ಬೆಂಗಳೂರು : ನೀವು ರಾಜಕೀಯ ಲಾಭಕ್ಕಾಗಿ ಕೇವಲ ಹಿಂದೂ ವಿರೋಧಿ ಧೋರಣೆ ಎಂದು ನಮ್ಮ ಸರ್ಕಾರವನ್ನು ದೂರುತ್ತಿದ್ದೀರಿ. ಒರಿಜಿನಲ್ ಹಿಂದೂಗಳು ನಾವು.. ಇಷ್ಟು ವರ್ಷ ದೇವಸ್ಥಾನಗಳನ್ನು, ಹಿಂದುಗಳನ್ನು ಕಾಪಾಡಿಕೊಂಡು ಬಂದಿದ್ದು ಕಾಂಗ್ರೆಸ್ ಸರ್ಕಾರಗಳೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸಚಿವ ರಾಮಲಿಂಗಾ ರೆಡ್ಡಿ ತಿರುಗೇಟು ನೀಡಿದ್ದಾರೆ.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ವಿಧೇಯಕ- 2024 ಮಂಡನೆಗೆ ರಾಜ್ಯ ಬಿಜೆಪಿ ಟೀಕಿಸಿದೆ. ರಾಜ್ಯದಲ್ಲಿ ಸರಣೀ ರೂಪದಲ್ಲಿ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿರುವ ಕಾಂಗ್ರೆಸ್ ಸರ್ಕಾರ ಇದೀಗ ತನ್ನ ಬರಿದಾಗಿರುವ ಬೊಕ್ಕಸ ತುಂಬಿಸಿಕೊಳ್ಳಲು ಹಿಂದೂ ದೇವಾಲಯಗಳ ಆದಾಯದ ಮೇಲೂ ವಕ್ರ ದೃಷ್ಟಿ ಬೀರಿ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆದು ಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟೀಕಿಸಿದ್ದಾರೆ.
ಇದಕ್ಕೆ ತಿರುಗೇಟು ನೀಡಿದ ಸಚಿವ ರಾಮಲಿಂಗಾ ರೆಡ್ಡಿ ನೀವು ರಾಜಕೀಯ ಲಾಭಕ್ಕಾಗಿ ಕೇವಲ ಹಿಂದೂ ವಿರೋಧಿ ಧೋರಣೆ ಎಂದು ನಮ್ಮ ಸರ್ಕಾರವನ್ನು ದೂರುತ್ತಿದ್ದೀರಿ. ಒರಿಜಿನಲ್ ಹಿಂದೂಗಳು ನಾವು.. ಇಷ್ಟು ವರ್ಷ ದೇವಸ್ಥಾನಗಳನ್ನು, ಹಿಂದುಗಳನ್ನು ಕಾಪಾಡಿಕೊಂಡು ಬಂದಿದ್ದು ಕಾಂಗ್ರೆಸ್ ಸರ್ಕಾರಗಳೇ ಎಂದು ಟಾಂಗ್ ನೀಡಿದ್ದಾರೆ.
ನಮ್ಮ ಸರ್ಕಾರವು ಯಾವ ಧರ್ಮದ ಮೇಲು ವಕ್ರ ದೃಷ್ಟಿ ಬೀರುವುದಿಲ್ಲ, ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಬಾಳುವುದೇ ನಮ್ಮ ಕಾಂಗ್ರೆಸ್ ಸರ್ಕಾರದ ಗುರಿ ಸರ್ವ ಜನಾಂಗದ ಶಾಂತಿಯ ತೋಟ ಕರ್ನಾಟಕ. ನೀವು ಹೇಳುತ್ತಿರುವುದು ಬೊಕ್ಕಸ ತುಂಬಿಸಿಕೊಳ್ಳಲು ಹಿಂದೂ ದೇವಾಲಯಗಳ ಆದಾಯ ಮೇಲೆ ವಕ್ರದೃಷ್ಟಿ ಕಾಂಗ್ರೆಸ್ ಸರಕಾರ ಬೀರಿದೆ ಅಂತ 2008 ರಿಂದ 2013, 2019 ರಿಂದ 2023ರ ವರೆಗೂ ನಿಮ್ಮ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದು ಆಗ ಕೂಡ ಈ ವಿದೇಯಕ ಅನುಷ್ಠಾನದಲ್ಲಿತ್ತು ಆಗ ಕೂಡ ನಿಮ್ಮ ಸರ್ಕಾರವು ಹಿಂದುಗಳ ಮೇಲೆ ವಕ್ರ ಕಣ್ಣು ಬೀರಿ ಆದಾಯ ಮಾಡಿಕೊಂಡಿದ್ದೀರಾ? ಆಗ ಕೂಡ ನಿಮ್ಮ ಆಡಳಿತದಲ್ಲಿ ದರಿದ್ರ ತನವಿತ್ತೆ? ಏಕೆಂದರೆ ಈ ವಿದಾಯಕ 2001 ರಿಂದ ಜಾರಿಯಲ್ಲಿದೆ. ಯಾವ ಧರ್ಮದ ಆದಾಯದ ಮೇಲು ನಮ್ಮ ಕಾಂಗ್ರೆಸ್ ಸರ್ಕಾರದ ಕಣ್ಣು ಬೀಳುವುದಿಲ್ಲ ಎಲ್ಲರೂ ಒಗ್ಗಟ್ಟಾಗಿ ಸಂತೋಷದಿಂದ ಬಾಳುವುದೇ ಕಾಂಗ್ರೆಸ್ ಸರ್ಕಾರದ ಗುರಿ. ನೀವು ಎರಡು ಬಾರಿ ಆಡಳಿತದಲ್ಲಿದ್ದಾರಲ್ಲ ಆಗ ಕೂಡ ಭಕ್ತರ ಹಣದಲ್ಲಿ ಬಿಜೆಪಿ ಸರ್ಕಾರ ಪಾಲು ಕಸಿಯುವ ಕೆಲಸ ಮಾಡಿತ? ನಿಮ್ಮ ಸುಳ್ಳು ಮೋಸದ ಪ್ರಚಾರವನ್ನು ರಾಜ್ಯದ ಜನತೆ ನಂಬುವುದಿಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ಟಾಂಗ್ ನೀಡಿದ್ದಾರೆ.
ಬಿಜೆಪಿಗೆ ಅನುಕೂಲವಾದಾಗ ಮಾತ್ರ ಹಿಂದುತ್ವ :
ಬಿಜೆಪಿಗೆ ಅನುಕೂಲವಾದಾಗ ಮಾತ್ರ ಹಿಂದುತ್ವ. ಎಷ್ಟೂಂತ ವಿಷ ತುಂಬುತ್ತಾರೆ, ವಿಷ ತುಂಬುವುದಕ್ಕೂ ಇತಿಮಿತಿ ಇರಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.ಜಗತ್ತಿನಲ್ಲಿ ಸುಳ್ಳು ಎಲ್ಲಿದೆ ಎಂದು ಪ್ರಶ್ನೆ ಮಾಡಿದರೆ, ಆ ಸುಳ್ಳು ಬಿಜೆಪಿಯವರ ಬಾಯಲ್ಲಿ ಸಿಗುತ್ತದೆ.ಬಿಜೆಪಿಯವರು ಯಾವ ಮಟ್ಟಕ್ಕೆ ಇಳಿದಿದ್ದಾರೆ ಎಂದರೆ ಏನೂ ಬೇಕಾದರೂ ಹೇಳಲು ತಯಾರಾಗಿದ್ದಾರೆ.
ಒಂದು ಕೋಟಿ ಆದಾಯ ಇರುವ ದೇವಸ್ಥಾನಗಳು 10 % ಧಾರ್ಮಿಕ ಪರಿಷತ್ ಗೆ ನೀಡುವಂತೆ ಮಾಡಿದ್ದೇವೆ. ಬಿಜೆಪಿ ವಿಜಯೇಂದ್ರ ಅವರಿಗೆ ಕಳಕಳಿ ಕಾಳಜಿ ಇದ್ದಿದ್ದರೆ ಯಡಿಯೂರಪ್ಪ, ಬೊಮ್ಮಾಯಿ, ಶೆಟ್ಟರ್, ಸದಾನಂದಗೌಡ ಸಿಎಂ ಆಗಿದ್ದರು. ಆಗ ಯಾಕೆ ಕಾನೂನು ವಾಪಸ್ ಪಡೆಯಲಿಲ್ಲ, ರದ್ದು ಮಾಡಲಿಲ್ಲ ಎಂದು ಪ್ರಶ್ನಿಸಿದರು.ಮಾಜಿ ಸಚಿವ ಸುನೀಲ್ ಕುಮಾರ್ ಉಡುಪಿಯಲ್ಲಿ ಪರಶುರಾಮರನ್ನು ಅರ್ಧಕ್ಕೆ ನಿಲ್ಲಿಸಿ ಬಿಟ್ಟಿದ್ದಾರೆ. ಪರಶುರಾಮನ ಮೂರ್ತಿಗೆ ಭುಜಾನು ಇಲ್ಲ, ಸೊಂಟನೂ ಇಲ್ಲ. ಅದರಲ್ಲಿ ಬಿಜೆಪಿಯವರು ಭ್ರಷ್ಟಾಚಾರ ಮಾಡಿದ್ದಾರೆ. ಇವಾಗ ಇವರುದೇವರ ಬಗ್ಗೆ ಮಾತಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.