ 10000 ಬಟ್ಟೆ ಬ್ಯಾಗ್ ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಶ್ರೀನಿವಾಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ವೆಂಕಟೇಶ್, ರಾಖೇಶ್ ಸಿದ್ದರಾಮಯ್ಯ ಅವರು ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಜನಸೇವೆಯ ಮೂಲಕ ಯುವಕರ ಸ್ಫೂರ್ತಿಯಾಗಿ ರಾಜ್ಯದ ವಿವಿದೆಡೆ ಲಕ್ಷಾಂತರ ಅಭಿಮಾನಗಳನ್ನು ಹೊಂದಿದ್ದರು ಎಂದು ಸ್ಮರಿಸಿದರು.
ಇನ್ನೇನು ಒಬ್ಬ ಯಶಸ್ವಿ ರಾಜಕರಣಿಯಾಗುವ ಸಂದರ್ಭದಲ್ಲಿ ಇಹಲೋಕ ತ್ಯಜಿಸಿ ಸಾವಿರಾರು ಅಭಿಮಾನಿಗಳನ್ನು ಅಗಲಿದರು ಎಂದು ಹೇಳಿದರು.
ಅವರು ಸದಾ ನಮ್ಮಜೊತೆಯಲ್ಲಿದ್ದಾರೆ, ಅವರ ಸ್ಮರಣೆಯಲ್ಲಿ ಪ್ರತಿವರ್ಷ ಸಾಮಾಜಿಕ ಸೇವ ಕಾರ್ಯಗಳ ಮೂಲಕ ಸ್ಮರಿಸುತ್ತಿರುವುದು ಶ್ಲಾಘನೀಯ ಕೆಲಸ ಎಂದು ಹೇಳಿದರು.
300ಕ್ಕೂ ಹೆಚ್ಚು ಪೌರಕಾರ್ಮಿಕರು ಆರೋಗ್ಯ ತಪಾಸಣೆ ಶಿಬಿರದ ಸದ್ಬಳಕೆ ಮಾಡಿಕೊಂಡರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಬಿರಿಹುಂಡಿ ಬಸವಣ್ಣ, ಆರಿಫ್, ಪ್ರಭು, ಹರೀಶ್, ಸಿಂಡಿಕೇಟ್ ಸದಸ್ಯರಾದ ಬಸವರಾಜು, ವರುಣ ಮಹಾದೇವ್, ಲೋಕೇಶ್,ಉದಯ್,ದಕ್ಷಿಣ ಮೂರ್ತಿ, ಮತ್ತಿತರರು ಹಾಜರಿದ್ದರು.