ಮೈಸೂರು, ಜೂ.10: ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡ ಲಕ್ಷ್ಮಣ್ ಅವರು ಮತದಾರರನ್ನು ಸ್ಯಾಡಿಸ್ಟ್ ಎಂದು ಹೇಳಿ ಅವಮಾನ ಮಾಡಿದ್ದಾರೆಂದು ಬಿಜೆಪಿ ಯುವ ಮೋರ್ಚ ಅಧ್ಯಕ್ಷ
ರಾಕೇಶ್ ಗೌಡ ಖಂಡಿಸಿದ್ದಾರೆ.
ಲಕ್ಷ್ಮಣ್ ಅವರು ಚುನಾವಣೆಯಲ್ಲಿ ಪರಾಭವ ಗೊಂಡ ನಂತರ ನಾಲಿಗೆ ಮತ್ತು ಬುದ್ಧಿ ಸ್ಥಿಮಿತ ಕಳೆದುಕೊಂಡಿದೆ, ರಾಜ್ಯ ಸರ್ಕಾರದಿಂದ ನೀಡುತ್ತಿದ್ದ ಸವಲತ್ತನ್ನು ನಿಲ್ಲಿಸಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದರು, ಸವಲತ್ತುಗಳನ್ನು ಜನ ಕೇಳಿದ್ದರೆ ಎಂದು ರಾಕೇಶ್ ಗೌಡ ಪ್ರಶ್ನಿಸಿದ್ದಾರೆ
ಮೈಸೂರು ಮತ್ತು ಕೊಡಗು ಕ್ಷೇತ್ರದ ಜನರು ಸ್ವಾಭಿಮಾನಿಗಳು, ನಿಮ್ಮ ಬಿಟ್ಟಿಭಾಗ್ಯಗಳಿಗೆ ಅಪೇಕ್ಷೆ ಪಟ್ಟವರಲ್ಲ, ನಿಮ್ಮ ಹತ್ತಿರ ಗ್ಯಾರಂಟಿ ಕೊಡಿ ಎಂದು ಯಾರೂ ಕೇಳಿರಲಿಲ್ಲ ಎಂದು ಟೀಕಿಸಿದ್ದಾರೆ.
ನಾವು ಕಟ್ಟುವ ತೆರಿಗೆಯಿಂದ ರಾಜ್ಯ ಸರ್ಕಾರ ಸೌಲತ್ತುಗಳನ್ನು ನೀಡುತ್ತಿದೆ, ಯಾವುದನ್ನು ಉಚಿತವಾಗಿ ನಾವೇನು ಪಡೆದುಕೊಳ್ಳುತ್ತಿಲ್ಲ.
ಮೈಸೂರು ಮತ್ತು ಕೊಡಗು ಮತದಾರರಿಗೆ ಅವಮಾನ ಮಾಡಿದ ಲಕ್ಷ್ಮಣ್ ರವರನ್ನು, ಗಡಿಪಾರು ಮಾಡಬೇಕು, ಹಾಗೂ ಕ್ಷಮೆ ಕೇಳಬೇಕು ಎಂದು ರಾಕೇಶ್ ಆಗ್ರಹಿಸಿದ್ದಾರೆ.
ಚುನಾವಣೆಯ ಕೇಂದ್ರಬಿಂದುವಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಾ ರಾಜೀನಾಮೆ ಕೊಡಬೇಕೆಂದು ಮೈಸೂರು ಯುವ ಮೋರ್ಚ ತಂಡ ಒತ್ತಾಯಿಸಿದೆ.